ಪರಿಸರ ದಿನ : ಓಲಾ ಜತೆ ಕೈಜೋಡಿಸಿದ ಬೆಂಗಳೂರು ಪೊಲೀಸರು
ಪರಿಸರ ದಿನಾಚರಣೆ ಅಂಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್ ಗಳಲ್ಲಿ ಸಾವಿರಾರು ವಾಹನ ಸವಾರರಿಗೆ ಗಿಡಗಳನ್ನು ವಿವತರಿಸಿದರು.
ಬೆಂಗಳೂರು, ಜೂನ್ 05: ಪರಿಸರ ದಿನಾಚರಣೆ ಅಂಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್ ಗಳಲ್ಲಿ ಸಾವಿರಾರು ವಾಹನ ಸವಾರರಿಗೆ ಗಿಡಗಳನ್ನು ವಿತರಿಸಿದರು.
ಭಾರತದ ಜನಪ್ರಿಯ ಪ್ರಯಾಣಿಕ ಸೇವೆಯ ಮೊಬೈಲ್ App ಓಲಾ, ಬೆಂಗಳೂರು ಸಂಚಾರಿ ಪೊಲೀಸರ ಸಹಯೋಗದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಹಾಗೂ ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿಗಾಗಿ ರೈಡ್ ಶೇರಿಂಗ್ ವ್ಯವಸ್ಥೆಗೆ ಮುಂದಾಗಿದೆ.
ಬೆಂಗಳೂರು ನಗರದಲ್ಲಿ ಒಟ್ಟು 67 ಲಕ್ಷ ನೊಂದಣಿಯಾದ ವಾಹನಗಳಿದ್ದು, ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಮೂಲ ಸೌಕರ್ಯದ ಸಂಘರ್ಷವೂ ಹೆಚ್ಚುತ್ತಿದೆ. ಇದರಿಂದಾಗಿ ಮಾಲಿನ್ಯದ ಏರಿಕೆ ಜತೆಗೆ ನಗರದಲ್ಲಿ ಸಂಚಾರ ದಟ್ಟಣೆಯು ಹೆಚ್ಚಾಗುತ್ತಿದೆ. ಶಿಸ್ತಿನ ಮತ್ತು ಸಾರಿಗೆ ಹಂಚಿಕೆ ಕ್ರಮದ ಮೂಲಕ ಸಂಚಾರ ದಟ್ಟಣೆ ಕಡಿಮೆಗೊಳಿಸುವುದೊಂದಿಗೆ ಮಾಲಿನ್ಯವೂ ನಿಯಂತ್ರಣಗೊಳ್ಳಲಿದೆ.

'ವಿಶ್ವ ಪರಿಸರ' ದಿನಾಚರಣೆ ಅಂಗವಾಗಿ ಓಲಾ ವಿನೂತನವಾದ 'ಫರಕ್ ಪಡ್ತಾ ಹೈ' ಅಭಿಯಾನ ಹಮ್ಮಿಕೊಂಡಿದ್ದು, ಇದರ ಉದ್ದೇಶ ಸಂಚಾರ ದಟ್ಟಣೆ ಕಡಿಮೆಗೊಳಿಸಲು ದೇಶದ ಜನರು ತಮ್ಮ ರೈಡ್‍ಗಳನ್ನು ಹಂಚಿಕೊಳ್ಳಲಿ ಎಂಬುದಾಗಿದೆ.
ಬೆಂಗಳೂರು ಸೇರಿದಂತೆ ಪುಣೆ, ನೊಯಿಡಾ, ಗುರುಗ್ರಾಮ, ದೆಹಲಿ ಹಾಗೂ ಮುಂಬೈ ನಗರಗಳಲ್ಲೂ ಅಲ್ಲಿನ ಸಂಚಾರ ಪೊಲೀಸರು ಇದೇ ಬಗೆಯ ಕ್ರಮಗಳನ್ನು ಕೈಗೊಂಡರು.
ಕಾರ್ಬನ್ ಉಗುಳುವಿಕೆ, ಇಂಧನ ಬಳಕೆ ಹಾಗೂ ಏರುಗತಿಯಲ್ಲಿರುವ ಸಂಚಾರ ದಟ್ಟಣೆ ಹಾಗೂ ಕ್ರಮ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಓಲಾ ಸಂಸ್ಥೆಯು ಹಮ್ಮಿಕೊಂಡಿರುವ ಅಭಿಯಾನ, ಆವಿಷ್ಕಾರಿ ಕ್ರಮಗಳು ಹಾಗೂ ಕಾರ್ಯಚಟುವಟಿಕೆಗಳು ಸಾರಿಗೆ ಹಂಚಿಕೆಯ ಈ ಉಪಕ್ರಮಕ್ಕೆ ಸಾಥ್ ನೀಡಿವೆ ಎಂದು ಓಲಾದ ಸಿಓಓ ವಿಶಾಲ್ ಕೌಲ್ ಹೇಳಿದರು.
ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಈ ಅಭಿಯಾನಕ್ಕೆ ತಮ್ಮ ಸಹಕಾರ ನೀಡಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ಜನರು ಹೆಚ್ಚು ಪರಿಸರ ಸ್ನೇಹಿಯಾಗುವಂತೆ ಉತ್ತೇಜನಕಾರಿ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಓಲಾ ಕುರಿತು: ಜನವರಿ 2011ರಲ್ಲಿ ಬಾಂಬೆ ಐಐಟಿ ಹಿರಿಯ ವಿದ್ಯಾರ್ಥಿಗಳಾದ ಭವಿಷ್ ಅಗರವಾಲ್ ಮತ್ತು ಅಂಕಿತ್ ಭಾಟಿ ಅವರು ಓಲಾ (ಈ ಮೊದಲು ಓಲಾ ಕ್ಯಾಬ್ಸ್) ಅನ್ನು ಸ್ಥಾಪಿಸಿದರು. ಇದು, ವೈಯಕ್ತಿಕ ಪ್ರಯಾಣಕ್ಕಾಗಿ ಭಾರತದ ಬಹು ಜನಪ್ರಿಯ ಮೊಬೈಲ್ ಆ್ಯಪ್ ಆಗಿದೆ.
ಓಲಾ ಮೊಬೈಲ್ ಆ್ಯಪ್ ಬಳಕೆ ಮಾಡುವ ಮೂಲಕ 102 ನಗರಗಳಲ್ಲಿ 500,000 ಕ್ಯಾಬ್‍ಗಳು, ಆಟೊರಿಕ್ಷಾ, ಟ್ಯಾಕ್ಸಿಗಳನ್ನು ಬಳಕೆ ಮಾಡುವ ಮೂಲಕ ಪ್ರಯಾಣಿಕ ಸೇವೆ ಒದಗಿಸಲು ಒತ್ತು ನೀಡುತ್ತಿದೆ. ಓಲಾ ಶಟ್ಲ್, ಓಲಾ ಶೇರ್ ಮೂಲಕ ಪ್ರಯಾಣಿಕರು ಹಂಚಿಕೆ ಆಧಾರದಲ್ಲಿ ಪ್ರಯಾಣಿಕ ಸೇವೆ ಒದಗಿಸಲು ನೆರವಾಗದೆ. ಮೊಬೈಲ್ ಆ್ಯಪ್ ವಿಂಡೋಸ್, ಅಂಡ್ರಾಯ್ಡ್, ಐಒಎಸ್ ವೇದಿಕೆಯಲ್ಲಿಯೂ ಲಭ್ಯವಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications