ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ವಿ ರಸ್ತೆಯ ಎಡಬದಿ ವೈಟ್ ಟಾಪಿಂಗ್ ಕಾಮಗಾರಿ ಶುರು

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಇಂದಿನಿಂದ ಆರ್‌ವಿ ರಸ್ತೆಯ ಎಡಬದಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಜಯನಗರದ ಆರ್‌ವಿ ಟೀಚರ್ಸ್ ಕಾಲೇಜು ಸಿಗ್ನಲ್‌ನಿಂದ ಸೌತ್‌ಎಂಡ್ ಸರ್ಕಲ್ ಸಿಗ್ನಲ್ ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಬಿಬಿಎಂಪಿ ಮನವಿ ಮಾಡಿದೆ.

ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ಸೌತ್‌ಎಂಡ್ ಸಿಗ್ನಲ್‌ವರೆಗಿನ ರಸ್ತೆಯಲ್ಲಿ ಈಗ ಬಲಭಾಗದ ಒಂದು ಮಾರ್ಗ ವೈಟ್‌ ಟಾಪಿಂಗ್ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು

ಪರ್ಯಾಯ ಮಾರ್ಗಗಳು: ಸೌತ್‌ಎಂಡ್ ವೃತ್ತದಿಂದ ಕೃಂಬಿಗಲ್ ರಸ್ತೆ ಎಚ್‌ ಸಿದ್ದಯ್ಯ ವೃತ್ತದ ಕಡೆಗೆ ಹೋಗುವ ವಾಹನಗಳು ಪಟಾಲಮ್ಮ ದೇವಾಲಯ ರಸ್ತೆ,ಕನಕಪುರ ರಸ್ತೆ ಮೂಲಕ ಅಥವಾ ಸೌತ್‌ಎಂಡ್ ರಸ್ತೆ, ಕೆಆರ್ ರಸ್ತೆ ಮಾರ್ಗವಾಗಿ ಸಂಚರಿಸಬಹುದು. ಕನಕಪಾಳ್ಯ ರಸ್ತೆ , ಸಿದ್ದಾಪುರ ರಸ್ತೆ ಕಡೆಗೆ ಹೋಗುವವರು ಸೌತ್‌ಎಂಡ್ ವೃತ್ತದಿಂದ ಅಶೋಕ ಪಿಲ್ಲರ್ ಮಾರ್ಗವಾಗಿ ಹಾಗೂ ಸುತ್ತಮುತ್ತಲ ಇತರೆ ರಸ್ತೆಗಳ ಮೂಲಕ ಚಲಿಸಬಹುದು.

White Topping Will Start In RV Road From Today

ಶನಿವಾರದಿಂದ ಈ ರಸ್ತೆಯ ಎಡಭಾಗದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಕಾಮಗಾರಿ ನಡೆಯುವ ವೇಳೆ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಸ್ಥಳೀಯ ಸಾರ್ವಜನಿಕರು ಯೋಜನೆಯಿಂದಾಗುವ ಅಡಚಣೆ ಸಹಕರಿಸಬೇಕೆಂದು ಪಾಲಿಕೆ ಯೋಜನಾ ವಿಭಾಗದ ಎಂಜಿನಿಯರ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.

English summary
BBMP Will Develop RV road To South End Circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X