'ರಾಜಕೀಯ ನಾಯಕರನ್ನ, ಜನರನ್ನ ಕರೆಯಲು ಇವರ್‍ಯಾರು' ಸಂತೋಷ್ ಲಾಡ್ ಕಿಡಿ
ಬೆಂಗಳೂರು ಜನವರಿ 11: ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸದ ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ಮಾಡಿದ್ದಾರೆ. 'ರಾಜಕೀಯ ನಾಯಕರನ್ನ ಜನರನ್ನ ಕರೆಯಲು ಇವರ್‍ಯಾರು' ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಏರ್ಪೋಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಸೇರಿದಂತೆ ರಾಮನ ಭಕ್ತರು ಬೇರೆ ಬೇರೆ ದೇವರನ್ನು ಇಷ್ಟಪಡುತ್ತಾರೆ. ರಾಮಮಂದಿರ ಉದ್ಘಾಟನೆ ಚುನಾವಣೆ ಸಂದರ್ಭದಲ್ಲಿ ಆಗುತ್ತೆ ಅಂತ ಇಡಿ ಪ್ರಪಂಚಕ್ಕೆ ಗೊತ್ತಿತ್ತು. ಮಾಡುವವರು ಕ್ವೈಟ್ ಆಗಿ ಮಾಡಬೇಕಿತ್ತು ಇಷ್ಟೆಲ್ಲಾ ಯಾಕೆ ಬೇಕಿತ್ತು' ಎಂದು ಕಿಡಿ ಕಾರಿದ್ದಾರೆ.

'ಚುನಾವಣೆ ಬಂದಿದೆ ಹೀಗಾಗಿ ಇಂದು ಇವರು ಅದನ್ನು ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಹಿತಾಸಕ್ತಿಯಿಂದ ಅವರು ಮಾಡ್ತಿದ್ದಾರೆ. 30 ವರ್ಷಗಳಿಂದ ಇದನ್ನೆ ಇಟ್ಟುಕೊಂಡು ಬರ್ತಿದ್ದಾರೆ ಇಟ್ಟಿಗೆಗಳನ್ನೆಲ್ಲ ತೆಗೆದುಕೊಂಡು ಹೋಗಿ ರಾಮನ ಭೂಮಿ ಮೇಲೆ ಹಾಕಿದ್ದಾರೆ' ಎಂದು ಆಕ್ರೋಶಗೊಂಡರು.
'ರಾಮನು ಬಿಟ್ಟು ಬೇರೆ ವಿಚಾರ ಸಾಕಷ್ಟಿದೆ ನೀವು ಇದನ್ನೆ ಕೇಳ್ತಿರಾ ನಾವು ಅದನ್ನೇ ಮಾತನಾಡಿ ಸುಸ್ತಾಗಿದ್ದೇವೆ. ರಾಮನನ್ನ ಬಿಟ್ಟು ಮಾತನಾಡಲು ಬೇರೆ ಸಾಕಷ್ಟು ಇದೆ. ಯುರೋಪ್ 2 ಲಕ್ಷ ಪಿಹೆಚ್ಡಿ ಥೀಸಸ್ ಮಾಡಿ ಸಬ್ ಮೀಟ್ ಮಾಡ್ತಿದ್ದಾರೆ. ಚೈನಾ ಜಿಡಿಪಿ ನಮಗಿಂತ ಜಾಸ್ತಿ ಇದೆ ಅದನ್ನೆಲ್ಲ ಚರ್ಚೆ ಮಾಡಬೇಕು. ಅದನ್ನ ಬಿಟ್ಟು ಇದನ್ನ ಮಾಡಿದ್ರೆ ಅವರಿಗೆ ಅನುಕೂಲವಾಗುತ್ತೆ ಅಷ್ಟೆ. ಬಿಜೆಪಿ ಗೆ ಇದು ಬಿಟ್ರೆ ಬೇರೆ ಅಜೆಂಡ ಇಲ್ಲ. ರಾಮಮಂದಿರ ಉದ್ಘಾಟನೆ ಚುನಾವಣೆ ಸಂಧರ್ಬದಲ್ಲಿ ಆಗುತ್ತೆ ಅಂತ ಇಡಿ ಪ್ರಪಂಚಕ್ಕೆ ಗೊತ್ತಿತ್ತು. ದೇವರು ಅವರಿಗೆ ಒಳ್ಳೆಯದು ಮಾಡಲಿ' ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ಕೆಂಡ ಕಾರಿದರು.
ದೆಹಲಿಯಲ್ಲಿ ಎಐಸಿಸಿ ಮಿಟಿಂಗ್
ಲೋಕಸಭಾ ಪೂರ್ವ ತಯಾರಿ ಸಿದ್ದತೆ ಹಿನ್ನಲೆ ದೆಹಲಿಯಲ್ಲಿ ಎಐಸಿಸಿ ಮಿಟಿಂಗ್ ಕರೆಯಲಾಗಿದೆ. ಹೀಗಾಗಿ ದೆಹಲಿಗೆ ಕೈ ನಾಯಕರು ತೆರಳುತ್ತಿದ್ದರು. ಇದೇ ವೇಳೆ ಸಚಿವ ಬೋಸರಾಜ್ ಹಾಗೂ ಕೆಜೆ ಜಾರ್ಜ್, ಸಂತೋಷ್ ಲಾಡ್ ಪ್ರಯಾಣ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್, ಸಚಿವ ಎಂಬಿ ಪಾಟೀಲ್, ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ಕೆಹೆಚ್ ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ ಕರ್, ಬೈರತಿ ಸುರೇಶ್, ಮಹದೇವಪ್ಪ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ತೆರಳಿದರು.
ಕೆಂಪೇಗೌಡ ಏರ್ಪೊಟ್ ನಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಹೇಳಿಕೆ
ಸುರ್ಜೆವಾಲಾರವರು ನಮಗೆ ಅತ್ಯುತ್ತಮ ಸಲಹೆಗಳನ್ನ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ ಮನೆ ಪ್ರಚಾರಕ್ಕೆ ಮೂರು ಸಾವಿರ ಕಾರ್ಯಕರ್ತರಿಗೆ ಅವಕಾಶ ಮಾಡಿದ್ದಾರೆ. ಬೋರ್ಡ್ ಹಾಗೂ ನಿಗಮ ಮಂಡಳಿಗಳನ್ನ ಕಾರ್ಯಕರ್ತರಿಗೆ ಮುಖಂಡರಿಗೆ ಸಮವಾಗಿ ಹಂಚಲಾಗುತ್ತೆ. 28 ಕ್ಕೆ 28 ಸ್ಥಾನಗಳು ನಾವು ರಾಜ್ಯದಲ್ಲಿ ಗೆಲ್ಲುತ್ತೆವೆ. ಹೈಕಮಾಂಡ್ ಟಾಸ್ಕ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, 'ನಾವು ಪಕ್ಷಕ್ಕೆ ಎಷ್ಟೋ ಮಾಡಿದ್ದೇವೆ. ಕೋಲಾರದಲ್ಲಿ ಸ್ಪರ್ಧೆ ವಿಚಾರ ಹೈಕಮಾಂಡ್ ಹೇಳಿದ್ರೆ ಅದಕ್ಕೆ ನಾನು ಬದ್ಧ' ಎಂದ ಕೆಹೆಚ್ ಮುನಿಯಪ್ಪ ಇದೇ ವೇಳೆ ಹೇಳಿದರು.












Click it and Unblock the Notifications