ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಕ್ಫ್ ಆಸ್ತಿ ಪ್ರಕರಣದಲ್ಲಿ ಉಲ್ಟಾ ಹೊಡೆದ ಜಮೀರ್: ಬಿಜೆಪಿ ಆರೋಪ

|
Google Oneindia Kannada News

ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೇ ಇದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದಿತ್ತು.

ಮುಸ್ಲಿಂ ಪಾರ್ಟಿ ಹೇಳಿಕೆ: ಮೌನ ಮುರಿದ ರಾಹುಲ್ ಗಾಂಧಿಮುಸ್ಲಿಂ ಪಾರ್ಟಿ ಹೇಳಿಕೆ: ಮೌನ ಮುರಿದ ರಾಹುಲ್ ಗಾಂಧಿ

ಆಗ ಸಚಿವ ಜಮೀರ್ ಅಹಮದ್, 'ವರದಿಯಲ್ಲಿ ಸತ್ಯಾಂಶವಿದ್ದರೆ ನನ್ನ ತಂದೆ ತಪ್ಪು ಮಾಡಿದ್ದರೂ ನಾನು ಕ್ಷಮಿಸುವುದಿಲ್ಲ. ನೀವು ಇದನ್ನು ಸಿಬಿಐಗೆ ಕೊಡದಿದ್ದರೆ ನಾನು ಕೊಡಿಸುತ್ತೇನೆ' ಎಂದು ಹೇಳಿದ್ದರು. ಸಚಿವರು ಭರವಸೆ ನೀಡಿದ್ದರಿಂದ ಸಭಾಪತಿಗಳು ಚರ್ಚೆಯನ್ನು ಅಲ್ಲಿಗೆ ಮುಗಿಸಿದ್ದರು ಎಂದು ಹೇಳಿದರು.

wakf board case bjp demand cbi investigation

'ಸರ್ಕಾರದ ಉತ್ತರವನ್ನು ನಾವು ಸ್ವಾಗತಿಸಿದ್ದೆವು. ಆದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಸದನದಲ್ಲಿ ಹೇಳಿದ್ದ ಸರ್ಕಾರ ಈಗ ನುಣುಚಿಕೊಳ್ಳುತ್ತಿದೆ.

ತಕ್ಷಣ ಇದನ್ನು ಸಿಬಿಐಗೆ ಕೊಡಬೇಕು. ಇದರಿಂದ ರಾಜಕೀಯ ತಲ್ಲಣ ಸೃಷ್ಟಿಯಾಗಬಹುದು. ಹಿರಿಯರ ತಲೆ‌ ಉರುಳಲಿದೆ ಎನ್ನುವ ಭೀತಿ ಕಾಂಗ್ರೆಸ್‌ಗೆ ಇರಬಹುದು ಆದರೆ ಜೆಡಿಎಸ್‌ಗೆ ಈ ಸಂಕಷ್ಟಗಳು ಇಲ್ಲ.

15 ದಿನಗಳಲ್ಲಿ‌ ವರದಿ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ.

wakf board case bjp demand cbi investigation

ಹಗರಣವನ್ನು ಜನರ ಮುಂದೆ‌ ತೆಗೆದುಕೊಂಡು ಹೋಗುತ್ತೇವೆ. ಕುಮಾರಸ್ವಾಮಿ ಬುಡಕ್ಕೂ ಇದು ಬರಬಹುದು. ಅವರ ತಲೆದಂಡವೂ ಆದರೆ ಅದಕ್ಕೆ ಅವರೇ ಹೊಣೆ ಎಂದು ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

ಸದನದ ಬಳಿಕ ಖಾದರ್ ಹೋಗಿ ಜಮೀರ್ ಬಳಿ ಮಾತನಾಡಿದ್ದಾರೆ. ಅದಕ್ಕೆ ಜಮೀರ್ ಈಗ ನಿಲುವು ಬದಲಿಸಿಕೊಂಡಿದ್ದಾರೆ. ಮಾಣಿಪ್ಪಾಡಿ ವರದಿ ಯಥಾವತ್ತಾಗಿ ಮಂಡಿಸಿ ಎಂದಾಗ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಯೋಧ್ಯೆಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು: ವಾಸೀಮ್ ರಿಜ್ವಿ ಅಯೋಧ್ಯೆಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು: ವಾಸೀಮ್ ರಿಜ್ವಿ

ಅನ್ವರ್ ಮಾಣಿಪ್ಪಾಡಿ ಮಾತನಾಡಿ, 2012 ಮಾರ್ಚ್ 26 ರಂದು 7 ಸಾವಿರ ಪುಟದ ವರದಿ ನೀಡಿದ್ದೆ. ಆಗಿನ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿ, ಸಂಪುಟದಲ್ಲಿ ಕೂಡ ಚರ್ಚಿಸಿ ಸದನದಲ್ಲಿ ಮಂಡನೆಗೆ ತೀರ್ಮಾನ ಮಾಡಿತ್ತು.

2013 ರಲ್ಲಿ ಸಂಪುಟದಲ್ಲಿ‌ ಅನುಮೋದನೆ ಪಡೆದು ಉತ್ತಮ ವಿಧೇಯಕಗಳನ್ನು ತರಲಾಗಿತ್ತು. ಯಾವ ಆಸ್ತಿಯಲ್ಲಿ ಕಬಳಿಕೆ ಆಗಿದೆಯೋ ಆ ಆಸ್ತಿ ವಾಪಸ್ ತಂದುಕೊಡಲು ಎರಡು ಸಮಿತಿ‌ ರಚನೆ ಮಾಡಲಾಗಿತ್ತು.

wakf board case bjp demand cbi investigation

ರಾಜ್ಯ ಸಮಿತಿ, ಜಿಲ್ಲಾ ಸಮಿತಿ ರಚಿಸಲಾಗಿತ್ತು. ಯಾರೂ ಕೂಡ ಕೋರ್ಟ್‌ಗೆ‌ ಹೋಗುವಂತಿಲ್ಲ. ಸಮಿತಿ ಮುಂದೆಯೇ ಬರಬೇಕು ಎಂದು ವಿಧೇಯಕ ರಚಿಸಲಾಗಿತ್ತು.

ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಪಂಚತಾರಾ ಹೋಟೆಲ್‌, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಕಬಳಿಕೆಯಾದ ಆಸ್ತಿಯನ್ನು ಮರಳಿ ಬಿಡಿಸಿಕೊಳ್ಳುವ ಮಹತ್ವದ ವಿಧೇಯಕ ತಂದಿದ್ದೆವು. ಆದರೆ ನನ್ನ ಅವಧಿ ಮುಗಿದ ನಂತರ ವಿಧೇಯಕ ತಂದರು ಎಂಬ ತಪ್ಪು ಮಾಹಿತಿ ನೀಡಲಾಗಿದೆ ಎಂದು ಮಾಣಿಪ್ಪಾಡಿ ಹೇಳಿದರು.

ಅಂದಿನ‌ ಸಭಾಪತಿ ಶಂಕರಮೂರ್ತಿ ಅವರು ತಮ್ಮ ಆದೇಶ ಅನುಷ್ಠಾನ ಆಗದಾಗ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದು ತಿಳಿಸಿದರು.

English summary
BJP Senior leaders Kota Srinivas Poojari and Anwar Manippadi demanded for CBI investigation of Wakf Board Land Scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X