ವಿಶ್ವ ಹೃದಯ ದಿನ: ಜೀವ ರಕ್ಷಕ BLS ತರಬೇತಿ ಪಡೆದ ಪತ್ರಕರ್ತರು: ಫೋರ್ಟಿಸ್
ಬೆಂಗಳೂರು, ಸೆಪ್ಟಂಬರ್ 24: ಹಠಾತ್ ಹೃದಯಾಘಾವಾತದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಸಂಬಂಧ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (CPR) ಮಾಡುವುದು ಸೇರಿದಂತೆ ತುರ್ತು ಆರೋಗ್ಯ ಚಿಕಿತ್ಸೆಗಳ ಕುರಿತು ಪತ್ರಕರ್ತರಿಗೆ ವಿಶ್ವ ಹೃದಯ ದಿನ ಅಂಗವಾಗಿ ತರಬೇತಿ ನೀಡಲಾಯಿತು.
ಫೋರ್ಟಿಸ್ ಆಸ್ಪತ್ರೆ ವತಿಯಿಂದ ಬೆಂಗಳೂರಿನ ಫ್ರೆಸ್‌ಕ್ಲಬ್‌ನಲ್ಲಿ ಸುಮಾರು 100 ಪತ್ರಕರ್ತರಿಗೆ ಬೇಸಿಕ್ ಲೈಫ್ ಸಪೋರ್ಟ್ (BLS) ತರಬೇತಿ ಕಾರ್ಯಾಗಾರ ನಡೆಸಿತು. ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯ ವತಿಯಿಂದ 'ವಿಶ್ವ ಹೃದಯ ದಿನ'ದ ಪೂರ್ವಭಾವಿಯಾಗಿ ಸಿಪಿಆರ್ ಸೇರಿದಂತೆ ಬಿಎಲ್‌ಎಸ್ ಪ್ರಾಯೋಗಿಕ ತರಬೇತಿಯನ್ನು ನುರಿತ ಹೃದಯತಜ್ಞರು ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. BLS ಒಂದು ಪ್ರಾಯೋಗಿಕ ಜೀವ ಉಳಿಸುವ ತಂತ್ರವಾಗಿದೆ. ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಜೀವನವನ್ನು ಉಳಿಸಿಕೊಳ್ಳಲು ಅಗತ್ಯವಾದ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (CPR), ಪ್ರಥಮ ಚಿಕಿತ್ಸೆ ಮತ್ತು ಇತರ ನಿರ್ಣಾಯಕ ಕೌಶಲ್ಯಗಳನ್ನು ತರಬೇತಿಯಲ್ಲಿ ಹೇಳಿಕೊಡಲಾಯಿತು.
ಜೀವ ಉಳಿಸುವ ಪ್ರಾಯೋಗಿಕ ತರಬೇತಿ ಪ್ರದರ್ಶನ
ತರಬೇತಿ ಕಾರ್ಯಕ್ರಮದಲ್ಲಿ ಮಾಧ್ಯಮ ಸಿಬ್ಬಂದಿಗೆ ಹೃದಯಾಘಾತವಾದ ಸಂದರ್ಭದಲ್ಲಿ CPR ನ ಮೂಲಕ ಜೀವ ಉಳಿಸುವ ಕ್ರಮದ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. ಸಿಪಿಆರ್ ಹೃದಯ ಸ್ತಂಭನವಾದ ಕೂಡಲೇ ವ್ಯಕ್ತಿಯನ್ನು ಬದುಕುಳಿಸುವ ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.
ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದು, ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ಣಯಿಸುವುದು ಮತ್ತು ವೃತ್ತಿಪರ ವೈದ್ಯಕೀಯ ನೆರವು ಲಭ್ಯವಾಗುವವರೆಗೆ ತಕ್ಷಣದ ಆರೈಕೆಯನ್ನು ಹೇಗೆ ಒದಗಿಸುವುದು ಎಂಬುದರ ಕುರಿತು ಪ್ರಾಯೋಗಿಕ ಪ್ರದರ್ಶನ ಜರುಗಿತು.

ಹೃದಯಾಘಾತ ಅಥವಾ ಹೃದಯಾಘಾತದ ತುರ್ತು ಸಮಯದಲ್ಲಿ ಆರಂಭಿಕ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆಯ ಪ್ರಾಮುಖ್ಯತೆಯ ಕುರಿತು ಒಳನೋಟವನ್ನು ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ನಿರ್ದೇಶಕರಾದ ಡಾ ರಾಜ್‌ಪಾಲ್ ಸಿಂಗ್ ವಿವರಿಸಿದರು.
ಹೃದಯಾಘಾತದ ಆರಂಭಿಕ ಹಂತ ಗುರುತಿಸಬೇಕು
ಬೇಸಿಕ್ ಲೈಫ್ ಸಪೋರ್ಟ್ ಕೌಶಲ್ಯಗಳ ಬಗ್ಗೆ ಮಾತನಾಡಿದ ಎಮರ್ಜೆನ್ಸಿ ಮೆಡಿಸನ್ ವಿಭಾಗದ ಮುಖ್ಯಸ್ಥರಾದ ಡಾ. ಇ. ಕುಮಾರಸ್ವಾಮಿ, ಈ ಕಾಲಘಟ್ಟದಲ್ಲಿ ಹೃದಯ ಕಾಯಿಲೆಗಳು ಸಾರ್ವಕಾಲಿಕವಾಗಿದೆ. ವಿಶೇಷವಾಗಿ ಯುವ ಜನರಲ್ಲಿ. ಹೃದಯಾಘಾತ ಅಥವಾ ಹೃದಯಾಘಾತದ ತುರ್ತು ಸಮಯದಲ್ಲಿ ಆರಂಭಿಕ ಗುರುತಿಸುವಿಕೆ ಅತಿ ಮುಖ್ಯ ಎಂದು ತಿಳಿಸಿದರು.
