ಸಿದ್ದರಾಮಯ್ಯ ವಿರುದ್ದ ಜಾತಿ ಅಸ್ತ್ರ ಪ್ರಯೋಗಿಸಿತಾ ಬಿಜೆಪಿ?

ಬೆಂಗಳೂರು, ಡಿಸೆಂಬರ್ 02: ರಾಜ್ಯದಲ್ಲಿ ಉಪ ಚುನಾವಣಾ ಕದನ ಜೋರಾಗಿದೆ, ದಿನದಿಂದ ದಿನಕ್ಕೆ ರಾಜಕೀಯ ಪಕ್ಷಗಳನ್ನು ತಂತ್ರ- ಪ್ರತಿತಂತ್ರಗಳನ್ನು ನಡೆಸುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಟ್ವಿಸ್ಟ್ ದೊರೆಯುತ್ತಿದ್ದು, ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಪಕ್ಷ ಕುರುಬ ಸಮಾದಾಯದ ಅಸ್ತ್ರ ಪ್ರಯೋಗಿಸುತ್ತಿದೆಯಾ ಎಂಬ ಅನುಮಾನ ಮೂಡಿದೆ.

ಸದ್ಯ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕುರುಬ ಸಮುದಾಯ ನಿರ್ಣಾಯಕವೆನಿಸಿದೆ. ಬಿಜೆಪಿ ಪಕ್ಷದಿಂದ ನಾಲ್ಕು ಜನ ಅಭ್ಯರ್ಥಿಗಳಾಗಿದ್ದಾರೆ, ಈ ಎಲ್ಲ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದಂಗಿದೆ ಬಿಜೆಪಿ. ಈ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಗೆದ್ದರೆ ರಾಜ್ಯ ಮಂತ್ರಿಗಳಾಗಲಿದ್ದಾರೆ ಎಂಬ ಅಸ್ತ್ರ ಪ್ರಯೋಗಿಸಿದೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಒಟ್ಟು 5 ಜನ ಕುರುಬ ಸಮುದಾಯದವರು ಮಂತ್ರಿಯಾಗಲಿದ್ದಾರೆ ಎಂಬ ವಿಷಯವನ್ನು ಈಗಾಗಲೇ ಬಿಜೆಪಿ ಮತದಾರರಿಗೆ ರವಾನಿಸಿದೆ, ಇದು ಸಿದ್ದರಾಮಯ್ಯ ವಿರುದ್ದವೇ ಪ್ರಯೋಗಿಸಿದ ಅಸ್ರವೆಂದು ಹೇಳಬಹುದು. ಕುರುಬ ಸಮುದಾಯವನ್ನು ಸಿದ್ದರಾಮಯ್ಯ ಅವರ ಹಿಡಿತದಿಂದ ಹೊರಗೆ ತರಲು ಈ ಪ್ಲ್ಯಾನ್ ಮಾಡಿದೆ.

Will BJP fight caste Politics against Siddaramaiah?

ಈಗಾಗಲೇ ಕೆ.ಎಸ್.ಈಶ್ವರಪ್ಪ ಮಂತ್ರಿಯಾಗಿದ್ದಾರೆ, ಅದೇ ರೀತಿ ರಾಣೇಬೆನ್ನೂರು, ಹುಣಸೂರು, ಹೊಸಕೋಟೆ, ಕೆ.ಆರ್.ಪುರಂ ನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಎಂಟಿಬಿ ನಾಗರಾಜ್, ಭೈರತಿ ಬಸವರಾಜು, ಹೆಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಪ್ರಚಾರ ಸಮಿತಿ ಕುರುಬ ಸಮುದಾಯದ ಮನಗೆಲ್ಲಲು ಭಿತ್ತಿಪತ್ರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದೆ.

ಈ ಉಪ ಚುನಾವಣೆಯಲ್ಲಿ ಕುರುಬ ಸಮುದಾಯದ ಮತ ಪಡೆದು ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲು ಬಿಜೆಪಿಯಿಂದ ಪ್ಲ್ಯಾನ್ ರೆಡಿಯಾಗಿದೆ. ಬಿಜೆಪಿಯ ಈ ಜಾತಿ ಅಸ್ತ್ರದಿಂದ 4 ಕ್ಷೇತ್ರದಲ್ಲಿ ಜಯಗಳಿಸುತ್ತಾ, ಸಿದ್ದರಾಮಯ್ಯಗೆ ಸ್ವಜಾತಿನೇ ವಿರೋಧವಾಗಿರುವಂತೆ ಮಾಡುತ್ತಾ ಎಂಬುದನ್ನು ಉಪ ಚುನಾವಣೆಯ ಫಲಿತಾಂಶ ದಿನದಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+