ಬೆಂಗಳೂರಲ್ಲಿ ವಿನ್ಸ್, ಪ್ರಾಣ್, ಬಾಪು ವ್ಯಂಗ್ಯಚಿತ್ರ ಪ್ರದರ್ಶನ
ಬೆಂಗಳೂರು, ಅ.4: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 2014 ಅಕ್ಟೋಬರ್ 6 ರಿಂದ 18ರ ವರೆಗೆ ನಮ್ಮನ್ನು ಇತ್ತೀಚೆಗೆ ಅಗಲಿದ ಮೂವರು ಪ್ರಸಿದ್ಧ ವ್ಯಂಗ್ಯಚಿತ್ರಕಾರರ ಸ್ಮರಣಾರ್ಥ ಒಂದು ಜಂಟಿ ಪ್ರದರ್ಶನ 'ವಿನ್ಸ್, ಪ್ರಾಣ್ ಮತ್ತು ಬಾಪು ಸ್ಮರಣೆ' ಯನ್ನು ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.
ವಿಜಯ್ ನಾರಾಯಣ ಸೇಟ್ (ವಿನ್ಸ್): ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ರಾಷ್ಟ್ರೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಮುಂಬೈನ ಸರ್ ಜೆ. ಜೆ. ಸ್ಕೂಲ್ ಆಫ್ ಫೈನ್ ಆರ್ಟ್ಸ್ ಪದವಿ ಪಡೆದು ವ್ಯಂಗ್ಯಚಿತ್ರಕಾರರಾದ ಅವರು ಅನೇಕ ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರ ಸಂಗ್ರಹಾಲಯಗಳಲ್ಲಿ ಅವರ ಕೃತಿಗಳು ಸೇರ್ಪಡೆಯಾಗಿವೆ.

ಪ್ರಾಣ್ ಕುಮಾರ್ ಶರ್ಮಾ (ಪ್ರಾಣ್): ತಮ್ಮ ಜನಪ್ರಯ ಕಾಮಿಕ್ಸ್ ಗಳಾದ ಚಾಚಾ ಚೌಧುರಿ, ರಾಮನ್, ಪಿಂಕಿ, ಶ್ರೀಮತೀಜಿ ಮತ್ತು ಬಿಲ್ಲೂಗಳ ಮೂಲಕ ಅನೇಕ ಪೀಳಿಗೆಗಳನ್ನು ರಂಚಿಸಿದ್ದಾರೆ. ಲಿಮ್ಕಾ ಬುಕ್ ಆಫ್ ರೇಕಾರ್ಡ್ ನವರು ಕೊಡಮಾಡುವ ‘ವರ್ಷದ ವ್ಯಕ್ತಿ - 1995' ಪ್ರಶಸ್ತಿಯನ್ನು ಅವರು ಪಡೆದಿದ್ದಾರಲ್ಲದೇ, ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯಿಂದ 2001 ರಲ್ಲಿ ‘ಜೀವಮಾನ ಸಾಧನೆ ಪ್ರಶಸ್ತಿ' ಯನ್ನೂ ಗಳಿಸಿದ್ದಾರೆ. ಅವರ ಚಾಚಾ ಚೌಧುರಿ ಟಿವಿ ಧಾರಾವಾಹಿಯಾಗಿದೆ.

ಸತ್ತಿರಾಜು ಲಕ್ಷ್ಮೀ ನಾರಾಯಣ (ಬಾಪು): ತೆಲುಗು ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಒಂದು ಹೊಸ ಪರಂಪರೆಯನ್ನೇ ಸ್ಥಾಪಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ವಕೀಲಿ ವೃತ್ತಿಯಲ್ಲಿ ಪದವಿ ಪಡೆದು ‘ಆಂಧ್ರ ಪತ್ರಿಕಾ' ದಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ಕೆಲ ವರ್ಷ ಕೆಲಸ ಮಾಡಿದ್ದಾರೆ. ಬಾಪು ಅವರು ಒಬ್ಬ ಯಶಸ್ವೀ ಚಲನಚಿತ್ರ ನಿರ್ದೇಶಕರಾಗಿದ್ದು ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 2001 ರಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯಿಂದ ‘ಜೀವಮಾನ ಸಾಧನೆ ಪ್ರಶಸ್ತಿ' ಯನ್ನೂ ಪಡೆದಿದ್ದಾರೆ.

ಸ್ಥಳ : ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ನಂ. 1, ಮಿಡ್ ಫೋರ್ಡ್ ಹೌಸ್, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬಿಗ್ ಕಿಡ್ಸ್ ಕೆಂಪ್ ಹತ್ತಿರ, ಬೆಂಗಳೂರು - 560 001.
ದಿನ, ದಿನಾಂಕ ಮತ್ತು ಸಮಯ : ಅಕ್ಟೋಬರ್ 6 ರಿಂದ 18, 2014, ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರ ವರೆಗೆ ಭಾನುವಾರಗಳನ್ನು ಹೊರತು ಪಡಿಸಿ. (ಒನ್ಇಂಡಿಯಾ ಕನ್ನಡ)












Click it and Unblock the Notifications