ಕಸ-ರಸಗಳ ಮಿಶ್ರಣ ಫೇಸ್ಬುಕ್ ಯಾಕ್ ಬಳಸ್ಬೇಕು?

ಸಾಮಾಜಿಕ ಜಾಲ ತಾಣಗಳಲ್ಲಿ ಅಗ್ರಗಣ್ಯ ಎನಿಸಿರುವ ಫೇಸ್ ಬುಕ್ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಲೆ ಇದೆ. ಇತ್ತೀಚೆಗೆ ಒಂದರ್ಧ ಗಂಟೆ ಫೇಸ್ ಬುಕ್ ತನ್ನ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತ್ತು. ಅಷ್ಟಕ್ಕೇ ಪ್ರಪಂಚವೇ ಮುಳುಗಿ ಹೋದ ಹಾಗೆ ಟ್ವಿಟ್ಟರ್ ನಲ್ಲಿ ಮೆಸೇಜುಗಳ ರಾಶಿ ಬಂದು ಬಿದ್ದಿತ್ತು.

ಇಷ್ಟಕ್ಕೂ ಫೇಸ್ ಬುಕ್ ಏಕೆ ಬಳಸಬೇಕು? ಫೇಸ್ ಬುಕ್ ಉಪಯೋಗವೇನು? ಫೇಸ್ ಬುಕ್ಕನ್ನು ಜನ ಹೆಚ್ಚಾಗಿ ಏನಕ್ಕೆ ಬಳಸುತ್ತಾರೆ ಎಂಬುದರ ಬಗ್ಗೆ ಹಿರಿಯ ಓದುಗ ಹರಿಹರಪುರ ಶ್ರೀಧರ್ (ಇವರ ಫೇಸ್ ಬುಕ್ ಐಡಿ) ಅವರು ಪ್ರಶ್ನೆ ಎತ್ತಿದ್ದಲ್ಲದೆ ಕೆಲವು ಉತ್ತರಗಳನ್ನು ಒದಗಿಸಿದ್ದಾರೆ. ನಿಮಗನ್ನಿಸಿದ್ದನ್ನು ನೀವು ಕಾಮೆಂಟ್ ಬಾಕ್ಸಿನಲ್ಲಿ ತಪ್ಪದೇ ಹಾಕಿ.

ಫೇಸ್ ಬುಕ್ ಎಂಬುದು ಮೈಕ್ರೋ ಬ್ಲಾಗಿಂಗ್, ಜಾಬ್ ಸರ್ಚಿಂಗ್, ಪ್ರಶ್ನೆಗೆ ಉತ್ತರ ಹುಡುಕುವ ಸರ್ಚ್ ಇಂಜಿನ್, ಇತ್ತ್ತೀಚಿನ ನ್ಯೂಸ್ ಫೀಡಿಂಗ್, ಇವೆಂಟ್, ಡೇಟ್, ಮೀಟಿಂಗ್ ಬಗ್ಗೆ ಅಪ್ದೇಡಿಂಗ್, ಇಷ್ಟ ಕಷ್ಟ ಹಂಚಿಕೊಳ್ಳುವ ಸ್ಟೇಟಸ್ ವಿಥ್ ಬ್ಯೂಟಿಫುಲ್ ವರ್ಡಿಂಗ್, ಕಳೆದು ಹೋದವರು, ಹಳೆ ಗೆಳೆಯ ಗೆಳತಿಯರ ಸರ್ಚಿಂಗ್, ಫನ್, ಗೇಮ್ಸ್, ಗಾಸಿಪ್, ಕದ್ದು ಕದ್ದು ಕಂಡವರ ಫೋಟೋ ಆಲ್ಬಂನಲ್ಲಿ ಇಣುಕಿಂಗ್ ಮಾಡಲು ಇರುವ ಒಂದು ಗಾರ್ಬೇಜ್ ಡಂಪರ್ ಎಂದು ಫೇಸ್ ಬುಕ್ ಕಂಡರೆ ಆಗದವರು ಹೇಳಬಹುದು.

