• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತಿ ಕಡಿಮೆ ಖರ್ಚಿನಲ್ಲಿ ಕೆಂಪೇಗೌಡ ಏರ್‌ಪೋರ್ಟ್ ತಲುಪುವುದು ಹೇಗೆ?

|

ಬೆಂಗಳೂರು, ಫೆಬ್ರವರಿ 13: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕನಿಷ್ಠವೆಂದರೂ 300 ರೂ. ಬೇಕು.

ಬಿಎಂಟಿಸಿಯ ವಾಯು, ವಜ್ರ ಹೊರತುಪಡಿಸಿ ಕ್ಯಾಬ್‌ಗಳಲ್ಲಿ ತೆರಳುವುದಾದರೆ 500 ರಿಂದ 1 ಸಾವಿರದವರೆಗೂ ತೆರಬೇಕಾಗುತ್ತದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗಳು,ಪ್ರಯಾಣಿಕರು ಏರ್‌ಪೋರ್ಟ್‌ ತಲುಪುವುದು ಸುಲಭವಾಗಿದೆ.

ಬೆಂಗಳೂರು ಏರ್‌ ಪೋರ್ಟ್‌ನಲ್ಲಿ 80 ಅಡಿ ಕೆಂಪೇಗೌಡ ಪ್ರತಿಮೆ

ಕೆಂಪೇಗೌಡ ಏರ್‌ಪೋರ್ಟ್‌ ಬಳಿ ನೂತನ ರೈಲ್ವೆ ನಿಲ್ದಾಣ ನಿರ್ಮಾಣವಾಗುತ್ತಿದ್ದು ಏಪ್ರಿಲ್‌ನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಕೆಂಪೇಗೌಡ ವಿಮಾನ ನಿಲ್ದಾಣದ 27 ಸಾವಿರ ಸಿಬ್ಬಂದಿ ಕಡಿಮೆ ಖರ್ಚಿನಲ್ಲಿ ಏರ್‌ಪೋರ್ಟ್ ತಲುಪಬಹುದಾಗಿದೆ.

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ತಮ್ಮ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ದೇವನಹಳ್ಳಿ ವಿಶೇಷ ರೈಲ್ವೆ ವ್ಯವಸ್ಥೆಯನ್ನು ರೂಪಿಸುತ್ತಿದ್ದಾರೆ. ಈಗ ದೇವನಹಳ್ಳಿ ಮಾರ್ಗದಲ್ಲಿ ಮೂರು ಜೋಡಿ ರೈಲುಗಳು ಸಂಚರಿಸುತ್ತಿವೆ. 4.30 ಕೆಂಗೇರಿಯಿಂದ ಅಥವಾ ಕ್ರಾಂತಿವೀರಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಏರ್‌ಪೋರ್ಟ್‌ಗೆ ಹೆಚ್ಚುವರಿ ರೈಲನ್ನು ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

 ಹೆಚ್ಚುವರು ರೈಲು ಓಡಾಟಕ್ಕೆ ಅನುಮತಿ

ಹೆಚ್ಚುವರು ರೈಲು ಓಡಾಟಕ್ಕೆ ಅನುಮತಿ

ಹೆಚ್ಚುವರಿ ರೈಲು ಸಂಚಾರಕ್ಕೆ ಬಿಐಎಎಲ್ ಅನುಮತಿ ಕೋರಿತ್ತು ಅದಕ್ಕೆ ನೈಋತ್ಯ ರೈಲ್ವೆ ಒಪ್ಪಿಗೆ ಸೂಚಿಸಿದೆ. ಏರ್‌ಪೋರ್ಟ್ ಸಿಬ್ಬಂದಿಯ ಕೆಲಸದ ಅವಧಿಯಂತೆ ರೈಲು ಸಂಚರಿಸುತ್ತದೆ.

 ಕಡಿಮೆ ಆದಾತ ಇರುವ ಸಿಬ್ಬಂದಿ

ಕಡಿಮೆ ಆದಾತ ಇರುವ ಸಿಬ್ಬಂದಿ

ಈಗಿರುವ ಸಾಕಷ್ಟು ಏರ್‌ಪೋರ್ಟ್ ಸಿಬ್ಬಂದಿಗಳು ಕಡಿಮೆ ಆದಾಯಹೊಂದಿದ್ದಾರೆ. ಬಿಎಂಟಿಸಿ ವಾಯು, ವಜ್ರ ಸೇವೆ, ಕ್ಯಾಬ್‌ಗಳು, ಟ್ಯಾಕ್ಸಿ ಶೇರ್ ಮೂಲಕ ಓಡಾಡುತ್ತಿದ್ದಾರೆ. ಸೆಕ್ಯುರಿಟಿ, ಕಾರ್ಗೋ, ರೀಟೇಲ್, ಹೌಸ್‌ಕೀಪಿಂಗ್‌ನವರು ರಾತ್ರಿಪಾಳಿಯಲ್ಲೂ ಕೆಲಸ ನಿರ್ವಹಿಸುತ್ತಾರೆ. ಟರ್ಮಿನಲ್-2 ಪ್ರಾರಂಭವಾದಾಗಿನಿಂದ ಸಿಬ್ಬಂದಿಯ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

 ಏರ್‌ಪೋರ್ಟ್‌ ಸಿಬ್ಬಂದಿ ಶಿಫ್ಟ್‌ಗೆ ತಕ್ಕಂತೆ ರೈಲು ಸೇವೆ

ಏರ್‌ಪೋರ್ಟ್‌ ಸಿಬ್ಬಂದಿ ಶಿಫ್ಟ್‌ಗೆ ತಕ್ಕಂತೆ ರೈಲು ಸೇವೆ

ಏರ್ಪೋರ್ಟ್ ಸಿಬ್ಬಂದಿಯ ಪಾಳಿಗೆ ತಕ್ಕಂತೆ ರೈಲು ಓಡಾಡಲಿದೆ. ಈಗಿರುವ ರೈಲು ಅದರ ಜೊತೆಗೆ ಹೆಚ್ಚುವರಿ ರೈಲು ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ರೈಲುಗಳ ನಡುವಿನ ಅಂತರವನ್ನು ಹೆಚ್ಚಿಸಿದರೆ ರೈಲ್ವೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

 2014ರಲ್ಲಿ ಹಾಲ್ಟ್ ರೈಲಿನ ಬಗ್ಗೆ ಸಲಹೆ

2014ರಲ್ಲಿ ಹಾಲ್ಟ್ ರೈಲಿನ ಬಗ್ಗೆ ಸಲಹೆ

2014ರಲ್ಲಿ ಬಿಐಎಎಲ್ ಹಾಲ್ಟ್ ರೈಲಿನ ಬಗ್ಗೆ ಸಲೆ ನೀಡಿತ್ತು. ಈ ವರ್ಷ ದೇವನಹಳ್ಳಿ ರೈಲ್ವೆ ಹಳಿಗೆ ಅನುಮತಿ ದೊರೆತಿದೆ. ಮಾರ್ಚ್ 2020ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.ಬಳಿಕ ಬಿಐಎಎಲ್‌ ನಿಲ್ದಾಣವನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸಲಿದೆ.

English summary
A new halt railway station coming up near Kempegowda International Airport (KIA) is likely to be ready by April or sooner, and it could provide 27,000 airport employees a cheaper commuting option.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X