ಬೆಂಗಳೂರಲ್ಲೊಂದು ಮಹಿಳಾ ಐಲ್ಯಾಂಡ್: ಹಾಗೆಂದರೇನು ಗೊತ್ತಾ?
Recommended Video

ಬೆಂಗಳೂರು, ಜು.7: ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸಂಬಂಧಪಟ್ಟವರ ಒಪ್ಪಿಗೆ ಪಡೆದು ಜಿಪಿಎಸ್ ಆಧಾರಿತ ಟಚ್, ಟ್ಯಾಪ್ ಮೂಲಕ ಪೊಲೀಸರಿಗೆ ಮಾಹಿತಿ ರವಾನಿಸುವ ಎಲೆಕ್ಟ್ರಿಕ್ ಸಾಧನವನ್ನು ನಗರದಲ್ಲಿ ಅಳವಡಿಸಲಾಗುತ್ತದೆ.
ದೇಶದ ಮಹಾನಗರಗಳ ಪೈಕಿ ಮೊದಲ ಬಾರಿ ಬೆಂಗಳೂರಲ್ಲಿ ಈ ಸುರಕ್ಷಿತ ಐಲ್ಯಾಂಡ್‌ಗಳು ಸ್ಥಾಪನೆಯಾಗಲಿದ್ದು, ಇವು ಮಹಿಳೆ ಮತ್ತು ಮಕ್ಕಳ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರ ಸಂಚಾರ ಹೆಚ್ಚಿರುವ ಸ್ಥಳಗಳಲ್ಲೇ ಸ್ಥಾಪನೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯ ಶೇ.60ರಷ್ಟು ಮೊತ್ತ ಹಾಗೂ ರಾಜ್ಯ ಸರ್ಕಾರದಿಂದ ಶೇ.40ರಷ್ಟು ಅನುದಾನ ಪಡೆದು ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ಅಪರಾಧ ಕೃತ್ಯ ನಡೆದಾಗ ಕೂಡಲೇ ಯಾರಿಗೆ ಮಾಹಿತಿ ನೀಡಬೇಕು ಎಂಬ ಗೊಂದಲ ಮೂಡುವುದು ಸಾಮಾನ್ಯ, ಗೊತ್ತಿದ್ದರೂ ಕೆಲವರಿಗೆ ತಮ್ಮನ್ನು ವಿಚಾರಣೆಗೆ ಕರೆಯುತ್ತಾರೆ ಎಂದು ಹಿಂಜರಿಯುತ್ತಾರೆ. ಇಂತಹ ಹಿಂಜರಿಕೆ ಹಾಗೂ ಭೀತಿಯನ್ನು ತಪ್ಪಿಸಲು ಹಾಗೂ ಪೊಲೀಸರು ಸ್ಥಳಕ್ಕೆ ಶೀಘ್ರವಾಗಿ ತಲುಪಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮಹಿಳಾ ಐಲ್ಯಾಂಡ್‌ಗಳನ್ನು ತೆರೆಯಲಾಗುತ್ತದೆ.
ಶಿಕ್ಷಣ ಸಂಸ್ಥೆಗಳು, ಐಟಿ-ಬಿಟಿ ಕಂಪನಿಗಳು, ಖಾಸಗಿ ಕಂಪನಿಗಳು, ಗಾರ್ಮೆಂಟ್ಸ್ ಬಳಿ ಸುರಕ್ಷತಾ ಸಾಧನಾ ಅಳವಡಿಸಲಾಗುತ್ತದೆ. ಈ ಸಾಧನವನ್ನು ಮಹಿಳೆಯರ ಪ್ರಕರಣಗಳನ್ನು ಸ್ವೀಕರಿಸಲೆಂದೇ ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗುವ ಉದ್ದೇಶಿತ ನಿಯಂತ್ರಣ ಕೊಠಡಿಗೆ ಸಂಪರ್ಕಿಸಲಾಗುತ್ತದೆ. ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ, ಪೊಲೀಸರು ಶೀಘ್ರ ಧಾವಿಸಲೆಂದೇ ಪಿಂಕ್ ಹೊಯ್ಸಳ ಸೇರಿದಂತೆ ಗಸ್ತು ವಾಹನಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications