ನಾರದ ಜಯಂತಿ ಪ್ರಯುಕ್ತ ಪತ್ರಕರ್ತರಿಗಾಗಿ ಮಾಧ್ಯಮ ಪುರಸ್ಕಾರ
ಬೆಂಗಳೂರು, ಜೂ.09: ರಾಜ್ಯದ ಮಾಧ್ಯಮ ಸಂವಹನ ಸಂಸ್ಥೆಗಳಲ್ಲೊಂದಾದ 'ವಿಶ್ವ ಸಂವಾದ ಕೇಂದ್ರ, ಕರ್ನಾಟಕ'ವು ಮುಂಬರುವ ಜುಲೈ 5 ರಂದು 'ನಾರದ ಜಯಂತಿ'ಯನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ 2014-15ರ ಸಾಲಿನಲ್ಲಿ ನಾಡಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ತೋರಿರುವ ಪತ್ರಕರ್ತರಿಗಾಗಿ ಮಾಧ್ಯಮ ಪುರಸ್ಕಾರವನ್ನು 2 ವಿಭಾಗಗಳಲ್ಲಿ ಆಯೋಜಿಸಲಾಗಿದೆ.
1. 2014-15ರ ಸಾಲಿನಲ್ಲಿ ಸಾಮಾಜಿಕ ಪ್ರಭಾವ ಬೀರಿದ ಅತ್ಯುತ್ತಮ ಅತ್ಯುತ್ತಮ ವರದಿ (ಒಬ್ಬರಿಗೆ)
2. ಸಾಮಾಜಿಕ ಜಾಲತಾಣ ಮಾಧ್ಯಮ ಅಥವಾ ನಾಗರಿಕ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ಪ್ರಭಾವ ಬೀರಿದ ಅತ್ಯುತ್ತಮ ವರದಿ/ಪೋಸ್ಟ್ (ಒಬ್ಬರಿಗೆ)
ನಾಡಿನ ಹೆಸರಾಂತ ಪತ್ರಿಕಾಕರ್ಮಿಗಳಾದ ತಿ.ತಾ. ಶರ್ಮ, ಬೆ.ಸು.ನಾ. ಮಲ್ಯರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರಶಸ್ತಿಯು ನಗದು ಹಣ, ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಕರ್ನಾಟಕದ ಪತ್ರಿಕೋದ್ಯಮದಲ್ಲಿ ಕಳೆದ ಒಂದು ವರ್ಷದಲ್ಲಿ ಮೇಲೆ ಉಲ್ಲೇಖಿಸಿದ 2 ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ ಪತ್ರಕರ್ತರ ಹೆಸರನ್ನು ಸೂಚಿಸಲು ಈ ಮೂಲಕ ಕೋರಲಾಗಿದೆ.

ಹಿರಿಯ-ಅನುಭವೀ ಪತ್ರಕರ್ತರ ಆಯ್ಕೆ ಸಮಿತಿಯೊಂದರ ಮೂಲಕ ಹೆಸರುಗಳನ್ನು ಅಂತಿಮಗೊಳಿಸಿ, ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಜೂನ್ 25 ರ ಮುಂಚಿತವಾಗಿ ಹೆಸರುಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ.
ಸಂಯೋಜಕರು,
ರಾಜೇಶ್ ಪದ್ಮಾರ್
ವಿಶ್ವ ಸಂವಾದ ಕೇಂದ್ರ, ಕರ್ನಾಟಕ
# 106, 5ನೇ ಮುಖ್ಯರಸ್ತೆ,
ಚಾಮರಾಜಪೇಟೆ,
ಬೆಂಗಳೂರು - 560 018
ದೂ: 9880621824
[email protected]
[email protected]
ಜುಲೈ 5 ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. (ಒನ್ ಇಂಡಿಯಾ ಸುದ್ದಿ)












Click it and Unblock the Notifications