ಬೆಂಗಳೂರಿನಲ್ಲಿ ನಾರ್ಥ್ ಕಂಪನಿಯಿಂದ ಕನ್ನಡಿಗರಿಗೆ ಮೋಸ, ಅನುಭವ ಪತ್ರಕ್ಕೆ 80,000 ಡಿಮ್ಯಾಂಡ್, ವೈರಲ್ ವಿಡಿಯೋ!

ಬೆಂಗಳೂರಿನಲ್ಲಿ ಅಂದಾಜು 50 ಕನ್ನಡಿಗರಿಗೆ ಮಹಾರಾಷ್ಟ್ರ ಮೂಲದ ಕಂಪನಿಯಿಂದ ಮೋಸವಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಅನ್ಯಭಾಷಿಕರ ಹಾವಳಿ ಹೆಚ್ಚಾಗುತ್ತಿದೆ ಎನ್ನುವ ಆರೋಪದ ನಡುವೆಯೂ ಇದೀಗ ಬೆಂಗಳೂರಿಗೆ ಬಂದು ಉದ್ಯಮ ಸ್ಥಾಪಿಸಿ, ಬೆಂಗಳೂರಿನಲ್ಲಿ ಕನ್ನಡಿಗರಿಗೇ ಸಂಬಳ ಕೊಡದೆ ಮೋಸ ಮಾಡಿದ್ದಾರೆ ಎನ್ನುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿಗೆ ಬರುವ ಅನ್ಯಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಬೆಂಗಳೂರಿಗೆ ಬರುವ ಹಲವರು ಕನ್ನಡ ಕಲಿತು ಹಾಗೂ ಕನ್ನಡಿಗರೊಂದಿಗೆ ಬೆರೆತು ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವರು ಕನ್ನಡವನ್ನೂ ಕಲಿಯದೆ - ಕನ್ನಡಿಗರೊಂದಿಗೆ ಸಹಬಾಳ್ವೆ ನಡೆಸದೆ, ದಬ್ಬಾಳಿ ನಡೆಸುವ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಈ ವಿಷಯ ಗಂಭೀರವಾಗಿ ಚರ್ಚೆ ಆಗುತ್ತಿರುವಾಗಲೇ ಬೆಂಗಳೂರಿನಲ್ಲಿ ಉದ್ಯಮ ಪ್ರಾರಂಭಿಸಿ, ಅಲ್ಲಿಗೆ ಕನ್ನಡಿಗರನ್ನೇ ಕೆಲಸಕ್ಕೆ ನೇಮಕ ಮಾಡಿಕೊಂಡು ಕನ್ನಡಿಗರಿಗೇ ಕೆಲಸ ಮಾಡಿದ ಸಂಬಳ ಕೊಟ್ಟಿಲ್ಲ. ಅದೂ ಸಹ ಆರು ತಿಂಗಳುಗಳ ಅವಧಿಯ ಸಂಬಳವನ್ನು ಕೊಟ್ಟಿಲ್ಲ ಎನ್ನುವ ಅಲ್ಲದೇ ಎಕ್ಸಪೀರಿಯನ್ಸ್‌ ಲೆಟರ್ ಸಹ ಕೊಡದೆ ಸತಾಯಿಸಲಾಗುತ್ತಿದೆ ಎನ್ನುವುದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

Viral Video Bengaluru Firm s 80K Blackmail for Experience Certificate

ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಮಧ್ಯಪ್ರವೇಶ ಮಾಡಿವೆ. ಇನ್ನು ಬೆಂಗಳೂರಿನ ಈ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾದ ಕನ್ನಡಿಗರೊಬ್ಬರು ಮಾತನಾಡಿದ್ದು, ಈ ಕಂಪನಿಯಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಕೆಲಸ ಮಾಡುತ್ತಿದ್ದೆವು. ಆದರೆ ನಮಗೆ ಐದಾರು ತಿಂಗಳಾದರೂ ಸಂಬಳ ಕೊಟ್ಟಿಲ್ಲ. ಅಲ್ಲದೇ ವೃತ್ತಿ ಅನುಭವ ಪತ್ರ (Express letter & Relieving letter) ಸಹ ಕೊಡದೆ ಬೇಕೆಂದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾರ್ತಿಕ್ ವೆಂಕಟೇಶ್ ಎನ್ನುವವರು, ನೊಂದ ಕನ್ನಡಿಗರ ಪರ ಯುಕವೇ..✊💛❤️ (ಯುವ_ಕರ್ನಾಟಕ_ವೇದಿಕೆ) 50ಕ್ಕೂ ಹೆಚ್ಚು ಕನ್ನಡಿಗರಿಗೆ ಸಂಬಳವನ್ನು ಕೊಡದೆ ಏಕಾ-ಏಕಿ ಕಂಪನಿಯಿಂದ ಹೊರ ಹಾಕಿದ ಉತ್ತರ ಭಾರತ ಮೂಲದ ಬೆಂಗಳೂರಿನಲ್ಲಿರುವ ಖಾಸಗಿ ಕಂನಿಪ. ನ್ಯಾಯ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಹಲ್ಲೆಗೆ ಯತ್ನ ಎಂದು ದೂರಿದ್ದಾರೆ.

ತಮ್ಮ ಅನುಭವ ಪತ್ರ (experience letter) ನೀಡಲು 80 ಸಾವಿರ ಹಣಕ್ಕೆ ಬೇಡಿಕೆ ಇಡುವ ದುರಹಂಕಾರಿಗಳನ್ನು ನಾವು ಸಹಿಸಬೇಕೇ ಎಂದು ಪ್ರಶ್ನೆ ಮಾಡಿರುವ ಅವರು, ಇದೀಗ ನ್ಯಾಯ ಕೇಳಿಕೊಂಡು ಯುವ ಕರ್ನಾಟಕ ವೇದಿಕೆ ಬಳಿಗೆ ಬಂದ ಎಲ್ಲಾ ಕನ್ನಡಿಗ ಉದ್ಯೋಗಿಗಳಿಗೂ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ.. ✊

ಬುಧವಾರದ ಒಳಗೆ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಕೊಡಿಸಿದ್ರೆ ಶಾಂತಿ ಇಲ್ಲದಿದ್ದರೆ ಕ್ರಾಂತಿ..!✊💛❤️ ಕನ್ನಡ ಕನ್ನಡಿಗ ಕರ್ನಾಟಕಕ್ಕಾಗಿ ಸದಾ ಸಿದ್ಧ ನಿಮ್ಮ ಯುವ_ಕರ್ನಾಟಕ_ವೇದಿಕೆ ಎಂದು ಪೋಸ್ಟ್‌ ಮಾಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+