ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Voter Data Theft: ಬಿಬಿಎಂಪಿ ಮುಖ್ಯ ಆಯುಕ್ತರನ್ನು ವರ್ಗಾಯಿಸಿದರೆ ಉಗ್ರ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 29: ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಸಂಬಂಧ ಸರ್ಕಾರ ಏನಾದರೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು.

ಹೀಗೆಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಎಚ್ಚರಿಕೆ ನೀಡಿದೆ. ಈ ಕುರಿತು ಸಂಘವು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದು ಎಚ್ಚರಿಕೆ ನೀಡಿದೆ.

Breaking; ದೆಹಲಿ ಟೂರಿಸ್ಟ್ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ವ್ಯಂಗ್ಯ Breaking; ದೆಹಲಿ ಟೂರಿಸ್ಟ್ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ವ್ಯಂಗ್ಯ

ಸಂಘದ ರಾಜ್ಯಾಧ್ಯಕ್ಷ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಅಮೃತ್ ರಾಜ್, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣ ಸದ್ಯ ತನಿಖೆ ನಡೆಯುತ್ತಿದೆ. ಇತ್ತ ಹಲವು ಅಧಿಕಾರಿಗ ಅಮಾನತು ಸೇರಿದಂತೆ ಹಲವು ಬೆಳೆವಣಿಗೆ ನಡೆಯುತ್ತಿವೆ. ಇದಲ್ಲದೇ ಪ್ರಾಮಾಣಿಕ ಅಧಿಕಾರಿ ತುಷಾರ್‌ ಗಿರಿನಾಥ್‌ ರನ್ನು ವರ್ಗಾವಣೆ ಬಗ್ಗೆ ಮಾತುಗಳು ಕೇಳಿ ಬಂದಿವೆ.

Voter Data Theft Govt Dont do Transfer of BBMP Chief Commissioner

ಬಿಬಿಎಂಪಿ ಮುಖ್ಯ ಆಯುಕ್ತ ಸ್ಥಾನದಿಂದ ಅವರನ್ನು ಬೇರೆಡೆ ವರ್ಗಾಯಿಸಿದರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳು ಬಂದ್ ಆಗಲಿವೆ. ಕೆಲಸ ನಿಲ್ಲಿಸಿ ನ್ಯಾಯಯುತವಾಗಿ ಹೋರಾಟಕ್ಕೆ ಇಳಿಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಘದ ಬೇಡಿಕೆಗಳೇನು?

ಈಗಾಗಲೇ ಮತದಾರರ ಪರಿಷ್ಕರಣೆ ಲೋಪದೋಷ ಸಂಬಂಧ ಕೇಂದ್ರ ಚುನಾವಣೆ ಆಯೋಗ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದೆ. ಕೂಡಲೇ ಆ ಆದೇಶವನ್ನು ರದ್ದುಗೊಳಿಸಬೇಕು. ಇನ್ನು ಪ್ರಕರಣ ಸಂಬಂಧ ಬಿಬಿಎಂಪಿ ನಾಲ್ವರು ಅಧಿಕಾರಿಗಳ ಅಮಾನತು ಮತ್ತು ಬಂಧನವು ಕಾನೂನು ಬಾಹಿರವಾಗಿದೆ ಎಂದು ಅವರು ಆರೋಪಿಸಿದರು.

ಪ್ರಸ್ತುತ ಪ್ರಕರಣವು ಐಪಿಸಿ ಸೆಕ್ಸನ್ ಅಡಿ ಬರುವುದರಿಂದ ಪ್ರಕರಣವನ್ನು ಜನಪ್ರತಿನಿಧಿ ಕಾಯ್ದೆ ಯಡಿ ತನಿಖೆ ನಡೆಸಬೇಕು ಎಂದು ಸಂಘವು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

Voter Data Theft Govt Dont do Transfer of BBMP Chief Commissioner

ಪ್ರಕರಣ ಕುರಿತು ಚಿಲುಮೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖೆ, ವಿಚಾರಣೆ ಸಿದ್ಧವಿರುವ ಬಿಬಿಎಂಪಿ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಬಾರದು. ಯಾವುದಾದರೂ ಒಂದು ಸಂಸ್ಥೆ ತನಿಖೆ ಮಾಡಲಿ. ಅದನ್ನು ಬಿಟ್ಟು ಎರಡು ಮೂರು ಪೊಲೀಸ್ ಠಾಣೆಗಳು, ಇನ್ನಿತರ ಅಧಿಕಾರಿಗಳು ತನಿಖೆ ನಡೆಸಿದರೆ ಅಧಿಕಾರಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಅವರು ಒತ್ತಾಯಿಸಿದರು.

English summary
Voter Data Theft: Government If you Transfer to BBMP Chief Commissioner, their will be fierce Protest, warning by State Warning Karnataka Municipal Corporation Employees Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X