ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಬೆಲೆಯ ಕೊಕೇನ್
ಬೆಂಗಳೂರು, ಮಾರ್ಚ್ 7: ಮಹಿಳೆಯು ಗುಪ್ತಾಂಗದಲ್ಲಿ 1 ಕೆ.ಜಿ.ಗೂ ಅಧಿಕ ಮಾದಕ ಸವ್ತು ಇಟ್ಟುಕೊಂಡು ಕಳ್ಳಸಾಗಣೆ ಮಾಡಲು ಯತ್ನಿಸಿದ್ದು ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯು ಗ್ವಾಟೆಮಾಲಾದ ಪ್ರಜೆ ಎಂದು ಗುರುತಿಸಲಾಗಿದೆ. ಮಹಿಳೆಯಿಂದ 8.31 ಕೋಟಿ ಮೌಲ್ಯದ 1 ಕೆ.ಜಿ 385 ಗ್ರಾಂನ ಕೊಕೇನ್ ಜಪ್ತಿಇ ಮಾಡಲಾಗಿದೆ ಎಂದು ಕಸ್ಟಮ್ ಅಧಿಕಾರಿಗಳು ಹೇಳಿದ್ದಾರೆ.
ಗ್ವಾಟೆಮಾಲಾ ದೇಶದ ಪ್ರಜೆಯಾಗಿರುವ ಅವರು ಏರ್‌ಲೈನ್ಸ್ ಇಟಿ-690 ವಿಮಾನದಲ್ಲಿ ಫೆ.2ರಂದು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಮಹಿಳೆಯನ್ನು ತಪಾಸಣೆ ನಡೆಸಿದಾಗ ಅನುಮಾನ ಬರುವ ರೀತಿಯಲ್ಲಿ ವರ್ತಿಸಿದ್ದಳು.

ಲೋಹಶೋಧಕ ಯಂತ್ರದಲ್ಲಿ ತಪಾಸಣೆ ನಡೆಸಿದಾಗ ಮಹಿಳೆ ಬಳಿ ಮಾದಕ ವಸ್ತು ಇರುವ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಮಹಿಳೆಯನ್ನು ಮಹಿಳಾ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಒಟ್ಟು 150 ಕ್ಯಾಪ್ಸೂಲ್ ಕೊಕೇನ್‌ಗಳು ದೊರೆತಿವೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ 150ಕ್ಯಾಪ್ಸೂಲ್ಸ್‌ನಲ್ಲಿ ಕೊಕೇನ್ ತುಂಬಿ ಇರಿಸಿದ್ದಳು. ಎರಡು ದಿನ ಕರಗದ ರೀತಿಯಲ್ಲಿ ಕ್ಯಾಪ್ಸೂಲ್‌ಗಳಲ್ಲಿ ಇಟ್ಟುಕೊಳ್ಳಬಹುದು. ಆ ರೀತಿ ಪ್ಲ್ಯಾನ್ ಮಾಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications