Tanisha Kuppanda: ಆ ಮಗು ರೇಣುಕಾಸ್ವಾಮಿಯಂತಹ ತಂದೆ ಮುಖ ನೋಡದಿರುವುದೇ ಒಳಿತು: ತನಿಷಾಗೆ ನೆಟ್ಟಿಗರು ಹೇಳಿದ್ದೇನು?

Tanisha Kuppanda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ 17 ಮಂದಿ ಜೈಲುಪಾಲಾಗಿದ್ದಾರೆ. ಇನ್ನೂ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದರ ನಡುವೆಯೇ ದರ್ಶನ್‌ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಹಾಗೆಯೇ ಇದೀಗ ಬಿಗ್‌ಬಾಸ್‌ ಸ್ಪರ್ಧಿ ತನಿಷಾ ಕುಪ್ಪಂಡ ಪ್ರತಿಕ್ರಿಯಿಸಿ ಸ್ಫೋಟಕ ಹೇಳಿಯೊಂದನ್ನು ನೀಡಿದ್ದಾರೆ.

ನಟ ದರ್ಶನ್‌ ಪ್ರಕರಣ ಇದೀಗ ತನಿಖೆ ಹಂತದಲ್ಲಿದ್ದು, ಈ ನಡುವೆಯೇ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಜೈಲು ಪಾಲಾಗಿರುವ ದರ್ಶನ್‌ನನ್ನು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಕೆಲವರು ದರ್ಶನ್‌ ಮಾಡಿರುವ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಕಾನೂನು ಮೂಲಕ ಹೋರಾಟ ಮಾಡಬಹುದಿತ್ತು. ಆದರೆ ಕೊಲೆಯ ಹಂತಕ್ಕೆ ಇಳಿದಿರುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.

What did Bigg Boss contestant Tanisha Kuppanda say about actor Darshan case

ಇನ್ನು ಈ ಬಗ್ಗೆ ಬಿಗ್‌ ಬಾಸ್‌ ಸ್ಪರ್ಧಿ ತನಿಷಾ ಕುಪ್ಪಂಡ ಪ್ರತಿಕ್ರಿಯೆ ನೀಡಿದ್ದಾರೆ. "ಆ ಮಗು ಹುಟ್ಟಿದ ಮೇಲೆ ತಂದೆ ಎಲ್ಲಿ ಅಂತಾ ಕೇಳಿದರೆ ರೇಣುಕಾಸ್ವಾಮಿ ಪತ್ನಿ ಏನು ಹೇಳಬೇಕೇಕು ಎಂದು ಕೇಳಿದ್ದರು. ಆದರೆ ಆ ಥರ ಕ್ಯಾರೆಟ್ಟರ್‌ನಲ್ಲಿ ಇಂತಹ ಗಂಡ ಇದ್ದನೆಂದರೆ, ಅಂತಹವರ ಮುಖವನ್ನು ಮಗು ನೋಡದೇ ಇರುವುದು ಒಳ್ಳೆಯದೇ ಅಂತಾ ನನಗೆ ಅನಿಸುತ್ತದೆ," ಎಂದು ಹೇಳಿದ್ದಾರೆ.

"ನಮ್ಮ ಸುತ್ತಮುತ್ತ ಇಂತಹ ಸಾವಿರಾರು ಘಟನೆಗಳು ನಡೆಯುತ್ತವೆ. ರೇಣುಕಾಸ್ವಾಮಿ ಅಂತಹವರು ನಮ್ಮಂತವರಿಗೆ ಕ್ರೂರವಾಗಿ, ಅಶ್ಲೀಲವಾಗಿ ಸಂದೇಶ ಮಾಡುತ್ತಿರುತ್ತಾರೆ. ಅದನ್ನು ನಾವು ಕಂಪ್ಲೇಂಟ್‌ ಮಾಡಿದ್ರುನೂ, ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ರುನೂ ನಮಗೆ ಯಾವುದೇ ಜಸ್ಟಿಫಿಕೇಶನ್‌ ಅನ್ನೋದು ಸಿಗುವುದಿಲ್ಲ," ಎಂದು ಹೇಳುವ ಮೂಲಕ ದರ್ಶನ್‌ ಪರ ಬ್ಯಾಟ್‌ ಬೀಸಿದ್ದಾರೆ. ಇನ್ನು ಈ ವಿಡಿಯೋವನ್ನು ಡಿ ಬಾಸ್‌ ಫ್ಯಾನ್ಸ್‌ ಎಂಬ ಪೇಸ್‌ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇನ್ನು ತನಿಷಾ ಕುಪ್ಪಂಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಗರು, "ಅಶ್ಲೀಲವಾಗಿ ಸಂದೇಶದ ಕಳುಹಿಸಿದ್ದಾನೆ ಅಂದಾಕ್ಷಣ ಆತನನ್ನು ಕೊಂದುಬಿಡುವುದು ಸರಿಯೇ?, ಅದಕ್ಕಂತಲೇ ಕಾನೂನು ಇದೆ. ಪೊಲೀಸ್‌ ಅಧಿಕಾರಿಗಳ ಮೊರೆ ಹೋಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಕೊಲೆ ಮಾಡುವ ಹಂತಕ್ಕೆ ಹೋಗುವುದು ಎಷ್ಟರ ಮಟ್ಟಿಗೆ ಸರಿ?," ಹೇಳಿ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

"ನಾಳೆ ನೀನು ಪ್ರಂಗ್ನೆಟ್ ಆದಾಗ ನಿನ್ನ ಗಂಡನನ್ನು ಶೆಡ್‌ಗೆ ಕರೆದುಕೊಂಡು ಹೋಗಿ ಕೊಲೆ ಮಾಡದಾಗ, ನಿನಗೂ ಇದೇ ಪರಿಸ್ಥಿನಿ ಬಂದಾಗ ನಿನ್ನ ಮಗು ನಿನ್ನ ಗಂಡನ ಹೆಸರು ಹೇಳಲ್ವಾ ನೀನು?," ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+