Bengaluru Traffic: ಬೆಂಗಳೂರಿನಲ್ಲಿ ಯಾವ ದಿನಗಳಲ್ಲಿ ಹೆಚ್ಚು ಟ್ರಾಫಿಕ್ ಇರುತ್ತೆ ಗೊತ್ತಾ?

ಬೆಂಗಳೂರು, ಫೆಬ್ರವರಿ.22: ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆ ಎಂದರೆ ಅದು ಟ್ರಾಫಿಕ್ ಜಾಮ್. ಯಾವಾಗ.. ಯಾವ ರೋಡ್‌ನಲ್ಲಿ ಹೇಗೆ ಸಿಕ್ಕಿ ಹಾಕಿಕೊಳ್ಳುತ್ತೇವೆಯೋ ಎಂಬ ಭಯದಲ್ಲೆ ವಾಹನ ಸವಾರರು ಚಾಲನೆ ಮಾಡುತ್ತಿರುತ್ತಾರೆ. ಕೆಲವೊಂದು ಸ್ಥಳಗಳಲ್ಲಿ ದಿನ ಟ್ರಾಫಿಕ್ ಜಾಮ್ ಇದ್ದೆ ಇರುತ್ತೆ. ಮತ್ತೆ ಕೆಲವೊಂದು ಕಡೆ ಧಿಡೀರ್ ಅಂತ ಜಾಮ್ ಆಗಿ ಬಿಡುತ್ತದೆ.

ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಸಂಚಾರಿ ಪೊಲೀಸರು ಅನೇಕ ಕಸರತ್ತು ಮಾಡುತ್ತಿದ್ದಾರೆ. ಆದರೂ, ಈ ಸಮಸ್ಯೆ ಬಗೆಹರಿದಿಲ್ಲ. ಮೆಟ್ರೋ, ಫ್ಲೈ ಓವರ್‌ಗಳು ಕೂಡ ಟ್ರಾಫಿಕ್ ಕಡಿಮೆ ಮಾಡುವ ಬದಲು ಅವುಗಳ ಕಾಮಗಾರಿ ಮತ್ತಷ್ಟು ಟ್ರಾಫಿ ಜಾಮ್ ಮಾಡುತ್ತಿದೆ. ಇವೆಲ್ಲದರ ನಡುವೆ ಯಾವ ದಿನಗಳಲ್ಲಿ ಬೆಂಗಳೂರಲ್ಲಿ ಟ್ರಾಫಿಕ್ ಜಾಸ್ತಿ ಇರುತ್ತದೆ ಗೊತ್ತಾ? ಈ ಬಗ್ಗೆ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಮಾಹಿತಿ ನೀಡಿದ್ದಾರೆ ನೋಡಿ.

Wednesdays and Thursdays are the most traffic congested in Bengaluru

ಬೆಂಗಳೂರಲ್ಲಿ ಯಾವ ದಿನ ಹೆಚ್ಚು ಟ್ರಾಫಿಕ್?

ಬೆಂಗಳೂರು ಟ್ರಾಫಿಕ್ ಪೊಲೀಸರ ಪ್ರಕಾರ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಹೆಚ್ಚು ಟ್ರಾಫಿಕ್ ಜಾಮ್ ಇರುತ್ತದೆ ಅಂತೆ. ಎಸ್.. ಈ ಬಗ್ಗೆ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಅವರು 'ಮನಿ ಕಂಟ್ರೋಲ್‌' ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

"ಬುಧವಾರದಂದು ಅತಿ ಹೆಚ್ಚು ದಟ್ಟಣೆ ಕಂಡುಬರುತ್ತದೆ. ಟೆಕ್ ಪಾರ್ಕ್ ಆಕ್ಯುಪೆನ್ಸೀ ಕೂಡ ಈ ದಿನದಲ್ಲಿ ಅತ್ಯಧಿಕವಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಔಟರ್ ರಿಂಗ್ ರೋಡ್ ಮತ್ತು ಸರ್ಜಾಪುರ ರಸ್ತೆಯಂತಹ 33 ಪ್ರಮುಖ ಟೆಕ್ ಪಾರ್ಕ್‌ಗಳಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ. ಈ ಡೇಟಾವು ಈ ಟೆಕ್ ಪಾರ್ಕ್‌ಗಳಿಂದ ಒದಗಿಸಲಾದ ಗಂಟೆಯ ಒಳಬರುವ ಮತ್ತು ಹೊರಹೋಗುವ ಟ್ರಾಫಿಕ್ ಮಾಹಿತಿಯನ್ನು ಒಳಗೊಂಡಿದೆ" ಎಂದು ತಿಳಿಸಿದ್ದಾರೆ.

ಮೂರು ದಿನಗಳಿಗೆ (ಮಂಗಳವಾರ, ಬುಧವಾರ ಮತ್ತು ಗುರುವಾರ) ಕೆಲಸವನ್ನು ಸೀಮಿತಗೊಳಿಸುವ ಬದಲು ಸೋಮವಾರದಿಂದ ಶುಕ್ರವಾರದವರೆಗೆ ಕಚೇರಿಯಿಂದ ಕೆಲಸ ಮಾಡುವ ನೌಕರರನ್ನು ಉತ್ತೇಜಿಸಬೇಕು. ಇಂತಹ ವಿಧಾನವು ವಾಹನಗಳು ಮತ್ತು ಜನರ ಹರಿವನ್ನು ಹೆಚ್ಚು ಸಮವಾಗಿ ಹಂಚಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ" ಎಂದು ಅನುಚೇತ್ ಸಲಹೆ ನೀಡಿದ್ದಾರೆ.

Wednesdays and Thursdays are the most traffic congested in Bengaluru

"ಬುಧವಾರ ಮತ್ತು ಗುರುವಾರ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರು ಮೆಟ್ರೋ ವೈಟ್‌ಫೀಲ್ಡ್‌ಗೆ ಸಂಪರ್ಕ ಹೊಂದಿದ್ದರೂ, ಹೊರ ವರ್ತುಲ ರಸ್ತೆ, ಹೆಬ್ಬಾಳ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಇತರ ಟೆಕ್ ಹಬ್‌ಗಳಿಗೆ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಲು ಇನ್ನೂ ಸಾಧ್ಯವಾಗಿಲ್ಲ, ಕಚೇರಿಗೆ ಹೋಗುವವರು ತಮ್ಮ ವಾಹನಗಳನ್ನೇ ಇನ್ನು ಅವಲಂಬಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಎಸಿ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದು ಕೂಡ ಟ್ರಾಫಿಕ್ ಹೆಚ್ಚಳಕ್ಕೆ ಕಾರಣ" ಎಂದಿದ್ದಾರೆ.

ಶನಿವಾರ ಮತ್ತು ಭಾನುವಾರಗಳಿಗೆ ಹೋಲಿಸಿದರೆ ಸೋಮವಾರದಿಂದ ಶುಕ್ರವಾರದವರೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಮಾದರಿಗಳು ಬದಲಾಗುತ್ತವೆ. ಸಾಮಾನ್ಯವಾಗಿ ವಾರದ ದಿನಗಳಲ್ಲಿ 7:30 ರಿಂದ 11 ರವರೆಗೆ ಮತ್ತು ಸಂಜೆ 4:30 ರಿಂದ 8:30 ರವರೆಗೆ ಪೀಕ್ ಅವರ್ ಇರುತ್ತದೆ. ವಾರಾಂತ್ಯದಲ್ಲಿ, ಪೀಕ್ ಅವರ್‌ಗಳಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಸಂಜೆ 6:30 ರಿಂದ ರಾತ್ರಿ 11 ರವರೆಗೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+