ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಕ್ಕಲಿಗ ಸಂಘದ ಚುನಾವಣೆ: ಅಂಜನಪ್ಪ, ನಾರಾಯಣಗೌಡ ನೇತೃತ್ವದ 15 ಮಂದಿ ನಾಮಪತ್ರ ಸಲ್ಲಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 23: ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಒಕ್ಕಲಿಗ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಶಪಥದೊಂದಿಗೆ ಡಾ. ಅಂಜನಪ್ಪ ಹಾಗೂ ಪ್ರೊ.ಕೆ. ನಾರಾಯಣಗೌಡ ನೇತೃತ್ವದ 15 ಮಂದಿ ತಂಡ ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

ಮಂಗಳವಾರ ಬೆಂಗಳೂರಿನ ವಿವಿ ಪುರಂನಲ್ಲಿರುವ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಒಟ್ಟಾಗಿ ಆಗಮಿಸಿದ 15 ಮಂದಿ ತಂಡ ಚುನಾವಣಾಧಿಕಾರಿಯಾಗಿರುವ ಶಶಿಧರ್‌ರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಡಾ. ಟಿ.ಎಚ್. ಅಂಜನಪ್ಪ, ಪ್ರೊ. ಕೆ. ನಾರಾಯಣಗೌಡ, ಅನುಸೂಯ ಕಳಸೇಗೌಡ, ಟಿ.ಎಂ. ಅರವಿಂದ್, ಉಮಾಪತಿ ಶ್ರೀನಿವಾಸ್‌ಗೌಡ, ಎಸ್.ಕೆ. ಉಮೇಶ್, ತಮ್ಮಣ್ಣ ಅಬ್ಬೂರು, ನರೇಂದ್ರ ಬಾಬು. ಆರ್, ಎನ್. ನಾಗರಾಜ, ಕೆ.ಎನ್. ಪುಟ್ಟೇಗೌಡ, ಡಾ. ಭಾವನಾ ಗಿರಿಧರ್, ವೇಣುಗೋಪಾಲಗೌಡ, ಕೆ.ವಿ. ಶಂಕರ್, ಡಾ.ಎ.ಡಿ. ಶಿವರಾಮ್ ಹಾಗೂ ಸತೀಶ್ ಕಡತನಮಲೆ ಅವರು ಒಕ್ಕಲಿಗ ಸಂಘದ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

Vokkaligara Sangha Elections 2021: Anjanappa And Narayana Gowda led 15 People Files Nomination


ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಟಿ.ಎಚ್. ಅಂಜನಪ್ಪ, "ನಮ್ಮ ಹಾಗೂ ನಾರಾಯಣಗೌಡ ನೇತೃತ್ವದ ತಂಡವು ಸಮುದಾಯದಲ್ಲಿ ಬದಲಾವಣೆ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ತರುವ ಗುರಿಯೊಂದಿಗೆ ನಾಮಪತ್ರ ಸಲ್ಲಿಸಿದ್ದೇವೆ. ಈ ಬಾರಿ ಮತದಾರರು ನಮ್ಮ ತಂಡವನ್ನು 100ಕ್ಕೆ ನೂರರಷ್ಟು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಮ್ಮ ತಂಡದಲ್ಲಿರುವ ಆಕಾಂಕ್ಷಿಗಳು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಅನುಭವವನ್ನು ಬಳಸಿಕೊಂಡು ಒಕ್ಕಲಿಗ ಸಮುದಾಯದಲ್ಲಿ ಹೊಸ ಬದಲಾವಣೆ ತರುವ ಆಶಯವನ್ನು ಹೊಂದಿದ್ದೇವೆ ಎಂದು ಹೇಳಿದರು.

ನಾವು ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂಬ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಒಕ್ಕಲಿಗ ಸಂಘದ ಸುಧಾರಣೆಗಾಗಿ ನಮ್ಮದೇ ಆದ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡಿದ್ದೇವೆ. ಉತ್ಸಾಹಿ ಯುವಕರ ತಂಡ ನಮ್ಮದಾಗಿರುವುದರಿಂದ ಮತದಾರರ ನಮ್ಮನ್ನು ವಿಜಯಶಾಲಿಯಾಗಿ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.

Vokkaligara Sangha Elections 2021: Anjanappa And Narayana Gowda led 15 People Files Nomination


ನಿವೃತ್ತ ಉಪ ಕುಲಪತಿಗಳಾದ ಪ್ರೊ.ಕೆ. ನಾರಾಯಣಗೌಡ ಮಾತನಾಡಿ, ಈ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಿಂತಲೂ ವಿಶಿಷ್ಟ ಮತ್ತು ವಿಭಿನ್ನವಾಗಿದೆ. ಮತದಾರರು ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಮ್ಮನ್ನು ಆಯ್ಕೆ ಮಾಡುವ ವಿಶ್ವಾಸ ನಮಗಿದೆ ಎಂದರು.

ನಾವು ಗೆದ್ದರೆ ಏನು ಮಾಡುತ್ತೇವೆ ಎಂದು ಜನತೆಯ ಮುಂದಿಡಲಿದ್ದೇವೆ. ನಮ್ಮದು ಬೇರೆಯವರಂತೆ ಭರವಸೆಯಾಗಿ ಉಳಿಯುವುದಿಲ್ಲ. ಕೊಟ್ಟ ಮಾತನ್ನು ನೂರಕ್ಕೆ ನೂರು ಈಡೇರಿಸುತ್ತೇವೆ ಎಂದು ಶಪಥ ಮಾಡಿದರು.

Recommended Video

ಕೆಂಚಪ್ಪ ಗೌಡರ ಮನದಾಳದ ಮಾತು | Oneindia Kannada

ಸಮುದಾಯದ ಶಿಕ್ಷಣಕ್ಕೆ ಆದ್ಯತೆ, ಯುವಕರಿಗೆ ಉದ್ಯೋಗ, ಮಹಿಳೆಯರ ಸಬಲೀಕರಣ, ಸ್ವಯಂ ಉದ್ಯೋಗ ನೀಡುವುದು, ಸಂಘದ ಆಸ್ತಿಯನ್ನು ರಕ್ಷಣೆ ಮಾಡುವುದು, ಬಡ ಮಕ್ಕಳಿಗೆ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದವರಿಗೆ ಪ್ರೊತ್ಸಾಹ ಹೀಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಇವೆಲ್ಲವನ್ನು ಕಾಲ ಮಿತಿಯೊಳಗೆ ಈಡೇರಿಸುವ ವಾಗ್ದಾನವನ್ನು ಮಾಡಿದರು.

ಇದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ಒಟ್ಟಾಗಿ ಬಂದ ಡಾ. ಅಂಜನಪ್ಪ ಹಾಗೂ ಪ್ರೊ.ಕೆ. ನಾರಾಯಣಗೌಡ ನೇತೃತ್ವದ 15 ಮಂದಿ ತಂಡ ಸಂಘದ ನೌಕರರನ್ನು ಭೇಟಿಯಾಗಿ ಮತಯಾಚಿಸಿ ತಮ್ಮನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ನೌಕರರ ಸಮಸ್ಯೆಗಳನ್ನು ಆಲಿಸಿದ ಆಕಾಂಕ್ಷಿಗಳು ಈ ಬಾರಿ ನಮ್ಮನ್ನು ಆಯ್ಕೆ ಮಾಡಿದರೆ ನೀವು ಪ್ರಸ್ತಾಪಿಸಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟರು. ನಂತರ 11 ಗಂಟೆಗೆ ಸಂಘದ ಆವರಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಅಶ್ವರೋಹಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

English summary
Dr. Anjanappa and Prof. Narayana Gowda headed 15-member team filed nominations for the election to committee of Vokkaliga Sangha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X