ಕನ್ನಡದ ಮಟ್ಟಿಗಂತೂ ಫೇಸ್ಬುಕ್ ಇವೆಂಟ್ ಮ್ಯಾನೇಜ್ಮೆಂಟ್, ಕತೆ, ಕವನ ಬರೆಯುವವರಿಗೆ, ಕನ್ನಡ ಪರ ಹೋರಾಟಗಾರರಿಗೆ ಪ್ರಬಲ ವೇದಿಕೆಯಾಗಿರುವುದು ಸುಳ್ಳಲ್ಲ. ಅಂತರ್ಜಾಲದಲ್ಲಿ ಕನ್ನಡ ಭಾಷೆ ಹೆಚ್ಚಾಗಲು ಫೇಸ್ಬುಕ್ ಒಂದರ್ಥದಲ್ಲಿ ಸಹಕರಿಸಿದೆ ಎನ್ನಬಹುದು. ಹರಿಹರಪುರ ಶ್ರೀಧರ್ ಅವರ ಅನಿಸಿಕೆ ಈ ಕೆಳಗಿನಂತಿದೆ.. ಇದಕ್ಕೆ ನಿಮ್ಮ ಅನಿಸಿಕೆಯನ್ನೂ ಸೇರಿಸಿ...

What is Facebook used for? Why should you start

ಫೇಸ್ ಬುಕ್ ಉಪಯೋಗ ಹೇಗೆ?

1. ಸ್ನೇಹಿತರೊಡನೆ ಹರಟಲು ಕೆಲವರಿಗೆ
2. ಸ್ನೇಹ ಬೆಳಸಿಕೊಂಡು ಲವ್ ಮಾಡಲು ಕೆಲವರಿಗೆ
3. ಕಥೆ ಕವನ ಬರೆಯಲು ಕೆಲವರಿಗೆ
4. ರೋಮಾಂ-ಚನ ವಿಚಾರ ತಿಳಿಸಲು ಕೆಲವರಿಗೆ
5. ರಾಜಕೀಯ ವಿಚಾರ ಹಂಚಿಕೊಳ್ಳಲು ಕೆಲವರಿಗೆ
6. ಮತಪ್ರಚಾರಕ್ಕಾಗಿ ಕೆಲವರಿಗೆ
7. ವಿಷಬೀಜ ಬಿತ್ತಲು ಕೆಲವರಿಗೆ
8. ಮನೆಯ ಸ್ಪೆಶಲ್,ಸುತ್ತಾಟ, ಮದುವೆ ಮುಂಜಿ,ಎಲ್ಲಾ ಫೋಟೋಗಳನ್ನು ರಾಶಿ ಹಾಕಲು ಕೆಲವರಿಗೆ
9. ಹಲವರಿಗೆ ಪಂಗನಾಮ ಹಾಕಲು ಕೆಲವರಿಗೆ
10. ಸದ್ವಿಚಾರಗಳನ್ನು ಹರಡಲು ಎಲ್ಲೋ ಕೆಲವರಿಗೆ

ಒಂಬತ್ತು ದಾಟಿ ಹತ್ತಕ್ಕೆ ಬರುವ ಹೊತ್ತಿಗೆ ಹೊತ್ತು ಮೀರಿರುತ್ತೆ. ದಿನವೆಲ್ಲಾ ಹಾಳಾಗಿರುತ್ತೆ. ಅದಕ್ಕಾಗಿಯೇ ಅಭಿರುಚಿಗೆ ತಕ್ಕನಾದ ಪೇಜ್ ಗಳನ್ನು ಮಾಡಿಕೊಂಡಿದ್ದರೂ ಈ ಫೇಸ್ ಬುಕ್ ಕಸ-ರಸ ಗಳ ಮಿಶ್ರಣವಾಗಿ ರಸವು ಕಸದಲ್ಲಿ ಸೇರಿಹೋಗಿ ಆಸ್ವಾಧಿಸಲು ಭಾರಿ ತೊಡಕಾಗಿದೆ.ಏನಂತೀರಾ? ಅನ್ನೋದಿಲ್ಲ.ನನಗೆ ಛೀಮಾರಿ ಹಾಕೋರ್ ಸಂಖ್ಯೆ ಜಾಸ್ತಿ ಇದೆ ಎಂದು ನನಗೆ ತಿಳಿದಿದೆ. ಆದರೆ ಇಲ್ಲಿಂದ ಓಡಿ ಹೋಗಲಾಗುವುದಿಲ್ಲ.ಕಾರಣ ಇಲ್ಲೂ ಅನರ್ಘ್ಯರತ್ನಗಳಿವೆ!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+