ಹೃದಯದ ವಿಷಯಗಳಿಗೆ ಬಂದಾಗ ಸಮಯವು ನಿರ್ಣಾಯಕವಾಗಿರಲಿದೆ. ಎದೆ ನೋವು, ಉಸಿರಾಟದ ತೊಂದರೆ, ಅಥವಾ ಅಸ್ವಸ್ಥತೆಯಂತಹ ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ತಕ್ಷಣದ ಸಹಾಯವನ್ನು ಪಡೆಯುವುದು ಆ ವ್ಯಕ್ತಿಯ ಜೀವ ಉಳಿಸಲು ಹೆಚ್ಚು ಪರಿಣಾಮಕಾರಿ ಆಗಿರಲಿದೆ. ಕೆಲವರಿಗೆ ಆ ಕ್ಷಣಕ್ಕೆ ಸಿಪಿಆರ್‌ನ ಅವಶ್ಯಕತೆಯೂ ಬೀಳಬಹುದು.
ಆದರೆ, ಬಹುತೇಕರಿಗೆ ಸಿಪಿಆರ್‌ನನ್ನು ಸರಿಯಾದ ರೀತಿಯಲ್ಲಿ ಮಾಡಲು ಬರುವುದಿಲ್ಲ. ಹೀಗಾಗಿ ಸೂಕ್ತ ರೀತಿಯಲ್ಲಿ ಹೃದಯಾಘಾತ ವ್ಯಕ್ತಿಗೆ ಸಿಪಿಆರ್ ಮಾಡುವ ವಿಧಾನವನ್ನು ಪತ್ರಕರ್ತರಿಗೆ ಹೇಳಿಕೊಡಲಾಯಿತು ಎಂದು ಅವರು ವಿವರಿಸಿದರು.
ಸಿಪಿಆರ್ ಈ ವಿಧಾನದಿಂದ ಹೃದಯಘಾತ ಸಂಪೂರ್ಣವಾಗಿ ನಿಲ್ಲದೇ ಹೋದರೂ ಹೃದಯಕ್ಕಾಗುವ ಬಹುದೊಡ್ಡ ಅಪಾಯವನ್ನು ತಡೆಯುವಲ್ಲಿ ಸಹಕಾರಿ ಆಗುತ್ತದೆ ಎಂದರು.
ಎದೆನೋವು ಎಂದಿಗೂ ನಿರ್ಲಕ್ಷಿಸಬೇಡಿ
ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ನಿರ್ದೇಶಕ ಡಾ ರಾಜ್‌ಪಾಲ್ ಸಿಂಗ್ ಮಾತನಾಡಿ, 'ಹೃದಯಾಘಾತ ಯಾವ ಸಂದರ್ಭದಲ್ಲಿ ಯಾರಿಗೆ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಎದೆ ನೋವು, ಉಸಿರಾಟದ ತೊಂದರೆ ಮತ್ತು ಅತಿಯಾದ ಆಯಾಸ ಸೇರಿದಂತೆ ಕೆಲವು ಲಕ್ಷಣಗಳು ಕಂಡು ಬಂದ ಕೂಡಲೇ ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಹೃದಯಾಘಾತದ ಮುನ್ನೆಚ್ಚರಿಕೆ ಅರಿಯಲು ಆಗಾಗ್ಗೇ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು, ನಿಮ್ಮ ದೇಹದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ ಪ್ರಮಾಣ ತಿಳಿದುಕೊಳ್ಳುವುದು ಅವಶ್ಯಕ. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು.
ಮತ್ತೊಂದೆಡೆ, ನಮ್ಮ ಜೀವನ ಶೈಲಿಯೂ ಸಹ ನಮ್ಮ ಹೃದಯದ ಮೇಲೆ ಗಾಢ ಪರಿಣಾಮ ಬೀರಲಿದೆ. ಸಮತೋಲಿತ ಆಹಾರ, ವ್ಯಾಯಾಮ ಮತ್ತು ಒತ್ತಡಕ್ಕೆ ಒಳಗಾಗದೇ ಇರುವುದು ಧೂಮಪಾನ ಹಾಗೂ ಮದ್ಯಪಾನ ಮಾಡದೇ ಇರುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಲಿದೆ. ಜೊತೆಗೆ, ಹೃದಯಾಘಾತವಾದ ಸಂದರ್ಭದಲ್ಲಿ ಯಾವ ರೀತಿಯ ತುರ್ತುಕ್ರಮ ಕೈಗೊಳ್ಳಬೇಕು ಎಂಬ ಸಾಮಾನ್ಯ ಅರಿವನ್ನು ಪ್ರತಿಯೊಬ್ಬರು ಹೊಂದಿರಬೇಕು ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೂ ಬೇಸಕ್ ತರಬೇತಿ
ಮಾಧ್ಯಮ ಸಿಬ್ಬಂದಿಗೆ BLS ತರಬೇತಿ ಕಾರ್ಯಾಗಾರದ ಜೊತೆಗೆ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯುವ ಸಾರ್ವಜನಿಕರಿಗೆ BLS ತರಬೇತಿಯನ್ನು ಸಹ ಆಯೋಜಿಸಿದೆ. 2000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಕರು, ಸಂಚಾರ ಪೊಲೀಸರು, RWA ಉದ್ಯೋಗಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಈ ತರಬೇತಿ ನೀಡಲಾಗಿದೆ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications