Vijayalakshmi Darshan: ಪತಿ ದರ್ಶನ್‌ಗಾಗಿ ಪವರ್‌ ಫುಲ್‌ ದೇವತೆ ಮೊರೆಹೋದ ಪತ್ನಿ ವಿಜಯಲಕ್ಷ್ಮಿ-ಮಾಹಿತಿ, ವಿವರ

Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡದುಕೊಳ್ಳುತ್ತಲೇ ಇದೆ. ಇನ್ನೂ ಈ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್‌ನನ್ನು ಜಾಮೀನಿನ ಮೇಲೆ ಜೈಲಿನಿಂದ ಹೊರತರಲು ಪತ್ನಿ ವಿಜಯಲಕ್ಷ್ಮಿ ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಪವರ್‌ ಫುಲ್‌ ದೇವತೆ ಮೊರೆ ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿಕ ಕೊಲೆ ಪ್ರಕರಣದ ತನಿಖೆ ಇದೀಗ ಚುರುಕು ಪಡೆದಿದ್ದು, ಇದರ ಬೆನ್ನಲ್ಲೇ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಬಂಡೆ ಮಾಂಕಾಳಮ್ಮ ದೇವರೆ ಮೊರೆ ಹೋಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನೂ ಕಾನೂನು ತಜ್ಞರ ಪ್ರಕಾರ, ದರ್ಶನ್‌ ಸದ್ಯ ಬಿಡುಗುಡೆಯಂತೂ ದೂರದ ಮಾತು ಅಂತಿದ್ದು, ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.

Vijayalakshmi special pooja at Bande Mahakali temple for Husband darshan

ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶಾಸಕರೊಬ್ಬರ ಕಾರು ಚಾಲಕ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದಾನೆ. ಮತ್ತೊಂದೆಡೆ ಜೈಲು ಸೇರಿರುವ ಪತಿಗಾಗಿ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಬಂಡೆ ಮಹಾಕಾಳಿ ದೇಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಹಿಂದೆಯೂ ಸಹ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗುವ 2 ದಿನದ ಮುಂಚೆಯೇ ದರ್ಶನ್ ಸಹ ಇದೇ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ನೀಡಿದ್ದು, ಶಕ್ತಿ ದೇವತೆಯ ಮುಂದೆ ದೃಷ್ಟಿ ತೆಗೆಸಿ ತಡೆ ಒಡೆಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಇದೀಗ ಪತಿ ದರ್ಶನ್ ಆರೋಪ ಮುಕ್ತರಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಅದೇ ದೇವಸ್ಥಾನಕ್ಕೆ ಭೇಡಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ, "ದರ್ಶನ್ ಅವರಿಗೆ ಸದ್ಯ ಶನಿ ಕಾಟ ಇದೆ. ಶ್ರವಣ ನಕ್ಷತ್ರ, ಮಕರ ರಾಶಿಗೆ ರಾಹು-ಶನಿಯ ಒಂದೇ ಬಾರಿಗೆ ಕಾಟ ಕೊಡುತ್ತಿದ್ದಾರೆ. 2025ರ ನವೆಂಬರ್ ನಂತರ ಅವರಿಗೆ ರಾಜಯೋಗ ಲಭಿಸಲಿದೆ. ಫೆಬ್ರವರಿಯಲ್ಲೇ ದರ್ಶನ್ ಅವರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೆ. ಗಂಡಾಂತರಯಿದೆ ಎಂದು ಹೇಳಿದ್ದೆ ಅಂತಾ ಹೇಳಿದ್ದಾರೆ," ಅಂತಾ ನ್ಯೂಸ್‌ ಫಸ್ಟ್‌ ವರದಿ ಮಾಡಿದೆ.

"ದರ್ಶನ್ ಅವರದ್ದು ಶ್ರವಣ ನಕ್ಷತ್ರ, ಮಕರ ರಾಶಿ ಆಗಿದೆ. ಪ್ರತಿ ವಾರ ಎಳ್ಳಿನ ದೀಪ ಹಚ್ಚುವುದಕ್ಕೆ ಅವರಿಗೆ ಹೇಳಿದ್ದೆ. ಆದರೆ ಅವರು 2 ವಾರ ಮಾತ್ರ ಮಾಡಿ, ಬಳಿ ಸುಮ್ಮನಾಗಿದ್ದಾರೆ. ಇದು ಸರಿಯಲ್ಲ. ಹುಷಾರಾಗಿ ಇರು, ಈ ಸಮಯದಲ್ಲಿ ನಿನ್ನ ಹೆಸರಿಗೆ ಚ್ಯುತಿ ಬರುವ, ಆಸ್ಪತ್ರೆ ಸೇರುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಫೆಬ್ರವರಿಯಲ್ಲಿ ಹೇಳಿದ್ದೆ. ಎಚ್ಚರಿಕೆಯಿಂದ ಇರಬೇಕು ಅಂಥ ತಿಳಿಸಿದ್ದೆ. ಇದೇ ರೀತಿ ರಾಜ ವಿಕ್ರಮಾದಿತ್ಯನಿಗೆ ಸಮಸ್ಯೆ ಕಾಡಿತ್ತು. ಈಗ ದರ್ಶನ್​ಗೂ ಅಂತಹದ್ದೆ ಪರಿಸ್ಥಿತಿ ಬಂದಿದೆ," ಎಂದು ಎಂದು ಹೇಳಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+