ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮೇ.2ರಂದು ಕೇಂದ್ರ-1 ಉಪವಿಭಾಗದಲ್ಲಿ ನೀರಿನ ಅದಾಲತ್

By Nayana
|
Google Oneindia Kannada News

ಬೆಂಗಳೂರು, ಮೇ.1: ಬೆಂಗಳೂರು ಜಲಮಂಡಳಿಯು ಕೇಂದ್ರ 1 ಉಪ ವಿಭಾಗದಲ್ಲಿ ನೀರಿನ ಅದಾಲತ್‌ನ್ನು ಮೇ.2ರಂದು ಮಂಗಳವಾರ ಹಮ್ಮಿಕೊಂಡಿದೆ.

ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರೆ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ನಡೆಸಲಾಗುತ್ತದೆ.

ಜೂನ್ ಅಂತ್ಯದವರೆಗೂ ಬೆಂಗಳೂರಲ್ಲಿ ಕುಡಿವ ನೀರಿಗೆ ಸಮಸ್ಯೆಯಿಲ್ಲಜೂನ್ ಅಂತ್ಯದವರೆಗೂ ಬೆಂಗಳೂರಲ್ಲಿ ಕುಡಿವ ನೀರಿಗೆ ಸಮಸ್ಯೆಯಿಲ್ಲ

(ಕೇಂದ್ರ-1) ಉಪವಿಭಾಗ ವ್ಯಾಪ್ತಿಗೆ ಬರುವ ಎಲ್.ಎಲ್.ಆರ್, ಚಿಕ್ಕಲಾಲ್ ಬಾಗ್, ಬನ್ನಪ್ಪ ಪಾರ್ಕ್, ಸುಧಾಮನಗರ-1 ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ತುಳಸಿ ತೋಟ, ಚಿಕ್ಕ ಲಾಲ್ ಬಾಗ್ ಇಲ್ಲಿ ನಡೆಸಲಿದ್ದು ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

Water Adalath in Bengaluru on May 2

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ಕೇಂದ್ರ)22945187. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಕೇಂದ್ರ-1) ಉಪವಿಭಾಗ-22945188. ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ ದೂರುನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ-22238888, ಸಹಾಯವಾಣಿ 1916 ಹಾಗೂ ವಾಟ್ಸ್ ಆಪ್ ಸಂಖ್ಯೆ-8762228888 ಗೆ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್‍ಗಳ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ.

English summary
Bengaluru Water Supply and Sewage Board is organising water Adalath for citizens to resolve problems with connections, bill payment, shifting and other issues on May 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X