Get Updates
Get notified of breaking news, exclusive insights, and must-see stories!

ಟಿಪ್ಪು ಕೊಂದವರೆಂದು ತಪ್ಪು ಮಾಹಿತಿ ಹಂಚಿ, ಮುಜುಗರಕ್ಕೆ ಒಳಗಾದ ವಾಟ್ಸಾಪ್ ವಿವಿ

ಬೆಂಗಳೂರು, ನ. 18: ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಕೊಂದವರು ಯಾರು ಎಂಬ ಚರ್ಚೆ ಭಾರೀ ಮುನ್ನೆಗೆ ಬಂದಿದೆ. ಹಲವು ಮಂದಿ ಒಂದು ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಇದು ವಾಟ್ಸಾಪ್ ವಿವಿಯ ಪರಿಣಾಮ ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಹಾಗಾದರೆ ಈ ಚರ್ಚೆಯೇನು..?

ಇತಿಹಾಸವನ್ನು ಓದಿರುವ ನಮಗೆಲ್ಲಾ ಮೈಸೂರು ಹುಲಿ ಟಿಪ್ಪು ಸುಲ್ತಾನರನ್ನು ಕೊಂದದ್ದು ಬ್ರಿಟಿಷರು ಎಂಬುದು ತಿಳಿದಿದೆ. ಆದರೆ, ಇತ್ತಿಚೇಗೆ ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟಿಪ್ಪುವನ್ನು ಕೊಂದವರು ದೊಡ್ಡ ನಂಜೇಗೌಡ ಮತ್ತು ಉರಿಗೌಡ ಎಂಬ ವೀರ ಕನ್ನಡಿಗರು ಎಂದು ಹೇಳುವ ಪೋಸ್ಟರ್‌ ಒಂದನ್ನು ವ್ಯಾಪಕವಾಗಿ ಹಂಚಲಾಗುತ್ತಿದೆ. ಸತ್ಯಾಸತ್ಯತೆ ತಿಳಿಯದ ಹಲವು ಮಂದಿ ಇದನ್ನು ತಮ್ಮ ವಾಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿರುವ ಚಿತ್ರಗಳಲ್ಲಿ ಇಬ್ಬರು ವೀರರು ಕೈಯಲ್ಲಿ ಖಡ್ಗ ಹಿಡಿದು ವೀರತ್ವವನ್ನು ಪ್ರದರ್ಶಿಸುವಂತೆ ಎದೆಯುಬ್ಬಿಸಿ ನಿಂತಿದ್ದಾರೆ.

ಇತ್ತ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ಕೂಡ ಟಿಪ್ಪು ಸುಲ್ತಾನರನ್ನು ದೊಡ್ಡ ನಂಜೇಗೌಡ ಮತ್ತು ಉರಿಗೌಡ ಎಂಬುವವರು ಅಟ್ಟಾಡಿಸಿ ಕೊಂದಿದ್ದಾರೆ ಎಂದು ಹೇಳಿದ್ದಾರೆ.

Who killed Tipu A new discussion on social media

ಈ ಚಿತ್ರ ವೈರಲ್ ಆಗುತ್ತಿದ್ದಂತೆ ಹಲವು ಹೋರಾಟಗಾರರು, ಇತಿಹಾಸ ತಜ್ಞರು, ಸಂಶೋಧಕರು ಇದು ಸುಳ್ಳು ಮಾಹಿತಿ ಎಂದು ಸತ್ಯವನ್ನು ಹೊರಗೆಡವುವ ಪ್ರಯತ್ನ ಮಾಡಿದ್ದಾರೆ.

ಈ ಚಿತ್ರದಲ್ಲಿರುವ ವೀರರು, ತಮಿಳುನಾಡಿನ ಶಿವಗಂಗೆ ಎಂಬಲ್ಲಿ ಜನಿಸಿದ ಪೆರಿಯ ಮರುದು ಮತ್ತು ಚಿಣ್ಣ ಮರುದು ಎಂಬ ಹೆಸರಿನ ಸಹೋದರರು ಎಂಬ ಬಗ್ಗೆ ಹಲವು ದಾಖಲೆಗಳು ಹೇಳುತ್ತವೆ. ಇದೇ ಚಿತ್ರವನ್ನು ಬಳಸಿಕೊಂಡು ಕನ್ನಡಿಗರು ಟಿಪ್ಪುವನ್ನು ಕೊಂದರು ಎಂಬ ಅಂಶವನ್ನು ವೈರಲ್ ಮಾಡಲಾಗುತ್ತಿದೆ.

ಬರಹಗಾರ ಕನಕರಾಜು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಅಸಲಿಗೆ ಇಂದಿನ ತಮಿಳುನಾಡಿನ ಅಂದಿನ ಸಿವಗಂಗೈ ಪ್ರಾಂತ್ಯವನ್ನು ಆಳುತ್ತಿದ್ದ ತೇವರ್ ಜನಾಂಗದ ಈ ಕಿರು ಅರಸರುಗಳು ತಮ್ಮ ಕುಲದವರೇ ಆದ ರಾಣಿ ವೀರ ವೇಲು ನಾಚ್ಚಿಯಾರ್ ನಂತರ ಬ್ರಿಟೀಶರ ವಿರುದ್ಧ ಹೋರಾಡಿ ಮಡಿದ ಮರುದು ಸೋದರರು. ಇಲ್ಲಿ ಮಜಾ ಏನೆಂದರೆ ಈ ಇಬ್ಬರ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಟಿಪ್ಪು ಬೆಂಬಲವಾಗಿ ನಿಂತ ಇತಿಹಾಸ. ರಾಣಿ ವೇಲು ನಾಚ್ಚಿಯಾರ್ ರ ಬ್ರಿಟೀಶ್ ವಿರುದ್ಧದ ಹೋರಾಟಕ್ಕೂ ಹೈದರ್ ಅಲಿ ಜೊತೆಯಾಗಿ ನಿಂತ ಇತಿಹಾಸ ಇಂದಿಗೂ ಇದೆ. ಇದು ತಮಿಳುನಾಡಿನ ಪಠ್ಯಗಳಲ್ಲಿ ಇಂದಿಗೂ ಇರುವ ವಿಷಯ. ಆದರೆ ಸಂಘಿಗಳು ಈ ಚಿತ್ರಗಳನ್ನು ಬಳಸಿಕೊಂಡು ಟಿಪ್ಪುವನ್ನು ಕೊಂದ ಮಂಡ್ಯದ ಗೌಡರು ಎಂದು ತಿರುಚಿ ಕೂಗುತ್ತಿದ್ದಾರೆ! ಸಂಘಿ, ಬಿಜೆಪಿ ಹಾಗು ಎಲ್ಲಾ ಧರ್ಮಗಳ ಮೂಲಭೂತವಾದಿಗಳಿಗೆ ಇತಿಹಾಸ ಸಮಸ್ಯೆಯೇ" ಎಂದು ಹೇಳಿದ್ದಾರೆ.

Who killed Tipu A new discussion on social media

ಪತ್ರಕರ್ತ ನವೀನ್ ಸೂರಿಂಜೆ ಈ ವಿಷಯ ಹೇಗೆ ಒಕ್ಕಲಿಗ ಸಮುದಾಯದ ವಿರುದ್ಧ ದ್ವೇಷ ಸೃಷ್ಟಿಸುವ ಅಜೆಂಡಾವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳೆದುಕೊಂಡಿದ್ದಾರೆ.

"ಟಿಪ್ಪು ಸುಲ್ತಾನ್ ನನ್ನು ಗೌಡರು ಕೊಂದರು ಎಂದು ಸಂಘಪರಿವಾರ ಹೊಸ ಕತೆಯನ್ನು ಸೃಷ್ಟಿಸುವುದರ ಹಿಂದೆ , ಒಕ್ಕಲಿಗರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಗುಪ್ತ ಅಜೆಂಡಾ ಹೊಂದಿದೆ. ಮುಂದಿನ ಪೀಳಿಗೆಯು ಇತಿಹಾಸವನ್ನು ಅಧ್ಯಯನ ಮಾಡುವಾಗ ಒಕ್ಕಲಿಗರು ಬ್ರಿಟೀಷರ ಜೊತೆ ಇದ್ದರು ಎಂಬ ಅಂಶ ಇರಕೂಡದು ಎಂದಿದ್ದರೆ ಸಂಘಪರಿವಾರದ ಈ ಹಿಡನ್ ಅಜೆಂಡಾವನ್ನು ಈಗಲೇ ಸಮುದಾಯ ವಿರೋಧಿಸಬೇಕು. ನಮ್ಮ ನಾಡಿನ ಹೆಮ್ಮೆಯ ಒಕ್ಕಲಿಗರು ಟಿಪ್ಪುವಿನಂತೆಯೇ ಬ್ರಿಟೀಷರ ವಿರುದ್ಧವಿದ್ದರು. ಬ್ರೀಟಿಷರ ಪರವಿದ್ದಾರೆ ಎಂಬ ಅನುಮಾನದಲ್ಲಿ ಕೊಡವರು, ಕ್ರಿಶ್ಚಿಯನ್ನರು, ನಾಯರ್ ಗಳನ್ನು ಟಿಪ್ಪು ವಿಚಾರಣೆ ನಡೆಸಿದ್ದ ಮತ್ತು ಅವರ ಮೇಲೆ ನಿಗಾ ಇರಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆಯೇ ಹೊರತು ಒಕ್ಕಲಿಗರನ್ನು ಟಿಪ್ಪು ಟಾರ್ಗೆಟ್ ಮಾಡಿದ ದಾಖಲೆಗಳು ಸಿಗಲ್ಲ. ಹಾಗೆ ನೋಡಿದರೆ ಒಕ್ಕಲಿಗರು ಅಥವಾ ಬಂಟರು ಶಿಫಾರಸ್ಸು ಮಾಡಿದರೆ ಟಿಪ್ಪು ಯಾರ ಮೇಲಿನ ದಾಳಿಯನ್ನಾದರೂ ನಿಲ್ಲಿಸಿಬಿಡುತ್ತಿದ್ದ. ಬ್ರಿಟೀಷರು ಚರ್ಚ್ ಕಟ್ಟುತ್ತಿದ್ದಾರೆ ಎಂಬ ಅನುಮಾನದಲ್ಲಿ ಕ್ರಿಶ್ಚಿಯನ್ ಚರ್ಚ್ ಮೇಲೆ ಟಿಪ್ಪು ದಾಳಿ ಮಾಡಿದಾಗ ಒಕ್ಕಲಿಗರಾಗಿರುವ ಬಂಟರ ಮನವಿ ಮೇರೆಗೆ ದಾಳಿಯನ್ನೇ ಕೈ ಬಿಟ್ಟ ಉದಾಹರಣೆಗಳು ನಮ್ಮ ಮುಂದಿವೆ" ಎಂದಿದ್ದಾರೆ.

ಇನ್ನು ನಂಜೇಗೌದ ಮತ್ತು ಉರಿಗೌಡ ಎಂಬ ಹೆಸರುಗಳು 2017 ರಲ್ಲಿ ಮೊದಲ ಬಾರಿಗೆ ಬಳಕೆಯಾಗಿವೆ ಎಂದು ಬರಹಗಾರರು, ಪ್ರಾಧ್ಯಾಪಕರು ಆದ ಪುರುಷೋತ್ತಮ ಬಿಳಿಮಲೆ ಅವರು ಹೇಳುತ್ತಾರೆ.

"ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಮೊದಲು ಲೇಖನ ಪ್ರಕಟ ಆದದ್ದು 2017ರಲ್ಲಿ

Indian People's Congress ಎಂಬ ವೆಬ್‌ ಸೈಟಲ್ಲಿ. ಅದರಲ್ಲಿ ಲೇಖಕರ ಹೆಸರಿಲ್ಲ. ಆಮೇಲೆ https://www.quora.com/How-did-Tipu-Sultan-die ದಲ್ಲಿ ಉರಿಗೌಡ ಮತ್ತು ನಂಜೆಗೌಡರ ಹೆಸರನ್ನು ಉಲ್ಲೇಖಿಸಿ ʼಕುಂಬಳ ಕಾಯಿʼ ಎಂಬ ಮಹನೀಯರು ಒಂದು ಪಾರಾ ಬರೆದರು. ತಮಿಳುನಾಡಿನ ಶಿವಗಂಗೆ ಎಂಬಲ್ಲಿ ಜನಿಸಿದ ಪೆರಿಯ ಮರುದು ಮತ್ತು ಚಿಣ್ಣ ಮರುದು ಎಂಬ ಹೆಸರಿನ ಸಹೋದರರು ಬ್ರಿಟಿಷರ ವಿರುದ್ಧ ಗೆರಿಲ್ಲಾ ಹೋರಾಟ ನಡೆಸಿದ ಧೀರರ ಬಗ್ಗೆ ನಾನು ಅಮರ ಸುಳ್ಯದ ರೈತ ಹೋರಾಟ ಕೃತಿಯಲ್ಲಿ ಉಲ್ಲೇಖಿಸಿದ್ದೇನೆ. ಅವರ ಚಿತ್ರವನ್ನು ಆಧರಿಸಿ ಉರಿಗೌಡ ಮತ್ತು ನಂಜೇಗೌಡರು ಸೃಷ್ಟಿಯಾದ್ದು 2022ರಲ್ಲಿ ಮೊದಲ ಚಿತ್ರದಲ್ಲಿ ಮರುದು ಸಹೋದರರು, ಎರಡನೆಯದರಲ್ಲಿ ಹೆಸರೇ ಇದೆ" ಎಂದು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+