ಜೈಲಿನಲ್ಲಿ ದರ್ಶನ್ ಹಿಂದಿ ಚಿತ್ರವನ್ನೇ ನೋಡುತ್ತಿರುವುದು ಏಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು, ಸದ್ಯ ಪರಪ್ಪನ ಅಗ್ರಾಹರ ಜೈಲಿನಲ್ಲಿದ್ದಾರೆ. ಇವರ ಜೊತೆಗೆ ಇವರ ಸಹಚರರು ಸಹ ಇದೇ ಜೈಲಿನಲ್ಲಿದ್ದು, ನಾಲ್ವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಐಶಾರಾಮಿ ಜೀವನ ಶೈಲಿಯ ಒಡೆಯ ಜೈಲಿನಲ್ಲಿ ಹೇಗೆ ಜೀವನ್ನು ಕಳೆಯುತ್ತಿದ್ದಾರೆ ಎಂಬ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು.
ದರ್ಶನ್ ಜೈಲಿನಲ್ಲಿದ್ದಾಗ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ದರ್ಶನ್ ಅವರ ಪುತ್ರನನ್ನು ತಬ್ಬಿ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ದರ್ಶನ್ ಯಾರನ್ನು ಭೇಟಿ ಮಾಡುವ ಇಶ್ಚೆಯನ್ನು ಹೊಂದಿಲ್ಲ. ಅಲ್ಲದೆ ಜೈಲಿನ ಅಧಿಕಾರಿಗಳಿಗೆ ತಮ್ಮನ್ನು ಭೇಟಿ ಆಗಲು ಯಾರನ್ನು ಕಳಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

ಜೂನ್ 11 ರಿಂದ ಇಲ್ಲಿಯವರೆಗೆ ದರ್ಶನ್ ಪೊಲೀಸ್ ವಿಚಾರಣೆ ಹಾಗೂ ನ್ಯಾಯಾಂಗ ಬಂಧನವನ್ನು ಅನುಭವಿಸಿ ಬಳಲಿದ್ದಾರೆ. ಜೀವನದಲ್ಲಿ ಉತ್ಸಾಹ ಮಾಯವಾಗಿದೆ. ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ಸದ್ಯಕ್ಕಂತೂ ಯಾವುದೇ ಐಶಾರಾಮಿ ಸವಲತ್ತುಗಳನ್ನು ನೀಡಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ ಬಂದಿರುವ ಮಾಹಿತಿಗಳ ದರ್ಶನ್ ಅವರಿಗೆ ಜೈಲಿನಲ್ಲಿ ಕೆಲವು ಸೌಲಭ್ಯಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಏನು ಸೌಲಭ್ಯಗಳಿವೆ?
ಜೈಲಿನಲ್ಲಿ ದರ್ಶನ್ ಇಷ್ಟು ದಿನ ಚಾಪೆ ಮೇಲೆ ಮಲಗುತ್ತಿದ್ದರು. ಅಷ್ಟಾಗಿ ವಿಶೇಷ ಸೌಲಭ್ಯವನ್ನು ಏನು ನೀಡಿರಲಿಲ್ಲ. ಆದರೆ ಈಗ ಕೊಂಚ ಸೌಲಭ್ಯಗಳನ್ನು ನೀಡಿದ್ದಾರೆ ಎಂಬ ಮಾಹಿತಿಗಳು ಸಿಕ್ಕಿವೆ. ಸಹಚರರ ಜೊತೆ ಇರುವ ದರ್ಶನ್ ಸೆಲ್‌ಗೆ ಈಗ ಟಿವಿ ಹಾಗೂ ಕಾಟ್ ವ್ಯವಸ್ಥೆಯನ್ನು ಸಹ ನೀಡಲಾಗಿದೆ.
ಜೈಲಿನಲ್ಲಿರುವ ದರ್ಶನ್ ಇಲ್ಲಿಯ ವರೆಗೂ ಯಾವುದೇ ನ್ಯೂಸ್ ಚಾನೆಲ್ ಹಾಗೂ ಪೇಪರ್‌ಗಳನ್ನು ನೋಡಿಲ್ಲ. ರೇಣುಕಾಸ್ವಾಮಿ ಕೊಲೆ ಬಳಿಕ ಮಂಕಾಗಿರುವ ನಟ ದರ್ಶನ್ ಕನ್ನಡ ಚಾನೆಲ್‌ಗಳನ್ನೇ ಹಾಕುತ್ತಿಲ್ಲವಂತೆ. ಸೆಲ್‌ನಲ್ಲಿ ಕನ್ನಡ ನ್ಯೂಸ್ ಚಾನೆಲ್‌ಗಳನ್ನು ಬಿಟ್ಟು ಬಿಡಿ, ಕನ್ನಡ ಸಿನೆಮಾಗಳನ್ನು ಸಹ ನೋಡುತ್ತಿಲ್ಲ.

ಜೈಲಿನಲ್ಲಿ ದರ್ಶನ್ ಏನು ನೋಡುತ್ತಿದ್ದಾರೆ?
ನಟ ದರ್ಶನ್ ತಮ್ಮ ಸಹಚರರೊಂದಿಗೆ ಸೆಲ್‌ನಲ್ಲಿ ಬರೀ ಹಿಂದಿ ಸಿನಿಮಾಗಳನ್ನೇ ವೀಕ್ಷಣೆ ಮಾಡ್ತಾ ಇದ್ದಾರೆ. ಬರೀ ಸಿನೆಮಾಗಳನ್ನು ನೋಡಿ ಬೋರ್ ಆದಾಗ ದರ್ಶನ್ ಸ್ಫೋರ್ಟ್ಸ್ ಚಾನೆಲ್ ಹಾಕಿಕೊಂಡು ವೀಕ್ಷಣೆ ಮಾಡಿ ಟೈಮ್ ಪಾಸ್ ಮಾಡುತ್ತಿದ್ದಾರೆ.
ಇನ್ನು ಇತ್ತೀಚಿಗೆ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಭೇಟಿ ಆಗಿ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ಜಾಮೀನು ಪ್ರಕ್ರಿಯೆಗಳು ನಡೆದಿರುವುದಾಗಿ ತಿಳಿಸಿದ್ದಾರೆ. ಧೈರ್ಯದಿಂದ ಇರಬೇಕು. ನೀವು ಧೈರ್ಯ ಗೆಡಬಾರದು ಎಂದು ಹೇಳಿದ್ದಾರೆ. ಇನ್ನು ದರ್ಶನ್ ಜುಲೈ ಮೂರರವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ.












Click it and Unblock the Notifications