Bengaluru: ಚಲಿಸುತ್ತಿದ್ದ ಕಾರಿನ ಮುಂದೆ ಬಂದು ಬಿದ್ದ ಮಹಿಳೆ: ಬಳಿಕ ಆಗಿದ್ದೇನು?

ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಕಲಿ ಅಪಘಾತಗಳನ್ನು ಸೃಷ್ಟಿಸುವ ಮೂಲಕ ವಾಹನ ಸವಾರರನ್ನು ದೋಚುವ ದಂಧೆಯೊಂದು ಶುರುವಾಗಿದೆ. ಅನೇಕ ಕಾರು, ಬೈಕು ಓಡಿಸುವವರು ಇಂತಹ ಘಟನೆಗಳಿಂದ ಹಣ‌‌‌ ಕಳೆದುಕೊಂಡಿರುವ ಘಟನೆಗಳು ಬಹಳಷ್ಟಿವೆ. ಇದಕ್ಕಾಗಿಯೇ ಇತ್ತೀಚೆಗೆ ಎಲ್ಲಾ ಕಾರುಗಳು ಮಾಲೀಕತು ಡ್ಯಾಷ್ ಕ್ಯಾಮ್ ಅಳವಡಿಸಿಕೊಳ್ಳುತ್ತಿದ್ದಾರೆ. ಚಲಿಸುತ್ತಿದ್ದ ಕಾರಿನ ಮುಂದೆ ಬಂದು ಬಿದ್ದು ಮಹಿಳೆಯೊಬ್ಬರು ಹೈಡ್ರಾಮಾ ಮಾಡಿರುವ ಘಟನೆಯ ವಿಡಿಯೋ ಇದೀಗ ವೈರಲ್ ಅಗುತ್ತಿದೆ.

ಶೋನಿ ಕಪೂರ್ ಎನ್ನುವವರು ತಮ್ಮ‌ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಹೀಗೆ ಮೋಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ‌ ಮಾಡಿದ್ದಾರೆ. ಚಲಿಸುತ್ತಿದ್ದ ಕಾರಿನ ಮುಂದೆ ಮಹಿಳೆ ಏಕಾಏಕಿ ಉದ್ದೇಶಪೂರ್ವಕವಾಗಿ ಬಿದ್ದು ಅಪಘಾತವಾಗಿದೆ ಎನ್ನುವ ನಾಟಕ ಆಡಲು ಪ್ರಯತ್ನಿಸಿದ್ದಾರೆ. ಈ ಘಟನೆ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ.

Women creats fake accident on bengaluru video viral

ಜನನಿಬಿಡ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಮಹಿಳೆ, ಚಲಿಸುತ್ತಿದ್ದ ಕಾರಿನ ಬಾನೆಟ್‌ಗೆ ತಾನೇ ಬಂದು ಗುದ್ದಿದ್ದಾಳೆ, ಅಪಘಾತ ತಪ್ಪಿಸಲು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಅಪಘಾತ ತಪ್ಪಿಸಲು ಚಾಲಕ ಪ್ರಯತ್ನ ಮಾಡಿದರೂ, ಕಾರಿನ ಮೇಲೆ ಬಿದ್ದ ಮಹಿಳೆ ಕಾರು ಚಾಲಕನ ಮೇಲೆ ಕೂಗಾಡಲು ಶುರುಮಾಡಿದ್ದಾಳೆ.

ಆಕೆ ಕಾರು ಚಾಲಕನನ್ನು ಬೈಯಲು ಮುಂದಾಗುತ್ತಿದ್ದಂತೆ, ಚಾಲಕ ಆಕೆಯನ್ನು ಹೆದರಿಸುವ ಪ್ರಯತ್ನದಲ್ಲಿ ಪೊಲೀಸ್, ಪೊಲೀಸ್ ಎಂದು ಕಿರುಚಿದ್ದಾನೆ. ಆದರೂ ಮಹಿಳೆ ಕಾರಿಗೆ ದಾರಿ ಬಿಡಲು ನಿರಾಕರಿಸಿದರು. ಬಳಿಕ ದಾರಿಯನ್ನು ಬಿಟ್ಟು ದೂರ ಸಾಗಿದ್ದಾಳೆ.

ಡ್ಯಾಶ್‌ಕ್ಯಾಮ್ ಹಾಕುವಂತೆ ಮನವಿ

ನಿಮ್ಮ ಕಾರುಗಳಿಗೆ ಡ್ಯಾಶ್‌ಕ್ಯಾಮ್ ಹಾಕಿ, ಯಾವಾಗ ಬೇಕಾದರೂ ಇಂತಹ ಘಟನೆ ನಡೆಯುತ್ತದೆ ಎಂದು ಕಪೂರ್ ತಮ್ಮ ಪೋಸ್ಟ್‌ನಲ್ಲಿ ಚಾಲಕರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಹಲವು ಮಂದಿ ಸಹಮತ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಒಬ್ಬ ಬಳಕೆದಾರರು ಕಮೆಂಟ್‌ ಮಾಡಿದ್ದು, "ಭಾರತದಲ್ಲಿ ಕಾರುಗಳಿಗೆ ಡ್ಯಾಶ್‌ಕ್ಯಾಮ್ ಅನಿವಾರ್ಯ. ನೀವು ರಸ್ತೆಗಳಲ್ಲಿ ಯಾವ ರೀತಿಯ ವ್ಯಕ್ತಿಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿದ್ದು ಭಾರತದಲ್ಲಿ ಕಾರುಗಳಿಗೆ ಡ್ಯಾಶ್‌ಕ್ಯಾಮ್ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ರೀತಿಯಲ್ಲಿ ಬೇರೆಯವರು ಉದ್ದೇಶಪೂರ್ವಕವಾಗಿ ಅಪಘಾತದ ಸನ್ನಿವೇಶ ಸೃಷ್ಟಿಸಿದಾಗ. ರಸ್ತೆಯಲ್ಲಿ ಗಲಾಟೆಗಳಾದಾಗ ಡ್ಯಾಶ್‌ಕ್ಯಾಮ್‌ಗಳು ಸಾಕ್ಷಿಗಳಾಗುತ್ತವೆ. ಇದರಿಂದ ವಂಚನೆಗಳನ್ನು, ಜಗಳಗಳನ್ನು ತಪ್ಪಿಸಬಹುದಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಕೆಲಸ ಮಾಡುವ ಗುಂಪು ಸಕ್ರಿಯವಾಗಿದ್ದು ಪೊಲೀಸರು ಕೂಡ ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+