ಕೆಲವೇ ಗಂಟೆಗಳ ಅಂತರ, ಒಂದೇ ಜಾಗ, ಪ್ರತ್ಯೇಕ ಘಟನೆ, ಆರು ಸಾವು

ಬೆಂಗಳೂರು, ಜು.3: ಒಂದೇ ಜಾಗದಲ್ಲಿ ಕೆಲವು ಗಂಟೆಗಳ ವ್ಯತ್ಯಾಸದಲ್ಲಿ ಆರು ಮಂದಿ ಮೃತಪಟ್ಟಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಟೆಂಪೋ-ಲಾರಿ ಮುಖಾಮುಖಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಾಲ್ವರು ಮೃತಪಟ್ಟಿದ್ದಾರೆ, ಇನ್ನು ಅಣ್ಣನೊಂದಿಗೆ ಶಾಲೆಗೆ ತೆರಳುತ್ತಿದ್ದ ಬಾಲಕಿ ಸೃಷ್ಠಿ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಮನಕಲಕುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 234ರ ಕೋನಪ್ಪಲ್ಲಿ ಬಳಿ ಹೊಂಚು ಹಾಕಿ ಕಾಯುತ್ತಿದ್ದ ಆರು ಜನರ ಜೀವ ಕಸಿದಿದೆ, ಸೃಷ್ಠಿ ಮೃತಪಟ್ಟ ಸ್ಥಳದಲ್ಲಿ ಹಲವು ದಿನಗಳಿಂದ ಸಾಕಷ್ಠು ಅಪಘಾತಗಳು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಮುಗಿದು ಮೆಲ್ದರ್ಜೆಗೆ ಏರಿಸಿದ್ದು ವಾಹನಗಳು ಅತಿಯಾದ ವೇಗದಲ್ಲಿ ಸಂಚರಿಸುತ್ತಿವೆ.

Within an hour six were killed in same spot in accident

ಹಾಗಾಗಿ ಜನ ರಸ್ತೆ ದಾಟಲು ಪರದಾಡುವ ಸ್ಥಿತಿ ಇದ್ದು ಜನ ಸಾಮಾನ್ಯರು ಮನೆಯಿಂದ ಹೊರ ಬರುವುದಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕೆಂದು ಪ್ರತಿಭಟನೆ ಮಾಡಿದ್ದರು, ಆದರೆ ಪ್ರತಿಭಟನೆ ಮಾಡಿ ಕೆಲವೇ ಗಂಟೆಗಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು ಮತ್ತೆ ಆರು ಜನರ ಪ್ರಾಣವನ್ನು ಬಲಿಪಡೆದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+