ಗರ್ಭಿಣಿಯಾದ ಅವಿವಾಹಿತೆ ಮೆಡಿಕಲ್ ಸ್ಟುಡೆಂಟ್, ಯಾಕೆ ಹೀಗಾಯ್ತು ಕೇಳಿದ್ರೆ ಇಷ್ಟದ ಮಸಾಲೆ ದೋಸೆಗೆ ಕನೆಕ್ಟ್ ಮಾಡಿದ ಯುವತಿ

ಬೆಂಗಳೂರು: ಮಸಾಲೆ ದೋಸೆಗೂ ಮತ್ತು ಲೈಂಗಿಕತೆಗೂ ಏನಾದರೂ ಸಂಬಂಧವಿದೆಯೇ? ನಮಗೆ ಮೇಲ್ನೋಟಕ್ಕೆ ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದೆನಿಸಿದರೂ, ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನ್ನ ಅನಪೇಕ್ಷಿತ ಗರ್ಭಧಾರಣೆ ಮತ್ತು ಲೈಂಗಿಕಾಸಕ್ತಿಯ ಬಗ್ಗೆ ವಿವರಿಸಲು ಮಸಾಲೆ ದೋಸೆಯ ಉದಾಹರಣೆ ನೀಡಿರುವ ಘಟನೆಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ.

ಹೌದು, ಖ್ಯಾತ ವೈದ್ಯೆ ಡಾ. ಲತಾ ವೆಂಕಟರಾಮ್ ಅವರು, ತಮ್ಮ ಬಳಿ ಚಿಕಿತ್ಸೆಗೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳ ಜೊತೆಗೆ ನಡೆದ ಸಂಭಾಷಣೆಯನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಡಾ. ಪ್ರತಿಭಾ ಶರಣ್ ಅವರೊಂದಿಗಿನ ಮಾತುಕತೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

What Does Masala Dosa Have to Do with Sex Dr Latha Venkatram Shares Medical Student s Analogy

ಲೈಂಗಿಕ ಕುತೂಹಲ ಮತ್ತು ಮಸಾಲೆ ದೋಸೆ ಉದಾಹರಣೆ

ಅನಪೇಕ್ಷಿತ ಗರ್ಭಧಾರಣೆಗೊಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಡಾ. ಲತಾ ವೆಂಕಟರಾಮ್ ಅವರ ಬಳಿ ಬಂದಿದ್ದಳು. ಯುವತಿಯರು ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಹೀಗಾಗಿ, ಆಕೆಯ ಮನಸ್ಥಿತಿಯನ್ನ ಅರ್ಥಮಾಡಿಕೊಳ್ಳಲು ಮತ್ತು ಆಕೆಯಲ್ಲಿ ವಿಶ್ವಾಸ ಮೂಡಿಸಲು ಡಾಕ್ಟರ್‌ ಸ್ವಲ್ಪ ಕ್ಲೋಸ್‌ ಆಗಿ ಮಾತನಾಡಿಸಿದ್ದಾರೆ.

ಈ ವೇಳೆ, ಆ ವಿದ್ಯಾರ್ಥಿನಿ ಡಾಕ್ಟರ್‌ ಅವರನ್ನಾ ನಿಮಗೆ ಏನು ಇಷ್ಟ ಅಂತಾ ಕೇಳಿದ್ದಾಳೆ. ಆಗ ಡಾಕ್ಟರ್‌ ಮಸಾಲ ದೋಸೆ ಎಂದಾಗ, ತನ್ನ ಲೈಂಗಿಕ ಕುತೂಹಲವನ್ನ ಅತ್ಯಂತ ವಿಭಿನ್ನವಾಗಿ ಮಸಾಲೆ ದೋಸೆಗೆ ಹೋಲಿಸಿ ವಿವರಿಸಿದ್ದಾಳೆ.

ಬೆಂಗಳೂರಿನ ಪ್ರಸಿದ್ಧ ಉಪಹಾರ ಗೃಹಗಳಲ್ಲಿ ಬಿಸಿಬಿಸಿ ಮಸಾಲೆ ದೋಸೆ ಸವಿಯುವ ಆಸೆಯಂತೆ, ಲೈಂಗಿಕತೆಯ ಬಗ್ಗೆಯೂ ಯುವಜನರಲ್ಲಿ ಸಹಜವಾದ ಕುತೂಹಲ ಮತ್ತು ಆಸೆ ಇರುತ್ತದೆ ಎಂಬುದನ್ನ ಆಕೆ ವಿವರಿಸಿದ ಪರಿ ವೈದ್ಯರನ್ನೇ ಬೆರಗುಗೊಳಿಸಿದೆ.

ಪ್ರೇಯಸಿ ಹಾಗೂ ಮಗನೊಂದಿಗೆ ದೀಪಾವಳಿ ಆಚರಿಸಿದ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ; ಭಾರಿ ವೈರಲ್
ಪ್ರೇಯಸಿ ಹಾಗೂ ಮಗನೊಂದಿಗೆ ದೀಪಾವಳಿ ಆಚರಿಸಿದ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ; ಭಾರಿ ವೈರಲ್

ವಿಭಿನ್ನ ಸಂಗಾತಿಗಳ ಆಯ್ಕೆ

ಬೆಂಗಳೂರಿನ ಬೇರೆ ಬೇರೆ ಹೋಟೆಲ್‌ಗಳಲ್ಲಿ ಮಸಾಲೆ ದೋಸೆ ತಿಂದು ರುಚಿ ನೋಡಬೇಕು ಎನಿಸುವಂತೆಯೇ, ಯುವಜನರಲ್ಲಿ ಬೇರೆ ಬೇರೆ ಸಂಗಾತಿಗಳ ಜೊತೆಗಿನ ಲೈಂಗಿಕ ಕ್ರಿಯೆಯ ಕುರಿತೂ ಆಸಕ್ತಿ ಮೂಡುತ್ತದೆ ಎಂದು ಆಕೆ ಹೇಳಿದ್ದಾಳೆ.

ಆದರೆ, ಹೊರಗಡೆ ಬೇಕಾಬಿಟ್ಟಿ ತಿಂದಾಗ ಕೆಲವೊಮ್ಮೆ ಹೊಟ್ಟೆ ಕೆಡುವ ಅಥವಾ ಫುಡ್ ಪಾಯ್ಸನ್ ಆಗುವ ಅಪಾಯವಿರುತ್ತದೆ. ಅದೇ ರೀತಿ, ಈ ಲೈಂಗಿಕ ಕುತೂಹಲಗಳ ಪ್ರಯೋಗದಿಂದಾಗಿ ಕೆಲವೊಮ್ಮೆ ಅನಪೇಕ್ಷಿತ ಗರ್ಭಧಾರಣೆ ಎಂಬ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಈ ಇಡೀ ಪ್ರಕ್ರಿಯೆಯನ್ನ ಆಕೆ ತನ್ನದೇ ಆದ ಮಸಾಲೆ ದೋಸೆ ಉದಾಹರಣೆಗಳ ಮೂಲಕ ವಿವರಿಸಿದ್ದು ನಿಜಕ್ಕೂ ವಿಶಿಷ್ಟವಾಗಿತ್ತು.

ಪೂಜಾ ತಟ್ಟೆಯಲ್ಲಿಟ್ಟು ಕಾರ್ಮಿಕರಿಗೆ ಬರೋಬ್ಬರಿ 1 ಲಕ್ಷ ರೂ. ನಗದು ದೀಪಾವಳಿ ಬೋನಸ್ ನೀಡಿದ ಬಾಸ್: ಖುಷಿಯಿಂದ ಕಣ್ಣೀರಿಟ್ಟ ಉದ್ಯೋಗಿ
ಪೂಜಾ ತಟ್ಟೆಯಲ್ಲಿಟ್ಟು ಕಾರ್ಮಿಕರಿಗೆ ಬರೋಬ್ಬರಿ 1 ಲಕ್ಷ ರೂ. ನಗದು ದೀಪಾವಳಿ ಬೋನಸ್ ನೀಡಿದ ಬಾಸ್: ಖುಷಿಯಿಂದ ಕಣ್ಣೀರಿಟ್ಟ ಉದ್ಯೋಗಿ

ರೋಗಿಗಳೊಂದಿಗೆ ಸಂವಹನ ಕೌಶಲ್ಯದ ಮಹತ್ವ

ಈ ಘಟನೆ ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ, ವೈದ್ಯಕೀಯ ವೃತ್ತಿಯಲ್ಲಿನ ಒಂದು ಮಹತ್ವದ ಅಂಶವನ್ನ ಎತ್ತಿ ತೋರಿಸುತ್ತದೆ. ಅದೇನೆಂದರೆ ರೋಗಿಗಳೊಂದಿಗೆ ಸಂವಹನ ಕೌಶಲ್ಯದ ಮಹತ್ವ. ರೋಗಿಗಳು ಎಷ್ಟೇ ಸೂಕ್ಷ್ಮ ವಿಚಾರಗಳನ್ನ ತೆಗೆದುಕೊಂಡು ಬಂದರೂ ಕೂಡ, ವೈದ್ಯರು ಅವರನ್ನ ಜಡ್ಜ್‌ ಮಾಡುವ ದೃಷ್ಟಿಯಿಂದ ನೋಡಬಾರದು.

ಬದಲಾಗಿ, ಅವರ ಮನಸ್ಥಿತಿಯನ್ನ ಅರ್ಥಮಾಡಿಕೊಂಡು, ಅವರಿಗೆ ಆಪ್ತವಾಗಿ ಸ್ಪಂದಿಸಿದಾಗ ಮಾತ್ರ ರೋಗಿಗಳು ತಮ್ಮ ಸಮಸ್ಯೆಗಳನ್ನ ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಅನಿರೀಕ್ಷಿತ ಸಂಭಾಷಣೆಗಳು ಕೆಲವೊಮ್ಮೆ ರೋಗಿಗಳ ಮನಸ್ಸನ್ನ ಅರಿಯಲು ಹಾಗೂ ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಬಹುದೊಡ್ಡ ಪಾಠವನ್ನ ಕಲಿಸುತ್ತವೆ ಎಂಬುದನ್ನ ಈ ಘಟನೆ ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+