Viral: ಸಿಲಿಕಾನ್ ಸಿಟಿಯ ಟಬಿಬಿಯಾ ಹೂಗಳ ಟ್ರ್ಯಾಕ್ ಮಾಡಲು 'ಬೆಂಗಳೂರು ಬ್ಲೂಮ್' ಆ್ಯಪ್ ಹೊರತಂದ ಟೆಕ್ಕಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ-ಬಿಟಿ ಕಂಪನಿಗಳಿಗೆ ಮಾತ್ರವಲ್ಲ, ತನ್ನ ಸುಂದರವಾದ ಹವಾಮಾನ ಮತ್ತು ಹಸಿರು ಪರಿಸರಕ್ಕೂ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಅದರಲ್ಲೂ ವಸಂತ ಕಾಲ ಬಂತೆಂದರೆ ಸಾಕು, ನಗರದ ರಸ್ತೆಗಳೆಲ್ಲವೂ ಗುಲಾಬಿ ಬಣ್ಣದ ಹೂವುಗಳಿಂದ ಕಂಗೊಳಿಸುತ್ತವೆ. ಈ ಸುಂದರವಾದ 'ಟಬಿಬಿಯಾ ರೋಸಿಯಾ' (Tabebuia rosea) ಮರಗಳನ್ನು ಕಣ್ತುಂಬಿಕೊಳ್ಳಲು ಮತ್ತು ಅವುಗಳ ನಿಖರವಾದ ಸ್ಥಳವನ್ನು ಪತ್ತೆಹಚ್ಚಲು ಇದೀಗ ಟೆಕ್ಕಿಯೊಬ್ಬರು 'ಬೆಂಗಳೂರು ಬ್ಲೂಮ್' (Bengaluru Bloom) ಎಂಬ ವಿನೂತನ ಅಪ್ಲಿಕೇಶನ್ ಅನ್ನು ನಿರ್ಮಿಸಿದ್ದಾರೆ. ಈ ಆ್ಯಪ್ ಇದೀಗ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾಳವಿಕಾ ಎಂಬ ಟೆಕ್ಕಿಯೇ ಈ ಅದ್ಭುತ ಆ್ಯಪ್‌ನ ಹಿಂದಿರುವ ರೂವಾರಿ. ಮೂಲತಃ ಫೋಟೋಗ್ರಫಿ ಮತ್ತು ಪ್ರಕೃತಿಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು, ಗುಲಾಬಿ ಬಣ್ಣದ ಹೂವು ಬಿಡುವ ಮರಗಳನ್ನು ಕಂಡಾಗಲೆಲ್ಲಾ ಅವುಗಳ ಫೋಟೋಗಳನ್ನು ಕ್ಲಿಕ್ ಮಾಡುವ ಹವ್ಯಾಸ ಇಟ್ಟುಕೊಂಡಿದ್ದರು. ಈ ವೈಯಕ್ತಿಕ ಹವ್ಯಾಸವೇ ಕಾಲಕ್ರಮೇಣ ಒಂದು ಸಂಪೂರ್ಣ ಮ್ಯಾಪಿಂಗ್ ಪ್ರಾಜೆಕ್ಟ್ ಆಗಿ ಬದಲಾಗಿದೆ. ತಮ್ಮ ಈ ಹೊಸ ಆವಿಷ್ಕಾರದ ಬಗ್ಗೆ ಮಾಳವಿಕಾ ಅವರು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ಅವರು, "ನಾನು ಬೆಂಗಳೂರಿನ ಈ ಗುಲಾಬಿ ಹೂವುಗಳ ದೊಡ್ಡ ಅಭಿಮಾನಿ. ಈ ಮರಗಳನ್ನು ಕಂಡಾಗಲೆಲ್ಲಾ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದೆ. ಆ ಕುತೂಹಲವೇ ನನ್ನನ್ನು ಒಂದಷ್ಟು ಸಂಶೋಧನೆ ಮಾಡುವಂತೆ ಪ್ರೇರೇಪಿಸಿತು. ಆ ನಂತರ ಈ ಮರಗಳಿರುವ ಸ್ಥಳಗಳನ್ನು ನಕ್ಷೆಯಲ್ಲಿ (ಮ್ಯಾಪ್) ಗುರುತಿಸಲು ಪ್ರಾರಂಭಿಸಿದೆ" ಎಂದು ಸರಳವಾಗಿ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ನಕ್ಷೆಯಲ್ಲಿ ಗುಲಾಬಿ ಬಣ್ಣದ ಮಾರ್ಕರ್‌ಗಳನ್ನು (pink markers) ದಟ್ಟವಾಗಿ ಗುರುತಿಸಲಾಗಿದೆ. ಈ ಪ್ರತಿಯೊಂದು ಮಾರ್ಕರ್ ಕೂಡ ಬೆಂಗಳೂರಿನಾದ್ಯಂತ ಇರುವ ಟಬಿಬಿಯಾ ರೋಸಿಯಾ ಮರಗಳ ನಿಖರ ಸ್ಥಳಗಳನ್ನು ಪ್ರತಿನಿಧಿಸುತ್ತವೆ. ನಗರದ ಕೆಲವು ನಿರ್ದಿಷ್ಟ ಬಡಾವಣೆಗಳಲ್ಲಿ ಈ ಮರಗಳ ಸಾಂದ್ರತೆ ಹೆಚ್ಚಾಗಿದ್ದು, ಇಡೀ ನಕ್ಷೆಯು ಹೂವುಗಳಿಂದ ತುಂಬಿದ ಕ್ಯಾನ್ವಾಸ್‌ನಂತೆ (canvas) ಗೋಚರಿಸುತ್ತದೆ.
