ಇಂದು ಈ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ ಇರಲ್ಲ
ವೀಕೆಂಡ್ ಮೂಡ್‌ನಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಜಲಮಂಡಳಿಯು ಒಂದು ಕಹಿಸುದ್ದಿ ನೀಡಿದೆ. ಬೆಂಗಳೂರಿನ ಹೆಗ್ಗನಹಳ್ಳಿಯ ಜಿಎಲ್‌ಆರ್ ಆವರಣದಲ್ಲಿ ಪ್ರಮುಖ ಪೈಪ್‌ಲೈನ್‌ಗಳ ಜೋಡಣೆ ಕಾಮಗಾರಿ ನಡೆಯುತ್ತಿದೆ. ಮತ್ತೊಂದೆಡೆ ಕಾವೇರಿ 5ನೇ ಹಂತದ ಚಾಲನೆಯ ಪೂರ್ವಭಾವಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ಇಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಪೀಣ್ಯ-ದಾಸರಹಳ್ಳಿ ವಲಯ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ಸರಸ್ವತಿ ನಗರ, ಗಾಯತ್ರಿ ನಗರ, ಪ್ರಕಾಶನಗರ, ನಂದಿನಿ ಲೇಔಟ್, ಗೋರಗುಂಟೆ ಪಾಳ್ಯ, ರಾಜಾಜಿನಗರ ಮೊದಲನೇ ಹಂತದಿಂದ 6ನೇ ಹಂತದವರೆಗೂ ನೀರಿನ ಪೂರೈಕೆ ಇರೋದಿಲ್ಲ.

ರಾಜಗೋಪಾಲನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್‌ಎಂಟಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್, ಎಂಇಐ ಲೇಔಟ್, ಭುವನೇಶ್ವರಿ ನಗರ, ಚಿಕ್ಕಸಂದ್ರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಶ್ರೀಗಂಧ ನಗರ, ಬಾಗಲಗುಂಟೆ, ಸಿದ್ದೇಶ್ವರ ಲೇಔಟ್, ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಲೈನ್ ರಸ್ತೆ, ಶ್ರೀನಿವಾಸ ನಗರ, ಹೊಯ್ಸಳ ನಗರ, ಸಂಜೀವಿನಿ ನಗರ, ಲಕ್ಷ್ಮಣ ನಗರ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತ ನಗರ, ಕಮ್ಮಗೊಂಡನಹಳ್ಳಿ, ಮಯೂರ ನಗರ, ಶಿವಾನಂದ ನಗರ ಹಾಗೂ ಫ್ರೆಂಡ್ಸ್ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲೂ ನೀರಿನ ಪೂರೈಕೆಯಲ್ಲಿ ಏರುಪೇರಾಗಲಿದೆ.
ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಕೆಎಚ್‌ಬಿ ಕಾಲೋನಿ, ಶಿವನಹಳ್ಳಿ ಸುತ್ತಮುತ್ತ, ಕೆ.ಪಿ.ಅಗ್ರಹಾರ, ಮಂಜುನಾಥ ನಗರ, ಮಾರೇನಹಳ್ಳಿ, ನಂದಿನಿ ಲೇಔಟ್ ಸುತ್ತ, ಸಂಜಯಗಾಂಧಿ ನಗರ, ಲಕ್ಷ್ಮಿದೇವಿ ನಗರ, ಮಲ್ಲಸಂದ್ರ, ರವೀಂದ್ರ ನಗರ, ಹೌಸಿಂಗ್ ಬೋರ್ಡ್, ಎಂ.ಸಿ.ಲೇಔಟ್, ಮೂಡಲಪಾಳ್ಯ ಸುತ್ತಮುತ್ತ. ನೆಲಗದರನಹಳ್ಳಿ, ಐಪಿನಗರ, ದೊಡ್ಡಣ್ಣ ಇಂಡಸ್ಟ್ರಿಯಲ್ ಏರಿಯಾ, ರಾಮಯ್ಯ ಲೇಔಟ್, ಸಂತೋಷ್ ನಗರ, ಬಿಎಚ್‌ಇಎಲ್ ಕಾಲೊನಿ, ಬಾಬಣ್ಣ ಲೇಔಟ್, ಕಲ್ಯಾಣ ನಗರ, ಪ್ರಶಾಂತ ನಗರ, ಶನಿಮಹಾತ್ಮ ದೇವಸ್ಥಾನ , ಭುವನೇಶ್ವರಿ ನಗರ, ಹಾವನೂರು ಲೇಔಟ್, ಡಿಫೆನ್ಸ್ ಕಾಲೊನಿ.

ಶಂಕ್ರಪ್ಪ ಗಾರ್ಡನ್‌ನ 1ನೇ ಕ್ರಾಸ್‌ನಿಂದ 6ನೇ ಕ್ರಾಸ್, ಬಿಡಿಎ ಲೇಔಟ್, ಮಾರುತಿ ಮಂದಿರ, ಶಿವಾನಂದ ನಗರ, ಕೋಮಲನಗರ, ಸಂಜಯಗಾಂಧಿ ನಗರ, ವಿಶ್ವಭಾರತಿ ನಗರ, ಸಣ್ಣಕ್ಕಿ ಬಯಲು, ರಾಜೀವ್ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರ ನಗರ, ಮೂಡಲಪಾಳ್ಯ, ಎಂ.ಟಿ.ಲೇಔಟ್, ವಿನಾಯಕ ಲೇಔಟ್, ಕಾಮಾಕ್ಷಿಪಾಳ್ಯ, ಶಕ್ತಿ ಗಣಪತಿ ನಗರ.
ಆರ್.ಆರ್.ನಗರ, ಬಿಎಚ್‌ಇಎಲ್ ಲೇಔಟ್, ಐಡಿಐಲ್ ಹೋಮ್ ಟೌನ್‌ಶಿಪ್, ಬಂಡೇಮಠ, ಕೆಂಗೇರಿ ಫೋರ್ಟ್, ಸ್ವಾತಿ ಲೇಔಟ್, ಕೋಡಿಪಾಳ್ಯ, ವಿಜಯಶ್ರೀ ಲೇಔಟ್, ಬಿಇಎಂಎಲ್ 3ರಿಂದ 5ನೇ ಹಂತ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಟೌನ್, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್, ಡಿ ಗ್ರೂಪ್ ಬ್ಲಾಕ್, ನಾಗರಭಾವಿ, ಎನ್‌ಜಿಎಫ್ ಲೇಔಟ್, ಟೆಲಿಕಾಂ ಲೇಔಟ್, ಭುವನೇಶ್ವರ ನಗರ, ಜ್ಞಾನಭಾರತಿ, ದುಬಾಸಿಪಾಳ್ಯ, ನಾಗದೇವನಹಳ್ಳಿ. ಅನ್ನಪೂರ್ಣೇಶ್ವರಿ ನಗರ, ಜ್ಞಾನಗಂಗಾ ನಗರ, ರೈಲ್ವೇ ಲೇಔಟ್, ಎಂಪಿಎಂ ಲೇಔಟ್, ಮಲ್ಲತ್ತಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಿವಾಸಿಗಳು ಈ ನಿಗದಿತ ಸಮಯದಲ್ಲಿ ಆಗಲಿರುವ ನೀರಿನ ವ್ಯತ್ಯಯಕ್ಕೆ ಸಹಕರಿಸುವಂತೆ ಜಲಮಂಡಳಿ ಕೋರಿದೆ.












Click it and Unblock the Notifications