World Cup in Bengaluru: ಕ್ರಿಕೇಟ್ ಪ್ರೇಮಿಗಳಿಗಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರ, ಮಾರ್ಗಗಳ ಮಾಹಿತಿ
ಬೆಂಗಳೂರು, ಅಕ್ಟೋಬರ್ 19: ವಿಶ್ವಕಪ್ 2023 ಏಕದಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಈ ವಿಶ್ವಕಪ್ ಗಂಗಿನಲ್ಲಿರುವ ಕ್ರಿಕೆಟ್ ಪ್ರೇಮಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದೆ.
ಹೌದು, ದೇಶದೆಲ್ಲಡೆ ವಿಶ್ವಕಪ್ 2023 ಮೇನಿಯಾ ಶುರುವಾಗಿದೆ. ಸುಮಾರು ಹತ್ತು ವರ್ಷಗಳ ನಂತರ ಭಾರತದಲ್ಲಿ ಏಕ ದಿನ ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆ. ಈ ಪೈಕಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿವಿಧ ದಿನಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಈ ಸಂಬಂಧ ಅಭಿಮಾನಿಗಳು ಅನುಕೂಲವಾಗಲೆಂದು ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವುದಾಗಿ ತಿಳಿಸಿದೆ.

ಎಂಜಿ ರಸ್ತೆಯ ಚಿನ್ನಸ್ವಾಮಿ ಸ್ಟೇಡಿಯಂನಿಂದ ನಗರದ ವಿವಿಧ ಸ್ಥಳಗಳಿಗೆ ಬಿಎಂಟಿಸಿಯ ಈ ಹೆಚ್ಚುವರಿ ಬಸ್‌ಗಳು ಓಡಾಡಲಿವೆ. ಹೆಚ್ಚುವರಿ ಬಸ್ ಸೇವೆಗಳು ಅಕ್ಟೋಬರ್ 20, 26 ಮತ್ತು ನವೆಂಬರ್ 4, 9 ಮತ್ತು 12 ರಂದು ಕ್ರಿಕೆಟ್ ಪಂದ್ಯಗಳು ನಡೆಯುವ ದಿನ ಪ್ರಯಾಣಿಕರಿಗೆ/ಅಭಿಮಾನಿಗಳಿಗೆ ಲಭ್ಯವಿರಲಿವೆ.
ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರ
ಬಿಎಂಟಿಸಿಯು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಒಟ್ಟಾರೆ 11 ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡಲಿದೆ.
ಸ್ಟೇಡಿಯಂನಿಂದ HAL ಮತ್ತು ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣ, ಅಗರ ಮತ್ತು ದೊಮ್ಮಸಂದ್ರ ಮೂಲಕ ಸರ್ಜಾಪುರ, ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ, ಜಯದೇವ ಆಸ್ಪತ್ರೆ ಮಾರ್ಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕೆಲವು ಬಸ್‌ಗಳು ತಲುಪಲಿವೆ.

ಉಳಿದಂತೆ ಕ್ರೀಡಾಂಗಣದಿಂದ ನಾಯಂಡಹಳ್ಳಿ ಮೂಲಕ ಕೆಂಗೇರಿ KHB ಕ್ವಾರ್ಟರ್ಸ್, ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್ ಶಿಪ್, ಯಶವಂತಪುರ ಮೂಲಕ ನೆಲಮಂಗಲ, ಹೆಬ್ಬಾಳ ಮೂಲಕ ಯಲಹಂಕ 5ನೇ ಹಂತ, ಆರ್.ಕೆ.ಹೆಗಡೆ ನಗರ ಮಾರ್ಗವಾಗಿ ನಾಗವಾರಕ್ಕೆ ಹಾಗೂ ಟ್ಯಾನರಿ ರಸ್ತೆ ಮೂಲಕ ಯಲಹಂಕ, ಹೆಣ್ಣೂರು ರಸ್ತೆ ಸಾಗಿ ಬಾಗಲೂರು ಮತ್ತು ಟಿನ್ ಫ್ಯಾಕ್ಟರಿ ತಲುಪಲಿವೆ. ಕೆಲವು ಬಸ್‌ಗಳು ಅಲ್ಲಿಂದ ಹೊಸಕೋಟೆವರೆಗೂ ಸೇವೆ ನೀಡಲಿವೆ.
ಇದೇ ವಿಶ್ವಕಪ್ ಪಂದ್ಯಾವಳಿ ಸಂಬಂಧ ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ ವಿವಿಧೆಡೆ ತೆರಳಲು ಪೇಪರ್ ಟಿಕೆಟ್ ನೀಡುವು ಮೂಲಕ ಪ್ರಮಾಣಕ್ಕೆ ಸೂಕ್ತ ಅನುಕೂಲ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications