Bengaluru Metro Yellow Line: ಮೆಟ್ರೋ ಹಳದಿ ಲೈನ್ ಆರಂಭಕ್ಕೆ ಯಾವಾಗ ಗ್ರೀನ್ ಸಿಗ್ನಲ್, ಇಲ್ಲಿದೆ ಅಪ್ಡೇಟ್ಸ್!
ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಆಗಿದೆ. ಬೆಂಗಳೂರು ಮೆಟ್ರೋದಲ್ಲಿ ನಾಲ್ಕು ಪ್ರಮುಖ ಲೈನ್‌ಗಳು ಇವೆ. ಮೆಟ್ರೋ ಬೆಂಗಳೂರು ಹಾಗೂ ಬೆಂಗಳೂರಿನ ಹೊರ ವಲಯಗಳಿಗೆ ವಿಸ್ತರಣೆಯಾದಂತೆ ಮೆಟ್ರೋ ಲೈನ್ (ಒಂದೊಂದು ಮಾರ್ಗಕ್ಕೂ ಒಂದೊಂದು ಬಣ್ಣ)ಗಳು ಸೇರ್ಪಡೆಯಾಗುತ್ತಿವೆ. ಇದೀಗ ಯೆಲ್ಲೋ ಲೈನ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಆಗುತ್ತಿದೆ. ಇದೀಗ ಬೆಂಗಳೂರು ಮೆಟ್ರೋವಿನ ಯೆಲ್ಲೋ ಲೈನ್‌ಗೆ ಸಂಬಂಧಿಸಿದಂತೆ ಈ ವರ್ಷಾಂತ್ಯದ ಒಳಗೆ ಇಲ್ಲವೇ ಮುಂದಿನ ವರ್ಷದ ಪ್ರಾರಂಭದಲ್ಲಿ ಕೋಲ್ಕತ್ತಾದಿಂದ ಚಾಲಕರಹಿತ ಮೆಟ್ರೋ ರೈಲು ಬೋಗಿಗಳು ಬರಲಿವೆ ಎಂದು ಹೇಳಲಾಗಿದೆ. ಈ ಮೂಲಕ ಯೆಲ್ಲೋ ಲೈನ್ ಮೆಟ್ರೋ ಶುರುವಾಗುವುದಕ್ಕೆ ದಿನಗಣನೆ ಶುರುವಾಗಿದೆ.
ಬೆಂಗಳೂರು ಮೆಟ್ರೋಗೆ ಸಂಬಂಧಿಸಿದಂತೆ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮೆಟ್ರೋ ರೆಡ್‌ಲೈನ್ ಹಾಗೂ ಯೆಲ್ಲೋ ಲೈನ್‌ಗೆ ಸಂಬಂಧಿಸಿದಂತೆ ನಿತ್ಯವೂ ಒಂದೊಂದು ಪ್ರಮುಖ ಅಪ್ಡೇಟ್ಸ್‌ಗಳು ಬರುತ್ತಿವೆ. ಇದೀಗ ಮೆಟ್ರೋ ರೈಲು ಯೆಲ್ಲೋ ಮಾರ್ಗಕ್ಕೆ ಸಂಬಂಧಿಸಿದ ದೊಡ್ಡ ಅಪ್ಡೇಟ್ಸ್ ಬಂದಿದೆ. ಯೆಲ್ಲೋ ಲೈನ್ ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗಕ್ಕೆ ಎಲೆಕ್ಟ್ರಾನಿಕ್ ಸಿಟಿ ಮೂಲಕ ಸಾಗಲಿದೆ. ಅಂದರೆ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಮೆಟ್ರೋ ರೈಲು ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಸಾಗಲಿದೆ.

