• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ವಿ ಆಲ್ ಲೀವ್ ಇನ್ ಭೋಪಾಲ್' - ನಾಟಕ ಪ್ರದರ್ಶನ

By Rajendra
|

ಬೆಂಗಳೂರು, ಡಿ.2: ಭೋಪಾಲ್ ಅನಿಲ ದುರಂತ ಸಂಭವಿಸಿ ಈ ತಿಂಗಳ 3ನೇ ತಾರೀಖಿಗೆ 30 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ 'ವಿ ಆಲ್ ಲೀವ್ ಇನ್ ಭೋಪಾಲ್' ಎಂಬ ಇಂಗ್ಲಿಷ್ ನಾಟಕವನ್ನು ಬೆಂಗಳೂರಿನ ಈಸ್ಟ್ ಕಲ್ಚರಲ್ ಅಸೋಸಿಯೇಶನ್ ಕ್ಲಬ್ ನಲ್ಲಿ ಇದೇ ಡಿಸೆಂಬರ್ 3ರಂದು ಸಂಜೆ 7ಕ್ಕೆ ಪ್ರದರ್ಶಿಸಲು ಸ್ಟಾಡಿಂಗ್ ಓವೇಶನ್ ಸಂಸ್ಥೆ ಮುಂದಾಗಿದೆ.

ಸುಧೀರ್ ಸೆಲ್ವರಾಜ್ ಅವರ ನಿರ್ದೇಶನದ ಈ ಪ್ರದರ್ಶನದಲ್ಲಿ 1984ರ ರಾತ್ರಿ ನಡೆದ ಅನಿಲ ದುರಂತವು ಇಂದಿನವರೆಗೂ ಹೇಗೆ ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದೆ, ಪರಿಸರದ ಮೇಲೆ ಇದರ ಪರಿಣಾಮವೇನು? ಕಾರ್ಪೋರೇಟ್, ನಾಗರಿಕ ಸಮಾಜ ಮತ್ತು ಅಧಿಕಾರಿಗಳು ದುರಂತದಲ್ಲಿ ಬದುಕುಳಿದವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಿದರು ಎಂಬುದನ್ನು ಒಳಗೊಂಡಿರುತ್ತದೆ. [ಭೋಪಾಲ್ ದುರಂತ ಕಾರಣಕರ್ತ, ಸತ್ತದ್ದು ಸುದ್ದಿಯಾಗ್ಲಿಲ್ಲ!]

ಇಂದಿನ ಯುವಜನತೆ ಭಾರತೀಯ ಇತಿಹಾಸದ ಘಟನೆಗಳನ್ನು ತಿಳಿದುಕೊಳ್ಳುವುದರ ಅವಶ್ಯಕತೆಯಿದೆ. ಅದಕ್ಕಾಗಿ ನಮ್ಮ ಸಂಸ್ಥೆಯಿಂದ ಭೋಪಾಲ್ ಅನಿಲ ದುರುಂತ ಕುರಿತು ನಾಟಕ ಪ್ರದರ್ಶವನ್ನು ಮಾಡುತ್ತಿದೆ ಎಂದು ಸೆಲ್ವರಾಜ್ ತಿಳಿಸಿದರು.

ಡಿಸೆಂಬರ್ 3ರಂದು ನಡೆದ ಭೋಪಾಲ್ ಅನಿಲ ದುರಂತ ಮರೆಯಲಾಗದ ಘಟನೆ. ಈ ಘಟನೆ ನಡೆದ ದಿನದಂದು ಅಲ್ಲಿನ ಜನರು ಯಾವ ರೀತಿ ಹೀನಾಯ ಸ್ಥಿತಿಯನ್ನು ತಲುಪಿದರು ಎಂಬುದನ್ನು ಇಡೀ ನಾಟಕದ ಮೂಲಕ ಕಟ್ಟಿಕೊಡುವುದೇ ಈ ಪ್ರದರ್ಶನದ ಮೂಲ ಉದ್ದೇಶವಾಗಿದೆ ಎಂದು ಸ್ಟಾಂಡಿಂಗ್ ಓವೇಶನ್ ಸಂಸ್ಥೆಯ ಹೇಮಾ ನಾಯ್ಕ್ ಅವರು ಮಾಹಿತಿ ನೀಡಿದರು. [ಭೋಪಾಲ್ ದುರಂತ : ಅಮೆರಿಕ ಕೋರ್ಟ್ ತೀರ್ಪು]

ಇದುವರೆಗೂ ಸೆಲ್ವರಾಜ್ ಅವರು ಇಡೀ ದೇಶವನ್ನು ಸುತ್ತಿ, ಕಿಂಗ್ಸ್ ಕಾಲೇಜ್ ಲಂಡನ್, ಕಾನ್ ರ್ಯಾಡಿಯಾ ಕಾಲೇಜ್ ಮಿನ್ನೇಸೋಟ್ ಮತ್ತು ನ್ಯಾಷನಲ್ ಸೆಂಟರ್ ಬಾಯೋಲಜಿಕಲ್ ಸೈನ್ಸ್ ಬೆಂಗಳೂರು ಸೇರಿದಂತೆ 14 ಬಾರಿ ಭೋಪಾಲ್ ಅನಿಲ ದುರಂತದ ನಾಟಕ ಪ್ರದರ್ಶನವನ್ನು ಮಾಡಿದ್ದು ಇದು ಕೊನೆಯ ಪ್ರದರ್ಶನವಾಗಿದೆ.

ಈ ಪ್ರದರ್ಶನದಿಂದ ಬಂದ ಹಣವನ್ನು ಭೋಪಾಲ್ ನಲ್ಲಿರುವ ಚಿಂಗಾರಿ ಎನ್ ಜಿಓ ಟ್ರಸ್ಟ್ ಮೂಲಕ ಅಲ್ಲಿನ ಅನಿಲ ದುರಂತ ಸಂತ್ರಸ್ತರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. (ಒನ್ಇಂಡಿಯಾ ಕನ್ನಡ)

English summary
Standing Ovation and the Renegade Arts and Theatre Society presents 'We All Live in Bhopal' a play devised by Sudhir Selvaraj on the occasion of the 30th anniversary of the Bhopal Gas Disaster. Let’s meet to commemorate the 30th Year of Bhopal Gas Tragedy, On Wednesday, December 3rd, 2014 at 7 pm At Main Hall, ECA Club, 100 Feet, Indira Nagar, Bengaluru 560038
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more