Actress Aradhana Ram: ನಟ ದರ್ಶನ್ ಪ್ರಕರಣದ ಬಗ್ಗೆ ಕಾಟೇರ ನಟಿ, ಮಾಲಾಶ್ರೀ ಮಗಳು ಹೀಗಂದ್ರು
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಪವಿತ್ರಾ ಗೌಡ ಮತ್ತು ಪಟಾಲಂ ಗ್ಯಾಂಗ್ ಜೈಲು ಸೇರಿದ್ದು, ಈ ಪ್ರಕರಣದ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ದರ್ಶನ್ ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡಿದ್ದಾರೆ. ಹಾಗೆಯೇ ಇದೀಗ ಕಾಟೇರ ಸಿನೆಮಾದ ನಟಿ, ಮಾಲಾಶ್ರೀ ಮಗಳು ಪ್ರತಿಕ್ರಿಯಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಪೊಲೀಸರಿಗೆ ಈಗಾಗಲೇ ಹಲವು ಸಾಕ್ಷ್ಯಗಲು ಲಭ್ಯವಾಗಿವೆ ಎನ್ನುವ ಮಾತಿ ಲಭ್ಯವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದ್ದರಿಂದ ಕಾನೂನು ಕುಣಿಕೆ ಬಿಗಿಯಾಗುತ್ತಿದ್ದು, ನಟ ದರ್ಶನ್‌ಗೆ ಜಾಮೀನು ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಮತ್ತೊಂದೆಡೆ ಈ ನಡುವೆಯೇ ದರ್ಶನ್ ಪರ-ವಿರೋಧದ ಚರ್ಚೆಗಳು ಸಹ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇವೆ.

ಇನ್ನು ಪ್ರಕರಣದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕಾಟೇರಾ ನಟಿ, ಮಾಲಾಶ್ರೀ ಮಗಳು ಆರಾಧನಾ ರಾಮ್ ಪ್ರತಿಕ್ರಿಯಿಸಿದ್ದು, "ಕಾಟೇರಾ ಶೂಟಿಂಗ್ ಸಮಯದಲ್ಲಿ ನನಗೆ ಹಾಗೂ ತಂಡದವರಿಗೆ ದರ್ಶನ್ ಸರ್ ಉತ್ತಮ ಬೆಂಬಲ ನೀಡಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ. ಆದರೆ ಇದೀಗ ನಡೆದಿತ್ತಿರುವ ಘಟನೆಗಳ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ," ಎಂದು ಹೇಳಿದ್ದಾರೆ.
ಯಮುನಾ ಶ್ರೀನಿಧಿ ಹೇಳಿದ್ದೇನು?: ನಟ ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ನಟಿ ಯಮುನಾ ಶ್ರೀನಿಧಿ ಅವರು, "ನಿಮ್ಮ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ದರ್ಶನ್ ಸರ್" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
"ಈ ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ ಮತ್ತು ನಿಷ್ಠೆ ಇಲ್ಲದಿದ್ದರೆ ನಾವು ಬದುಕಲು ಸಾಧ್ಯ ಆಗುತ್ತಿರಲಿಲ್ಲ. ನಾನು ಇಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಜನರು ಅಥವಾ ಮಾಧ್ಯಮದ ವಿಚಾರಣೆಗಿಂತ ನ್ಯಾಯಾಲಯದ ವಿಚಾರಣೆಯನ್ನು ನಾನು ನಂಬುತ್ತೇನೆ'", ಎಂದು ತಿಳಿಸಿದ್ದಾರೆ.
"ನಟ ದರ್ಶನ್ ಸರ್ ಬಗ್ಗೆ ನನ್ನ ಗೌರವಕ್ಕೆ ಕಾರಣ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ. ನಮ್ಮ ಮಕ್ಕಳು ತಪ್ಪು ಮಾಡಿದಾಗ, ನಾವು ಅವರಿಗೆ ಮಾರ್ಗದರ್ಶನ ನೀಡುತ್ತೇವೆ. ನಾವು ಅವರನ್ನು ಶಿಕ್ಷಿಸುತ್ತೇವೆ, ಆದರೆ ನಾವು ಅವರನ್ನು ತಿರಸ್ಕರಿಸುವುದಿಲ್ಲ. ನಾವು ಅವರನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಏನೇ ಆದರೂ ನಿಮ್ಮ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ದರ್ಶನ್ ಸರ್", ಎಂದು ತಿಳಿಸಿದ್ದಾರೆ.
"ಅವರ ಅಭಿಮಾನಿಗಳ ಅಪಾರ ಪ್ರೀತಿ ಮತ್ತು ಬೆಂಬಲವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ದರ್ಶನ್ ಸರ್ ಅವರ ಅಭಿಮಾನಿಗಳಲ್ಲಿ ನನ್ನ ವಿನಮ್ರ ವಿನಂತಿ. ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ. ಯಾವುದು ಸರಿ-ತಪ್ಪು ಎಂದು ಕಂಡುಹಿಡಿಯಲು ನ್ಯಾಯಾಂಗವಿದೆ. ಯಾರು ಏನೇ ಮಾತಾಡಿಕೊಂಡರೂ ತಾಳ್ಮೆಯಿಂದಿರಿ ಎಂದು ಬೇಡಿಕೊಳ್ಳುತ್ತೇನೆ. ಈ ಅಹಿತಕರ ಘಟನೆಯಿಂದ ನಮಗೆಲ್ಲ ನೋವಾಗಿದೆ, ಆದರೆ ಈಗ ಬೇಕಾಗಿರುವುದು ತಾಳ್ಮೆ" ಎಂದು ತಿಳಿಸಿದ್ದಾರೆ.
ಇನ್ನು ದರ್ಶನ್ ನಟನೆಯ ತಾರಕ್ ಸಿನಿಮಾದಲ್ಲಿ ಯಮುನಾ ಶ್ರೀನಿಧಿ ಅವರು ನಟಿಸಿದ್ದಾರೆ. ಅಲ್ಲದೆ, ಕಿರುತೆರೆಯಲ್ಲಿ ಹೆಸರು ಮಾಡಿರುವ ಯಮುನಾ, ಅಶ್ವಿನಿ ನಕ್ಷತ್ರ, ತ್ರಿವೇಣಿ ಸಂಗಮ, ಮನಸಾರೆ, ಎರಡು ಕನಸು, ಮಾಸನ ಸರೋವರ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದವರಾಗಿದ್ದಾರೆ.












Click it and Unblock the Notifications