Bengaluru Toilets: ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುನ್ನ ಜೇಬು ನೋಡಿಕೊಳ್ಳಿ!
ಬೆಂಗಳೂರು, ಏಪ್ರಿಲ್. 17: ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಆದರೆ, ಅದು ನೆಲ ನೆನೆಯುವಂತೆ ಮಾತ್ರ. ತಿಂಗಳುಗಳಿಂದ ಬಾಯ್ತೆರೆದಿರುವ ಭೂಮಿಯ ಒಡಲು ತುಂಬಿಸಲು ಈ ಮಳೆ ಯಾವುದೇ ಮೂಲೆಗೂ ಸಾಕಾಗುವುದಿಲ್ಲ. ಮಳೆರಾಯನ ಆಗಮನವನ್ನೇ ಕಾಯುತ್ತಿರುವ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗಿ ಎದುರಿಸುತ್ತಿರುವುದು ರಾಜಧಾನಿ ಬೆಂಗಳೂರು.
ನೀರಿಗಾಗಿ ಪರದಾಡುತ್ತಿರುವ ಬೆಂಗಳೂರಿನಲ್ಲಿ ಈಗ ಸಾರ್ವಜನಿಕ ಶೌಚಾಲಯಗಳ ಮೇಲೂ ನೀರಿನ ಕೊರತೆ ಪರಿಣಾಮ ಬೀರಿದೆ. ಹೀಗಾಗಿಯೇ ಸಾರ್ವಜನಿಕ ಶೌಚಾಲಯ ಬಳಕೆಗೆ ಹೋಗುವಾಗ ನಿಮ್ಮ ಜೇಬು ಕೂಡ ನೋಡಿಕೊಳ್ಳಬೇಕು. ಏಕೆಂದರೆ, ಈಗ ಈ ಶೌಚಾಲಯಗಳ ಬಳಕೆಗೆ ಇರುವ ದರ ಕೂಡ ದುಪ್ಪಟ್ಟಾಗಿದೆ.

ಸಾರ್ವಜನಿಕ ಶೌಚಾಲಯ ಬಳಕೆಯ ದರ ಏರಿಕೆ!
ನೀರಿನ ಬಿಕ್ಕಟ್ಟು ಎದುರಾಗುವವರೆಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ವಹಿಸುವ ಸಾರ್ವಜನಿಕ ಶೌಚಾಲಯಗಳಲ್ಲಿ ಗ್ರಾಹಕರಿಗೆ ಮೂತ್ರ ವಿಸರ್ಜನೆಗೆ 2 ರೂಪಾಯಿ ಮತ್ತು ಮಲವಿಸರ್ಜನೆಗೆ 5 ರೂಪಾಯಿ ದರ ವಿಧಿಸಲಾಗುತ್ತಿತ್ತು. ಆದರೆ, ನೀರಿನ ಕೊರತೆ ಕಾಣಿಸಿಕೊಂಡ ಬಳಿಕ ಅವುಗಳನ್ನು ನಿರ್ವಹಿಸುವವರು ದುಪ್ಪಟ್ಟು ಮೊತ್ತಕ್ಕೆ ಬೇಡಿಕೆಯಿರುವುದರಿಂದ ಹೆಚ್ಚುವರಿ ಹಣ ನೀಡಬೇಕಾಗುತ್ತದೆ.
ಮೂತ್ರ ವಿಸರ್ಜನೆಗೆ 2 ರೂಪಾಯಿ ಮತ್ತು ಮಲವಿಸರ್ಜನೆಗೆ 5 ರೂಪಾಯಿ ಇದ್ದ ದರ ನಗರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಾಗಿನಿಂದ ದರಗಳು 5 ಮತ್ತು 10 ರೂಪಾಯಿಗೆ ಏರಿಕೆಯಾಗಿದೆ. ಇದಲ್ಲದೆ, ಸಣ್ಣ ಬಕೆಟ್‌ಗಳಲ್ಲಿ ನೀರು ನೀಡಲಾಗುತ್ತಿದ್ದು, ಹೆಚ್ಚುವರಿ ನೀರಿಗೆ ಹೆಚ್ಚುವರಿ ಹಣ ನೀಡಬೇಕಾಗುತ್ತದೆ!.
ಹೆಚ್ಚುವರಿ ಶುಲ್ಕ ವಿಧಿಸಲು ಕಾರಣ ಬೋರ್‌ವೆಲ್‌ಗಳು ಮತ್ತು ನೀರಿನ ಕೊರತೆ ಎಂದು ಶೌಚಾಲಯ ನಿರ್ವಾಹಕರು ದೂರುತ್ತಾರೆ. ನೀರಿನ ಟ್ಯಾಂಕರ್‌ಗಳು ಬೆಲೆಗಳನ್ನು ಹೆಚ್ಚಿಸಿವೆ. ಈ ಸಾರ್ವಜನಿಕ ಶೌಚಾಲಯಗಳನ್ನು ನಡೆಸುವ ಖರ್ಚು ವೆಚ್ಚ ಕೂಡ ಹೆಚ್ಚಾಗಿವೆ. ಹೀಗಾಗಿ ದರ ಏರಿಕೆ ಮಾಡಾಗಿದೆ ಎಂದಿದ್ದಾರೆ.
ಶುಲ್ಕ ಏರಿಕೆಯಾಗಿದ್ದರೂ ಸಾರ್ವಜನಿಕ ಶೌಚಾಲಯಗಳು ಕೊಳಕು, ದುರ್ವಾಸನೆಯಿಂದ ಕೂಡಿವೆ ಎಂದು ಬಿಎಂಟಿಸಿ ಬಸ್ ಚಾಲಕರೊಬ್ಬರು ಆರೋಪಿಸಿದ್ದಾರೆ. ಕೆಲವು ಶೌಚಾಲಯಗಳಲ್ಲಿ ಸ್ನಾನ ಮಾಡುವ ಸೇವೆಗಳನ್ನು ನಿಲ್ಲಿಸಿದರೆ, ಕೆಲವು ನೀರಿನ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.
ಮೆಜೆಸ್ಟಿಕ್‌ನಲ್ಲಿ ಸಾರ್ವಜನಿಕ ಶೌಚಾಲಯ ನಡೆಸುತ್ತಿರುವ ವ್ಯಕ್ತಿಯೊಬ್ಬರನ್ನು ಉಲ್ಲೇಖಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, "ನಮಗೆ ದಿನಕ್ಕೆ ಮೂರು ಟ್ಯಾಂಕರ್ ನೀರು ಬೇಕಾಗುತ್ತದೆ. ಪ್ರತಿ ಟ್ಯಾಂಕರ್ ನೀರಿನ ಬೆಲೆ 5,000 ರೂಪಾಯಿಯಿ ಇದೆ. ಇದು ನಮ್ಮ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಅದರಲ್ಲಿ ಹೆಚ್ಚಿನವು ನೀರಿನ ವೆಚ್ಚವನ್ನು ಸರಿದೂಗಿಸಲು ಬಳಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಮಾಹಿತಿ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್












Click it and Unblock the Notifications