Viral Video: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳದ ನಡುವೆ ಮತ್ತೊಂದು ಹೊಸ ಸಮಸ್ಯೆ!, ಇಲ್ಲಿದೆ ವೈರಲ್ ವಿಡಿಯೋ
Bengaluru traffic jams: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಅಕ್ಟೋಬರ್ 01ರಿಂದ ಬೆಂಗಳೂರಿನಲ್ಲಿ ವರ್ಕ್ ಫ್ರಮ್ ಹೋಮ್ ಅಂತ್ಯವಾಗಿರುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ವಾಹನಗಳ ಸಂಖ್ಯೆ ಹೆಚ್ಚಳ, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಳ ಹಾಗೂ ಮೂಲಸೌಕರ್ಯ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಗೆ ವಾಹನ ಸವಾರರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರಿನಲ್ಲಿ ಪಂಚರ್ ಮಾಫಿಯಾ ಹೆಚ್ಚಾಗಿದೆ. ಇದೀಗ ವೈರಲ್ ವಿಡಿಯೋದಲ್ಲಿ ಈ ಪಂಚರ್ ಮಾಫಿಯಾದ ಕುತಂತ್ರ ಬಯಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಮೊದಲಿನಿಂದಲೂ ಪಂಚರ್ ಮಾಫಿಯಾ ಇದೆ. ಆದರೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಈ ಪಂಚರ್ ಮಾಫಿಯಾಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೆ ಪಂಚರ್ ಮಾಫಿಯಾ ಹೆಚ್ಚಾಗುತ್ತಿದ್ದು, ಇದೀಗ ವೈರಲ್ ವಿಡಿಯೋದಲ್ಲಿ ಈ ಟೆಕ್ನಿಕ್‌ನ ಡೀಟೆಲ್ಸ್ ವೈರಲ್ ಆಗುತ್ತಿದೆ.

ಬೆಂಗಳೂರು - ನೆಲಮಂಗಲ ರೋಡ್ ಭಾಗದಲ್ಲಿ ಪಂಚರ್ ಮಾಫಿಯಾ ಮತ್ತೆ ಆಕ್ಟೀವ್ ಆಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಪಂಚರ್ ಮಾಡಿ, ವಾಹನಗಳ ಮಾಲೀಕರು ಪಂಚರ್ ಹಾಕಿಸಿಕೊಳ್ಳುವುದಕ್ಕೆ ಬರುವಂತೆ ಮಾಡುವ ಪ್ಲ್ಯಾನ್ ಇದಾಗಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಈ ಪಂಚರ್ ಮಾಫಿಯಾ ಕಳೆದ ಕೆಲವು ತಿಂಗಳುಗಳ ಮುಂಚೆ ಆಕ್ಟೀವ್ ಆಗಿತ್ತು. ಈ ತಂಡವು ಮೊದಲು ರಸ್ತೆಯುದ್ದಕ್ಕೂ ಅಥವಾ ರಸ್ತೆಯ ಪ್ರಮುಖ ಭಾಗಗಳಲ್ಲಿ ವಾಹನಗಳ ಟಯರ್ ಪಂಚರ್ ಮಾಡುವ ಉದ್ದೇಶದಿಂದ ಮೊಳೆಗಳನ್ನು ಹಾಕಲಾಗುತ್ತಿದೆ.
ಇದೀಗ ಈ ವಿಷಯ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ವೈರಲ್ ವಿಡಿಯೋದಲ್ಲಿ ಬೆಂಗಳೂರಿನ ಪಂಚರ್ ಮಾಫಿಯಾ ಜಾಲ ಬಹಿರಂಗವಾಗಿದೆ. ಬೆಂಗಳೂರು - ನೆಲಮಂಗಲ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿದೆ. ಪಂಕ್ಚರ್ ಮಾಫಿಯಾದ ಕಾರಣ ಇದೀಗ ವೈರಲ್ ಆಗಿದೆ. ಈ ಮಾರ್ಗದಲ್ಲಿ ಬರೋಬ್ಬರಿ 1.5 ಕಿಲೋಗ್ರಾಂಗಳಷ್ಟು ಮೊಳೆಗಳನ್ನು ಸಂಗ್ರಹಿಸಲಾಗಿದೆ.
🚨 Beware, Bengaluru Vehicle Owners! Another Puncture Mafia Spotted on Nelamangala Road 🚨
— Karnataka Portfolio (@karnatakaportf) October 6, 2025
Motorists travelling on the Nelamangala Road are urged to stay alert. A shocking incident has come to light where nearly 1.5 kilograms of nails were collected from the road deliberately… pic.twitter.com/gE5JiUvhUA
ಕೇವಲ ವಂಚನೆಯಲ್ಲ; ಪ್ರಾಣಕ್ಕೆ ಕುತ್ತು: ಇನ್ನು ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಪಂಚರ್ ಮಾಫಿಯಾದಿಂದ ಕೇವಲ ವಾಹನಗಳ ಟಯರ್ ಪಂಚರ್ ಆಗುವುದು ಮಾತ್ರವಲ್ಲ. ಟಯರ್ ಪಂಚರ್ ಆಗುವುದರೊಂದಿಗೆ ವಾಹನ ಸವಾರರು ಅಪಘಾತಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಅಲ್ಲದೇ ವಾಹನ ಸವಾರರು ಬೇರೆ ವಾಹನಗಳಿಗೆ ಅಥವಾ ಸಾರ್ವಜನಿಕರಿಗೆ ಗುದ್ದುವ ಅಪಾಯವೂ ಇಲ್ಲದೆ ಇಲ್ಲ. ಬೆಂಗಳೂರು ಪೊಲೀಸರು ಈ ರೀತಿಯ ಪಂಚರ್ ಮಾಫಿಯಾಗೆ ಕಡಿವಾಣ ಹಾಕುವುದಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.
-
ತಾಯಿ ಮಂಗನ ಮೌನ ರೋದನೆ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕರುಣಾಜನಕ ದೃಶ್ಯ..Video Viral -
ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications