ಸಿದ್ದರಾಮಯ್ಯಗೆ ಔದಾರ್ಯತೆಯ ಪರಮಾವಧಿ ತೋರಿದ ಸಿಎಂ ಬಿಎಸ್ವೈ
ಬೆಂಗಳೂರು, ಅ 22: ಸಿದ್ದರಾಮಯ್ಯನವರಿಗೆ ಅದೃಷ್ಟದ ವಸತಿಗೃಹ ಎಂದೇ ಹೇಳಲಾಗುತ್ತಿರುವ 'ಕಾವೇರಿ' ನಿವಾಸ ತೆರವಿನ ವಿಚಾರದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಹೇಳಿಕೆಯನ್ನು ನೀಡಿದ್ದಾರೆ.
ನಾಲ್ಕು ದಿನದಲ್ಲಿ 'ಕಾವೇರಿ' ನಿವಾಸವನ್ನು ಖಾಲಿ ಮಾಡಬೇಕು ಎಂದು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ, ಮುಖ್ಯಮಂತ್ರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
"ಕಾವೇರಿ ನಿವಾಸ ತೊರೆಯುವಂತೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿಲ್ಲ" ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

"ಈ ಬಂಗಲೆ ಕೆ.ಜೆ.ಜಾರ್ಜ್ ಅವರಿಗೆ ಮಂಜೂರಾಗಿತ್ತು. ಈಗ ಅವರು ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಸಿದ್ದರಾಮಯ್ಯನವರಿಗೆ ಮನೆ ಖಾಲಿ ಮಾಡಿ ಎಂದು ಹೇಳಿಲ್ಲ".
"ಅವರು ಇರುವಷ್ಟು ದಿನ ಕಾವೇರಿಯಲ್ಲಿ ಇರಬಹುದು. ಅವರು ಖಾಲಿ ಮಾಡಿದ ನಂತರ, ನಾನು ಅಲ್ಲಿಗೆ ಶಿಫ್ಟ್ ಆಗುತ್ತೇನೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 2018ರ ವಿಧಾನಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಿದ್ದರಾಮಯ್ಯ ಕಾವೇರಿಯಲ್ಲಿಯೇ ಮುಂದುವರಿದಿದ್ದರು.
ಸಿದ್ದರಾಮಯ್ಯನವರ ಪತ್ನಿಗೆ ಕಾವೇರಿ ಬಂಗ್ಲೆಯ ಮೇಲೆ ಇನ್ನಿಲ್ಲದ ನಂಬಿಕೆ. ಹಾಗಾಗಿಯೇ, ಆ ಬಂಗಲೆ ಖಾಲಿ ಮಾಡಲು ಸಿದ್ದರಾಮಯ್ಯ ಮುಂದಾಗುತ್ತಿಲ್ಲ ಎನ್ನುವ ಮಾತಿದೆ.












Click it and Unblock the Notifications