ಬೆಂಗಳೂರು : ಇಬ್ಬರು ಹೆಣ್ಣು ಮಕ್ಕಳ ಜೊತೆ ಗೃಹಿಣಿ ನೇಣಿಗೆ ಶರಣು

ಬೆಂಗಳೂರು, ಆಗಸ್ಟ್ 12 : ಗಂಡನ ವರ್ತನೆಯಿಂದ ಬೇಸತ್ತು ಗೃಹಣಿಯೊಬ್ಬರು ಇಬ್ಬರು ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಬೆಂಗಳೂರಿನ ಹನುಂತನಗರದ ರಾಜೇಶ್ವರಿ, ಮಾನಸ ಮತ್ತು ಭೂಮಿಕ ಎಂದು ಗುರುತಿಸಲಾಗಿದೆ. ಮೂಲತಃ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದಯ್ಯ ಎಂಬುವವರನ್ನು ವಿವಾಹವಾಗಿದ್ದರು.

ಸಿದ್ದಯ್ಯ ಅನುಕಂಪದ ಆಧಾರದ ಮೇಲೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಪಡೆದಿದ್ದರು. ಆದರೆ, ಕೆಲವು ದಿನಗಳಿಂದ ರಾಜೇಶ್ವರಿ-ಸಿದ್ದಯ್ಯ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹೆಣ್ಣಿನ ಶೋಕಿಗೆ ಬಿದ್ದಿದ್ದ ಸಿದ್ದಯ್ಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

Women Commits Suicide With Two daughters

ಮಕ್ಕಳ ಮುಂದೆಯೇ ಸಿದ್ದಯ್ಯ-ರಾಜೇಶ್ವರಿ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಮಗಳೂ ಭೂಮಿಕ ವಾಟ್ಸಪ್ ಸ್ಟೇಟಸ್ ಅಪ್‌ ಡೇಟ್ ಮಾಡಿದ್ದಾರೆ. ತಾಯಿ ಮತ್ತು ಇಬ್ಬರು ಮಕ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಳ್ಳೆಯ ತಂದೆ ಸಿಗಬೇಕು : "ಎಲ್ಲರಿಗೂ ಒಳ್ಳೆಯ ತಂದೆ ಸಿಗಬೇಕು ನಮ್ಮ ಲೈಫನ್ನ ಹಾಳು ಮಾಡಿಬಿಟ್ಟ ನಮ್ಮ ಸಾವಿಗೆ ಸಿದ್ದನೇ ಕಾರಣ" ಎಂದು ಭೂಮಿಕ ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ.

ವರಮಹಾಕ್ಷ್ಮೀ ಹಬ್ಬಕ್ಕೆ ಮನೆಗೆ ಬಾರದ ಸಿದ್ದಯ್ಯ ಬೇರೆ ಮಹಿಳೆ ಜೊತೆ ತಮಿಳುನಾಡಿಗೆ ಟ್ರಿಪ್ ಹೋಗಿದ್ದಾರೆ ಎಂಬ ಆರೋಪವಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಿದ್ದಯ್ಯಗಾಗಿ ಹುಡುಕಾಟ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+