ಎಲೆಕ್ಟ್ರಾನಿಕ್ ರಸ್ತೆ ಸೇರಿದಂತೆ ಬೆಂಗಳೂರಿನ ಹೊರ ವಲಯದ ವಿವಿಧ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗುವುದು ಹೆಚ್ಚಾಗಿ ಇದೆ. ಹೀಗಾಗಿ, ಈ ಭಾಗದಲ್ಲಿ ಮೆಟ್ರೋಗೆ ಸಂಬಂಧಿಸಿದ ಅಪ್ಡೇಟ್ಸ್‌ಗಳನ್ನು ಜನ ಅತ್ಯಂತ ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನು ಯೆಲ್ಲೋ ಲೈನ್‌ನಲ್ಲಿ ಸಾವಿರಾರು ಜನ ಸಂಚರಿಸುವ ನಿರೀಕ್ಷೆ ಇದೆ. ಇದು ಮೂರು ಇಂಟರ್‌ಚೇಂಜ್‌ಗಳನ್ನು ಸಂಪರ್ಕಿಸಲಿದ್ದು, ಇದರಿಂದ ಪ್ರಯಾಣಿಕರ ಸಂಖ್ಯೆ ಈ ಮಾರ್ಗದಲ್ಲಿ ಹೆಚ್ಚಾಗಿ ಇರಲಿದೆ ಎನ್ನಲಾಗಿದೆ. ಇದೀಗ ಈ ಮಾರ್ಗದಲ್ಲಿ ಸಂಚಾರಕ್ಕೆ ಅಳವಡಿಸಿಕೊಳ್ಳಲಾಗುವ ರೈಲು ಬೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸಾರ್ವಜನಿಕರ ಬಳಕೆಗೆ ಅನುಗುಣವಾಗಿ ಹೊಸ ರೈಲು ಬೋಗಿಗಳು ಇರಲಿವೆ ಎಂದು ಹೇಳಲಾಗಿದೆ. ಇದಕ್ಕಾಗಿ ಭಾರತದ ಸ್ಟೇನ್‌ಲೆಸ್ ಸ್ಟೀಲ್‌ಗಳನ್ನು ಬಳಸಲಾಗಿದೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳಿನಿಂದ ಯೆಲ್ಲೋ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲ ಆಗುವುದರೊಂದಿಗೆ ಬೆಂಗಳೂರಿನಲ್ಲಿ ಗಣನೀಯ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ.
ಲಕ್ಷಾಂತರ ಜನ ಪ್ರಯಾಣಿಸುವ ಮಾರ್ಗ: ಬೆಂಗಳೂರು ಯೆಲ್ಲೋ ಲೈನ್‌ನಲ್ಲಿ ಲಕ್ಷಾಂತರ ಜನ ಸಂಚರಿಸುವ ಮಾರ್ಗವಾಗಿದೆ. ಇಂಟರ್ ಚೇಂಜ್ ಸಹ ಇರುವುದರಿಂದ ಈ ಮಾರ್ಗದಲ್ಲಿ ಅಂದಾಜು ಲಕ್ಷ ಜನ ಪ್ರತಿನಿತ್ಯ ಪ್ರಯಾಣ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. 2025ನೇ ಸಾಲಿನ ಜನವರಿಯಲ್ಲಿ ಹಳದಿ ಮಾರ್ಗದಲ್ಲಿ ಮೂರು ರೈಲುಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರು ಈಗಾಗಲೇ ಮಾತನಾಡಿದ್ದಾರೆ. ಈ ರೈಲುಗಳೊಂದಿಗೆ ಮುಂದಿನ ವರ್ಷ ಜನವರಿ ಎರಡನೇ ಮತ್ತು ಕೊನೆಯ ವಾರದಲ್ಲಿ ಯೆಲ್ಲೋ ಲೈನ್ ಶುಭಾರಂಭವಾಗುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮೆಟ್ರೋ ಯೆಲ್ಲೋ ಲೈನ್: ಮೆಟ್ರೋ ಯೆಲ್ಲೋ ಲೈನ್ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುತ್ತದೆ. ಇದು ಒಟ್ಟು 18.8 ಕಿ.ಮೀ ವಿಸ್ತಾರವನ್ನು ಹೊಂದಿದೆ. ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ನಿಲ್ದಾಣಗಳು ಇವೆ. ಗ್ರೀನ್ ಲೈನ್ ಆರ್.ವಿ.ರಸ್ತೆ ನಿಲ್ದಾಣ, ರೋಜ್ ಲೈನ್ (ಕಾಳೇನ ಅಗ್ರಹಾರ- ನಾಗವಾರ) ಜಯದೇವ ನಿಲ್ದಾಣ ಹಾಗೂ ಬ್ಲೂ ಲೈನ್ (ರೇಷ್ಮೆ ಮಂಡಳಿ - ಕೆ.ಆರ್.ಪುರ- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ರೇಷ್ಮೆ ಮಂಡಳಿ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ (ಮಾರ್ಗ ಬದಲಾವಣೆ) ನಿಲ್ದಾಣಗಳನ್ನು ಹೊಂದಿದೆ.












Click it and Unblock the Notifications