ವನ್ಯಜೀವಿಗಳ ಮನಮೋಹಕ ಕ್ಯಾರಿಕೇಚರ್ ಪ್ರದರ್ಶನ

ಬೆಂಗಳೂರು, ಸೆ.13: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 2014, ಸೆಪ್ಟಂಬರ್ 13 ರಂದು 101ನೇ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ರೋಹನ್ ಚಕ್ರವರ್ತಿ ಅವರ ವನ್ಯಜೀವಿಗಳ ಕ್ಯಾರಿಕೇಚರ್ ಪ್ರದರ್ಶನ 'Wildlife the Toonie Way' ಸೆಪ್ಟೆಂಬರ್ 27 ರವರೆಗೂ ಸಾರ್ವಜನಿಕರಿಗಾಗಿ ಮುಕ್ತವಾಗಿರುತ್ತದೆ.

ರೋಹನ್ ಚಕ್ರವರ್ತಿ, ನಾಗಪುರದ ಯುವ ವ್ಯಂಗ್ಯಚಿತ್ರಕಾರ, ವನ್ಯಜೀವಿ ಆಶ್ರಯಸ್ಥಾನದ ಸರೋವರದಲ್ಲಿ ಹೆಣ್ಣು ಹುಲಿಯೊಂದು ಮೀಯುತ್ತಿರುವ ಸುಂದರ ದೃಶ್ಯದಿಂದ ಆಕರ್ಷಿತರಾದ ಅವರು ವನ್ಯಜೀವಿಗಳ ರಕ್ಷಣೆಗೆ ಮುಂದಾಗಿ ಅವುಗಳ ಕ್ಯಾರಿಕೇಚರ್ ಬರೆಯಲು ಪ್ರಾರಂಭಿಸಿದರು.

ಅವರು ಬರೆದ 200ಕ್ಕೂ ಮಿಕ್ಕಿ ವನ್ಯಜೀವಿಗಳ ವೆಬ್ ಸೈಟ್ 'ಗ್ರೀನ್ ಹ್ಯೂಮರ್' ಈಗಾಗಲೇ ಜನಪ್ರಿಯವಾಗಿ ಅನೇಕ ವಿದೇಶೀ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಗಳಿಸಿದೆ. ಅವರು ಅನೇಕ ಅಂತಾರಾಷ್ಟ್ರೀಯ ಕ್ಯಾರಿಕೇಚರ್ ಗಳು ಇಲ್ಲಿ ಪ್ರದರ್ಶನದಲ್ಲಿರುತ್ತವೆ.

Great Hornbill
ವ್ಯಂಗ್ಯಚಿತ್ರಕಾರ: ರೋಹನ್ ಚಕ್ರವರ್ತಿ, ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ನಂ. 1, ಮಿಡ್ ಫೋರ್ಡ್ ಹೌಸ್, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬಿಗ್ ಕಿಡ್ಸ್ ಕೆಂಪ್ ಹತ್ತಿರ, ಬೆಂಗಳೂರು - 560 001.

ದಿನ, ದಿನಾಂಕ ಮತ್ತು ಸಮಯ: 13 ರಿಂದ 27 ಸೆಪ್ಟೆಂಬರ್, 2014, ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರ ವರೆಗೆ ಭಾವಾರಗಳನ್ನು ಹೊರತು ಪಡಿಸಿ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ವಿ. ಈ. ನರೇಂದ್ರ, ಮ್ಯಾನೇಜಿಂಗ್ ಟ್ರಸ್ಟಿ, ಮೊಬೈಲ್ ಸಂಖ್ಯೆ : 99800 91428. (ಒನ್ಇಂಡಿಯಾ ಕನ್ನಡ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+