ದೇವೇಗೌಡರು ಪ್ರಧಾನಿ ಆದಾಗ ಅಯ್ಯೋ, ನಿಮ್ಮ ಹಣೆಬರಹ ಅಂದಿದ್ದವರು ಯಾರು?
Recommended Video

ಬೆಂಗಳೂರು, ನವೆಂಬರ್ 18: ಪ್ರಧಾನಿಯಾಗುತ್ತೇನೆ ಎಂದು ನಾನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದು ಹೇಳಿದ ದೇವೇಗೌಡರು, ಜಾತ್ಯತೀತ ಪಕ್ಷಗಳು ಒಂದಾಗಿ ತಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಸಂದರ್ಭವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಹದಿಮೂರು-ದಿನಗಳ ಸರಕಾರ ಪತನಗೊಂಡಾಗ ಪರ್ಯಾಯ ಸರಕಾರ ರಚನೆಯ ಕಸರತ್ತು ಪ್ರಾರಂಭವಾಗಿತ್ತು.
ಮುಖ್ಯಮಂತ್ರಿಯಾಗಿ ಕರ್ನಾಟಕ ಭವನದಲ್ಲಿ ತಂಗಿದ್ದ ನನ್ನ ಬಳಿ ಆಗಮಿಸಿದ ತೃತೀಯ ರಂಗದ ನಾಯಕರು ಈ ದೇಶದ ಪ್ರತಿಪಕ್ಷಗಳಲಿ ವಾಜಪೇಯಿ ಅವರನ್ನು ಸರಿಗಟ್ಟುವ ನಾಯಕರೇ ಇಲ್ಲ ಎಂದು ಬಣ್ಣಿಸತೊಡಗಿದಾಗ ಒಂದು ನೂರು ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಮತ್ತೊಬ್ಬ ಸಮರ್ಥ ನಾಯಕನಿಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ ಎಂದು ನಾನು ಹೇಳಿದೆ.

ಆಗ, ಹಾಗಾದರೆ ನೀವೇ ನಾಯಕತ್ವ ವಹಿಸಿ ಎಂದು ಅವರೆಲ್ಲ ಒತ್ತಡ ಮತ್ತು ಒತ್ತಾಯದಿಂದ ಪ್ರಧಾನಿ ಸ್ಥಾನವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ನನಗೆ ಭಾಷೆ ಬರುವುದಿಲ್ಲ ಅಂದರೂ ಅಲ್ಲಿ ಆಗಮಿಸಿದ್ದ ನಾಯಕರನ್ನು ಬಿಡಲಿಲ್ಲ. ಪ್ರಧಾನಿ ಹುದ್ದೆಗೆ ಆಯ್ಕೆಯಾದ ವಿಷಯವನ್ನು ಮೊದಲು ನನ್ನ ಪತ್ನಿ ಚೆನ್ನಮ್ಮ ಅವರಿಗೆ ದೂರವಾಣಿ ಮೂಲಕ ತಿಳಿಸಿದೆ.
ಅಯ್ಯೋ, ನಿಮ್ಮ ಹಣೆಬರಹ! ಎಂದು ಚೆನ್ನಮ್ಮ ಅವರು ಪ್ರತಿಕ್ರಿಯಿಸಿದರು. ಹೀಗೆ ಪ್ರಧಾನಿ ಸ್ಥಾನ ತೊರೆದ ಇಪ್ಪತ್ಮೂರು ವರ್ಷಗಳ ನಂತರ ದೇವೇಗೌಡ ಅವರು ಪ್ರಧಾನಿ ಆಯ್ಕೆ ವಿಷಯದ ಅಂದಿನ ಕಸರತ್ತಿನ ಗುಟ್ಟನ್ನು ರಟ್ಟು ಮಾಡಿದರು.












Click it and Unblock the Notifications