ಯುದ್ಧದ ಪರಿಣಾಮ: ವಂದೇ ಭಾರತ್ ರೈಲು ಗಾಲಿಗಳು ಬೆಂಗಳೂರಿನಲ್ಲಿಯೇ ಉತ್ಪಾದನೆ
ಬೆಂಗಳೂರು, ಮೇ 7: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪರಿಣಾಮ ಭಾರತಕ್ಕೆ ಬರಬೇಕಿದ್ದ ವಂದೇ ಭಾರತ್ ರೈಲ್ವೇ ಚಕ್ರಗಳು ಆಮದು ಸ್ಥಗಿತಗೊಂಡಿರುವ ಹಿನ್ನೆಲೆ ಭಾರತದಲ್ಲೇ ತಯಾರು ಮಾಡಲು ರೈಲ್ವೇ ಇಲಾಖೆ ಮುಂದಾಗಿದೆ.
ಒಂದೇ ಭಾರತ್ ಯೋಜನೆಯಡಿ ಘೋಷಿಸಲಾಗಿರುವ ರೈಲುಗಳಿಗೆ ಅಗತ್ಯವಿರುವ ಚಕ್ರಗಳನ್ನು ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿ ಉತ್ಪಾದಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ರೈಲ್ವೇ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ 2022-23 ಬಜೆಟ್ ನಲ್ಲಿ ಈ ವಂದೇ ಭಾರತ್ ರೈಲ್ವೆಯನ್ನ ದಕ್ಷಿಣ ಭಾರತದಲ್ಲಿ ವಿಸ್ತರಿಸುವ ಉದ್ದೇಶದಿಂದ ವಾರ್ಷಿಕ ಬಜೆಟ್ ನಲ್ಲಿ 400 ವಂದೇ ಭಾರತ್ ರೈಲುಗಳನ್ನು ಹೊರತರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಿಸಿದ್ದರು. ಸದ್ಯ ಉಕ್ರೇನ್ ಯುದ್ಧ ಪೀಡಿತ ಪ್ರದೇಶವಾಗಿರುವುದರಿಂದ ನಿಗದಿತ ಸಮಯಕ್ಕೆ ಪೂರೈಕೆಯಾಗದ ಹಿನ್ನೆಲೆ ಬೆಂಗಳೂರಿನಲ್ಲಿ ವಂದೇ ಭಾರತ್ ಚಕ್ರಗಳನ್ನು ತಯಾರಿಸಲು ನಿರ್ಧರಿಸಲಾಗಿದೆ ಮೂಲಗಳು ತಿಳಿಸಿವೆ.

16 ಬೋಗಿಗಳನ್ನ ಒಳಗೊಂಡಿರುವ ವಂದೇ ಭಾರತ್ 'ಮಿನಿ ಹೈಸ್ಪೀಡ್' ರೈಲು ಉತ್ತರ ಭಾರತದಲ್ಲಿ ಸಂಚಾರ ಮಾಡುತ್ತಿದೆ. ಇದೀಗ ಹೊಸದಾಗ ತಯಾರಾಗುತ್ತಿರುವ ರೈಲುಗಳಿಗೆ ಉಕ್ರೇನ್ ನಿಂದ ಬರಬೇಕಿದ್ದ 128 ಚಕ್ರಗಳ ಮೊದಲ ಬ್ಯಾಚ್, USD 16 ಮಿಲಿಯನ್ ವೆಚ್ಚ 36,000 ಚಕ್ರಗಳು ಉಕ್ರೇನ್ ನಿಂದ ಅದರ ನೆರೆಯ ರೊಮೇನಿಯಾಕ್ಕೆ ರಸ್ತೆಯ ಮೂಲಕ ಸಾಗಿಸಲಾಗಿದೆ. ರೊಮೇನಿಯಾಗೆ ತಲುಪಿರುವ 128 ಚಕ್ರಗಳ ಮೊದಲ ಬ್ಯಾಚ್ ಅನ್ನು ಭಾರತೀಯಾ ವಿಮಾನ ಮೂಲಕ ಭಾರತಕ್ಕೆ ತರುವ ಯೋಜನೆ ರೂಪಿಸಿಕೊಳ್ಳಲಾಗಿದೆ.
3 ವರ್ಷದಲ್ಲಿ 400 ಒಂದೇ ಭಾರತ್ ರೈಲುಗಳು
ಮೈಸೂರು ಸಂಸ್ಥಾನ ಕಾಲದಿದಲೂ ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ವೇ ವೀಲ್ ಫ್ಯಾಕ್ಟರಿಯಲ್ಲಿ ಮಿನಿ ಹೈಸ್ಪೀಡ್ ರೈಲುಗಳಿಗೆ ಬೇಕಾದ ಚಕ್ರಗಳನ್ನ ತಯಾರು ಮಾಡಲಿದೆ. ಉಕ್ರೇನ್ ಜೊತೆಗೆ ಭಾರತ ವ್ಯವಹರಿಸುತ್ತಿದ್ದ ರಪ್ತು ಮತ್ತು ಆಮದು ಸಂಪೂರ್ಣ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಹೊರತರಬೇಕಾದರೆ ರೈಲಿಗೆ ಬೇಕಾಗುವ ಸಮರ್ಪಕ ವಸ್ತುಗಳನ್ನ ಪೂರೈಸಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ವಂದೇ ಭಾರತ್ ರೈಲು ಸಂಚಾರ ಕೇಂದ್ರ ಸ್ಥಾನವಾಗಿ ಬೆಂಗಳೂರು ಆಯ್ಕೆ ಸಹ ಮಾಡಲಾಗಿದೆ.
Recommended Video
ಬೆಂಗಳೂರಿನಿಂದ ಹೈದರಾಬಾದ್, ಹುಬ್ಬಳ್ಳಿ ಮತ್ತು ಕೊಚ್ಚಿಗೆ ಈ ಸೆಮಿ ಹೈಸ್ಪೀಡ್ ರೈಲುಗಳನ್ನು ಈ ಭಾಗಗಳಲ್ಲಿ ಪರಿಚಯಿಸುವ ಜೊತೆಗೆ ಈ ರೈಲುಗಳು ಕಡ್ಡಾಯವಾಗಿ ಸಂಚಾರ ಮಾಡುವ ಬಗ್ಗೆ ಚಿಂತಿಸಲಾಗಿದೆ. ವಿದ್ಯುದ್ದೀಕರಣ ಕೆಲಸ ಮುಂದುವರೆದಿದ್ದು ಮುಂದಿನ ಮಾರ್ಚ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಸಹ ಇದೆ. ಒಟ್ಟಾರೆ ಬೆಂಗಳೂರು ಯಲಹಂಕ ರೈಲ್ವೇ ಘಟಕಕ್ಕೆ ಮಿನಿ ಹೈಸ್ಪೀಡ್ 'ವಂದೇ ಭಾರತ್' ರೈಲ್ವೇ ಚಕ್ರ ತಯಾರು ಘಟಕ ಬಂದಿರುವುದು ಮತ್ತಷ್ಟು ಶಕ್ತಿ ತಂದಿದೆ.
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್












Click it and Unblock the Notifications