'ಪಿಂಕ್ ಟ್ರಂಪೆಟ್ ಟ್ರೀ' (pink trumpet tree) ಎಂದೇ ಜನಪ್ರಿಯವಾಗಿರುವ ಟಬಿಬಿಯಾ ರೋಸಿಯಾ, ಪ್ರತಿವರ್ಷ ಕೆಲವು ದಿನಗಳ ಮಟ್ಟಿಗೆ ಬೆಂಗಳೂರಿನ ರಸ್ತೆಗಳನ್ನು ಸುಂದರವಾಗಿ ಪರಿವರ್ತಿಸುತ್ತದೆ. ಹೂವಿನ ದಳಗಳು ಉದುರಿ ರಸ್ತೆಯ ಮೇಲೆಲ್ಲಾ ಗುಲಾಬಿ ಬಣ್ಣದ ರತ್ನಗಂಬಳಿ ಹಾಸಿದಂತೆ ಕಂಗೊಳಿಸುತ್ತವೆ. ಮಾಳವಿಕಾ ಅವರು ಮ್ಯಾಪ್ ಜೊತೆಗೆ, ಟ್ರಾಫಿಕ್ ಸಿಗ್ನಲ್‌ಗಳ ಮೇಲ್ಭಾಗದಲ್ಲಿ ಮತ್ತು ರಸ್ತೆಗಳ ಬದಿಗಳಲ್ಲಿ ಅರಳಿ ನಿಂತಿರುವ ಹೂವುಗಳ ಸುಂದರವಾದ ಛಾಯಾಚಿತ್ರಗಳನ್ನು ಸಹ ಹಂಚಿಕೊಂಡು ಪ್ರಕೃತಿ ಪ್ರಿಯರ ಗಮನ ಸೆಳೆದಿದ್ದಾರೆ.
As a big fan of the pink flower blooms in Bengaluru, I try to click pictures of these trees wherever I spot them. In that journey, I got curious and did a little research and plotted it on a map. There are around 27k tabebuia rosea trees in Bangalore currently. pic.twitter.com/OZGJbcunlS
— Malavika (@viksmals) February 23, 2026
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಗೆ
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಾಜೆಕ್ಟ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾರ್ಷಿಕ ಹೂಬಿಡುವ ಋತುವಿಗಾಗಿ ಕಾತುರದಿಂದ ಕಾಯುತ್ತಿದ್ದ ನೆಟ್ಟಿಗರು, ಈ ವಿಶಿಷ್ಟ ಆಲೋಚನೆ ಮತ್ತು ಅದರ ಅನುಷ್ಠಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಇದೆಂಥಾ ಕ್ರಿಯಾಶೀಲ ಐಡಿಯಾ! ನನಗೆ ಹೂವುಗಳು ಮತ್ತು ನಕ್ಷೆಗಳೆಂದರೆ ತುಂಬಾ ಇಷ್ಟ. ಇವೆರಡನ್ನೂ ಸಂಯೋಜಿಸಿರುವುದು ನಿಜಕ್ಕೂ ಅದ್ಭುತ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ಡ್ರೋನ್ ಶಾಟ್‌ಗಳನ್ನು (drone shots) ಪ್ಲಾನ್ ಮಾಡಲು ನಾನು ಇಂದು ಬೆಳಿಗ್ಗೆಯಿಂದ ಇದನ್ನೇ ಹುಡುಕುತ್ತಿದ್ದೆ, ಧನ್ಯವಾದಗಳು!" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಲವು ನೆಟ್ಟಿಗರು ತಾವು ಕ್ಲಿಕ್ ಮಾಡಿದ ಗುಲಾಬಿ ಹೂವುಗಳ ಚಿತ್ರಗಳನ್ನು ಹಂಚಿಕೊಂಡು ನಗರದ ಸೌಂದರ್ಯವನ್ನು ಕೊಂಡಾಡಿದ್ದಾರೆ. ಹೂಬಿಡುವ ಋತುವಿನಲ್ಲಿ ಫೋಟೋಗ್ರಫಿ ವಾಕ್, ಸೈಕ್ಲಿಂಗ್ ಮಾರ್ಗಗಳು ಯೋಜಿಸಲು ಈ ಆ್ಯಪ್ ತಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಹಲವರು ವಿವರಿಸಿದ್ದಾರೆ. ತಂತ್ರಜ್ಞಾನ, ಪ್ರಕೃತಿ ಮತ್ತು ನಗರದ ಕುತೂಹಲದ ಈ ಸುಂದರ ಸಮ್ಮಿಲನಕ್ಕೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
-
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications