MS Dhoni: ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಂ.ಎಸ್.ಧೋನಿ ಏನ್ ಮಾಡಿದ್ರು ಗೊತ್ತಾ?-ವೈರಲ್ ವಿಡಿಯೋ ಇಲ್ಲಿದೆ ನೋಡಿ
MS Dhoni: ಐಪಿಎಲ್ 17ನೇ ಆವೃತ್ತಿ ಮುಗಿಯುವ ಹಂತವನ್ನು ತಲುಪಿದೆ. ಇನ್ನು ನಾಳೆ (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಗೂ ಸಿಎಸ್‌ಕೆ (ಚೆನ್ನೂ ಸೂಪರ್ ಕಿಂಗ್ಸ್) ಸೆಣೆಸಾಡಲು ಸಜ್ಜಾಗಿದ್ದು, ಈ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತದರಿಂದ ಕಾಯುತ್ತಿದ್ದಾರೆ. ಇದರ ನಡುವೆಯೂ ಇದೀಗ ಎಂ.ಎಸ್.ಧೋನಿ ಅವರ ಅದ್ಭುತ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಾದರೆ ಆ ವಿಡಿಯೋ ಯಾವುದು ಅಂತೀರಾ ಇಲ್ಲಿದೆ ನೋಡಿ ಕಣ್ತುಂಬಿಕೊಳ್ಳಿ.
ಆರ್‌ಸಿಬಿ ಹಾಗೂ ಚೆನ್ನೈ ಮ್ಯಾಚ್ ದಿನ ಅಭಿಮಾನಿಗಳ ಸಾಗರವೇ ಕ್ರೀಡಾಂಗಣದಲ್ಲಿ ಸೇರಿಬಿಡುತ್ತದೆ. ಇನ್ನು ನಾಳೆ ಬೆಂಗಳೂರಿನಲ್ಲಿ ಈ ಎರಡು ತಂಡಗಳು ಕಾದಾಡಲು ಸಜ್ಜಾಗಿವೆ. ಇದಕ್ಕೂ ಮುನ್ನು ಎಂ.ಎಸ್.ಧೋನಿ ಅವರು ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ಗೆ ಬಂದು ಚಹಾ ಸೇವನೆ ಮಾಡಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಹಾಗೂ ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಕೂಡ ಬರುತ್ತಿವೆ.

ನಗುಮುಖದಲ್ಲೇ ಆರ್‌ಸಿಬಿ ಡ್ರೆಸ್ಸಿಂಗ್ ರೂಂಗೆ ಬಂದು ಎಂ.ಎಸ್.ಧೋನಿಯವರು ಚಹಾ ಕೊಡಿ ಎಂದು ಕೇಳುತ್ತಿರುವ ದೃಶ್ಯವನ್ನು royalchallengers.bengaluru ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಈ ಖಾತೆಯಿಂದಲೇ ಅವರಿಗೆ "ಬೆಂಗಳೂರಿಗೆ ಸ್ವಾಗತ ಮಹಿ" ಅವರೇ ಎಂದು ಬರೆದುಕೊಂಡಿರುವ ಪೋಸ್ಟರ್ ಇದೀಗ ಭಾರೀ ವೈರಲ್ ಆಗುತ್ತಿದೆ.
ಈಗಾಗಲೇ 13ರಲ್ಲಿ 7 ಗೆದ್ದು 6 ಪಂದ್ಯಗಳಲ್ಲ ಸೋಲನುಭವಿಸಿರುವ ಸಿಎಸ್‌ಕೆ ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದೆ. ಇದೀಗ ನಾಳೆ ಆರ್‌ಸಿಬಿ ವಿರುದ್ಧ 14ನೇ ಪಂದ್ಯ ಆಡಲಿದ್ದು, 8ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಆರ್‌ಸಿಬಿ ತಂಡ ಆಡಿರುವ 13 ಪಂದ್ಯಗಳಲ್ಲಿ 6 ಗೆದ್ದು 7 ಸೋಲನುಭವಿಸಿದ್ದು, ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 7ನೇ ಸ್ಥಾನದಲ್ಲಿಗೆ. ಇನ್ನು ಚೆನ್ನೈ ವಿರುದ್ಧ ನಾಳೆ ಸೆಣೆಸಲಿದ್ದು, 7ನೇ ಗೆಲುವಿನ ನಿರೀಕ್ಷೆಯಿಟ್ಟುಕೊಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲಕ್ಕೇರುವ ತವಕದಲ್ಲಿದೆ.












Click it and Unblock the Notifications