ಬೆಂಗಳೂರಿನ ಹೋಟೆಲ್‌ನಲ್ಲಿ ಕತ್ತು ಸೀಳಿ ಮಹಿಳೆ ಹತ್ಯೆ
ಬೆಂಗಳೂರು, ಫೆಬ್ರವರಿ 20 : ಬೆಂಗಳೂರಿನ ಹೋಟೆಲ್‌ನಲ್ಲಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಉಪ್ಪಾರಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಗಾಂಧಿನಗರದ ಕಪಾಲಿ ಚಿತ್ರಮಂದಿರದ ಸಮೀಪ ಇರುವ ಸೂರ್ಯ ನೆಸ್ಟ್ ಹೋಟೆಲ್‌ನಲ್ಲಿ ರೇಣುಕಾ (31) ಹತ್ಯೆ ಮಾಡಲಾಗಿದೆ. ಕತ್ತು ಸೀಳಿ ಹತ್ಯೆ ಮಾಡಲಾಗಿದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ.
ರೇಣುಕಾ ಮತ್ತು ಆಕೆಯ ಪತಿ ಶಂಕರ ಅವರು ಸೋಮವಾರ ಬೆಂಗಳೂರಿಗೆ ಬಂದಿದ್ದು, ಸೂರ್ಯ ನೆಸ್ಟ್ ಹೋಟೆಲ್‌ನಲ್ಲಿ ರೂಂ ಪಡೆದಿದ್ದರು. ಸೋಮವಾರ ಸಂಜೆ ಶಂಕರ ಅವರು ಹೊರಹೋದವರು ಮತ್ತೆ ವಾಪಸ್ ಆಗಿರಲಿಲ್ಲ.
ಶಂಕರ ಅವರು ಹೊರ ಹೋಗುವಾಗ ಹೋಟೆಲ್ ರೂಂ ಅನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿದ್ದರು. ಬುಧವಾರ ಹೋಟೆಲ್ ರೂಂನಿಂದ ಕೆಟ್ಟವಾಸನೆ ಬರುತ್ತಿತ್ತು. ಆಗ ಸಿಬ್ಬಂದಿ ಬೀಗ ಒಡೆದು ನೋಡಿದಾಗ ರೇಣುಕಾ ಅವರು ಕೊಲೆ ಆಗಿರುವುದು ಪತ್ತೆಯಾಗಿದೆ.

ಹೋಟೆಲ್ ಸಿಬ್ಬಂದಿ ತಕ್ಷಣ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದರು. ರೇಣುಕಾ ಅವರನ್ನು ಶಂಕರ ಅವರೇ ಹತ್ಯೆ ಮಾಡಿ ಪಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications