ಎಚ್ ವಿಶ್ವನಾಥ್ ರಾಜೀನಾಮೆ ಪ್ರಹಸನಕ್ಕೆ ಇಂದು ತೆರೆ
Recommended Video
ಬೆಂಗಳೂರು, ಜೂನ್ 20: ಎಚ್ ವಿಶ್ವನಾಥ್ ರಾಜೀನಾಮೆ ಪ್ರಹಸನಕ್ಕೆ ಇಂದು ತೆರೆ ಬೀಳಲಿದೆ. ಜೆಡಿಎಸ್‌ನ ಮುಂದಿನ ರಾಜ್ಯಾಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೂ ಉತ್ತರ ದೊರೆಯುವ ಸಮಯ ಸನ್ನಿಹಿತವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ನೀಡಿದ ಬಳಿಕ ಮುಂದಿನ ರಾಜ್ಯಾದ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಅದೇ ಹೊತ್ತಿಗೆ ನಿಖಿಲ್ ಕುಮಾರಸ್ವಾಮಿ ಕೂಡ ರಾಜ್ಯಾಧ್ಯಕ್ಷ ಯಾಕಾಗಬಾರದು ಅವರಿಗೂ ಅರ್ಹತೆ ಇದೆ ಎಂದು ಖುದ್ದು ವಿಶ್ವನಾಥ್ ಅವರೇ ಹೇಳಿದ್ದರು.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಇಂದು ತಮ್ಮ ನಿರ್ಧಾರವನ್ನ ಎಚ್. ವಿಶ್ವನಾಥ್ ತಿಳಿಸಲಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್ ಮನವೊಲಿಕೆಗೆ ಜೆಡಿಎಸ್ ವರಿಷ್ಠ ದೇವೇಗೌಡರು ಮುಂದಾಗಿದ್ದರು. ಅದು ಫಲ ನೀಡುವುದೇ ಎಂದು ಕಾದು ನೋಡಬೇಕಿದೆ.

ಮಂಗಳವಾರ ತಮ್ಮ ನಿವಾಸದಲ್ಲಿ ಸುದೀರ್ಘ ಮಾತುಕತೆ ಬಳಿಕವೂ ವಿಶ್ವನಾಥ್ ರಾಜೀನಾಮೆ ವಾಪಸ್ ಪಡೆಯೋ ನಿರ್ಧಾರ ಮಾಡಿರಲಿಲ್ಲ. ಈ ವೇಳೆ ಗುರುವಾರದವರೆಗೆ ಯೋಚನೆ ಮಾಡಿ ತಮ್ಮ ನಿರ್ಧಾರ ತಿಳಿಸಿ ಎಂದು ದೇವೇಗೌಡರು ಹೇಳಿದ್ದರು.
ಇಂದು ಸ್ವತಃ ದೇವೇಗೌಡರನ್ನ ಭೇಟಿಯಾಗಲಿರುವ ವಿಶ್ವನಾಥ್, ತಮ್ಮ ನಿರ್ಧಾರ ತಿಳಿಸಲಿದ್ದಾರೆ. ದೇವೇಗೌಡರ ಮಾತಿಗೆ ಮಣಿದು ರಾಜೀನಾಮೆ ವಾಪಸ್ ಪಡೆಯುತ್ತಾರಾ ಅಥವಾ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿರುತ್ತಾರಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.












Click it and Unblock the Notifications