Vijayalakshmi Darshan: ಪತ್ನಿ ವಿಜಯಲಕ್ಷ್ಮಿ ಹೇಳಿದ ಆ ಮಾತು ಕೇಳಿ ಶಾಕ್ ಆದ್ರಾ ನಟ ದರ್ಶನ್?
Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ & ಪಟಲಾಂ ಗ್ಯಾಂಗ್ ಜೈಲು ಸೇರಿದೆ. ಇನ್ನು ನಟ ದರ್ಶನ್‌ನ್ನು ನೋಡಲು ಇಂದು (ಜುಲೈ 15) ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಈ ವೇಳೆ ಪತ್ನಿ ಹೇಳಿದ ಆ ಒಂದು ಸುದ್ದಿ ಕೇಳಿ ದರ್ಶನ್ ಶಾಕ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ಸೋಮವಾರ (ಜುಲೈ 15) ದರ್ಶನ್‌ನನ್ನು ನೋಡಲು ಅವರ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ತೂಗೂದೀಪ ಹಾಗೂ ಅಳಿಯ ಚಂದನ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಇನ್ನು ಈ ವೇಳೆ ಜೈಲಿನಲ್ಲಿ ಪತಿ, ನಟ ದರ್ಶನ್‌ನನ್ನು ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ ದರ್ಶನ್‌ಗೆ ಶಾಕಿಂಗ್ ಮಾಹಿತಿಯೊಂದನ್ನು ನೀಡಿದ್ದಾರೆ.

ಈಗಾಗಲೇ ನಟ ದರ್ಶನ್‌ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಇನ್ನಿಲ್ಲದ ಪ್ರಯತ್ನಗಳನ್ನೂ ಪಟ್ಟಿದ್ದರು. ತಮ್ಮ ವಕೀಲರ ಜೊತೆ ಚರ್ಚಿಸಿ ದರ್ಶನ್‌ಗೆ ಜಾಮೀನು ಕೊಡಿಸಲು ಪ್ರಯತ್ನಿಸಿದ್ದು, ಸದ್ಯ ಜಾಮೀನು ಸಿಗುವುದು ಅಸಾಧ್ಯ, ಈ ಹಂತದಲ್ಲಿ ಜಾಮೀನು ಸಿಗುವುದಿಲ್ಲ ಎಂದು ವಿಜಯಲಕ್ಷ್ಮಿ ಪತಿ, ನಟ ದರ್ಶನ್‌ಗೆ ಹೇಳಿದ್ದು, ಈ ವಿಚಾರ ಕೇಳಿದ ದರ್ಶನ್ ಸಹ ಶಾಕ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದರ್ಶನ್‌ಗಿರುವ ಖಾಯಿಲೆ ಯಾವುದು?: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನು ಜೈಲಿನ ಊಟ ಸೇವಿಸಿ ದರ್ಶನ್ ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ಹೇಳಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಾಗಾದರೆ ಇದರ ಗುಣಲಕ್ಷಣಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅತಿಸಾರ ಹಿನ್ನೆಲೆ ನಟ ದರ್ಶನ್ ಮನೆಯ ಆಹಾರ, ಹಾಸಿಗೆ ಮತ್ತು ಪುಸ್ತಕಗಳನ್ನು ಕೇಳಿದ್ದಾರೆ ಎಂದು ದರ್ಶನ್ ಪರ ವಕೀಲರು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಅರ್ಜಿ ಪರಿಶೀಲಿಸಿದ ನಂತರ, ನಿಯಮವು ಎಲ್ಲರಿಗೂ ಸಾಮಾನ್ಯವಾಗಿದೆ. ಮತ್ತು ಈ ಪ್ರಕರಣವನ್ನು ಸಹ ಅದೇ ರೀತಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ಪೀಠವು ಜೈಲು ಅಧಿಕಾರಿಗಳು, ಕಾಮಾಕ್ಷಿಪಾಳ್ಯ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಮತ್ತು ಅಪರಾಧಿಗಳಿಗೆ ವಿಭಿನ್ನ ಮಾರ್ಗಸೂಚಿಗಳಿವೆ ಮತ್ತು ಅದರಂತೆಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಜೈಲಿನಲ್ಲಿ ಮನೆ ಆಹಾರವನ್ನು ಅನುಮತಿಸಲಾಗಿದೆ ಎಂದು ಸಲ್ಲಿಸುವ ಅಗತ್ಯ ಇಲ್ಲ ಎಂದು ಪೀಠವು ಸೂಚಿಸಿತು. ಮತ್ತು ಈ ಬಗ್ಗೆ ಇತರ ನ್ಯಾಯಾಲಯಗಳಿಂದ ಆದೇಶಗಳನ್ನು ಪ್ರಸ್ತುತಪಡಿಸಲು ವಕೀಲರಿಗೆ ಸೂಚಿಸಿತು. ಕಾನೂನಿನಲ್ಲಿ ಅನುಮತಿ ಇದ್ದರೆ, ಮನೆಯ ಆಹಾರವನ್ನು ಅನುಮತಿಸಲಾಗುವುದು. ಇಲ್ಲದಿದ್ದರೆ ಅದನ್ನು ಅನುಮತಿಸಲಾಗುವುದಿಲ್ಲ. ಎಲ್ಲಾರಿಗೂ ಒಂದೇ ಕಾನೂನು ಆಗಿದ್ದು, ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗುವುದು ಹೇಳಿದೆ.
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ಜೈಲಿನಲ್ಲಿ ನೀಡಿದ ಆಹಾರ ಕಕ್ಷಿದಾರರಿಗೆ ಸರಿಯಾಗಿ ಜೀರ್ಣವಾಗುತ್ತಿಲ್ಲ. ಆದ್ದರಿಂದ ದರ್ಶನ್ ಅವರು ಅತಿಸಾರದಿಂದ ಬಳಲುತ್ತಿದ್ದಾರೆ. ಆತನನ್ನು ಪರೀಕ್ಷಿಸಿದ ಜೈಲು ಆರೋಗ್ಯಾಧಿಕಾರಿ ಆತನಿಗೆ ಸೋಂಕು ಅತಿಸಾರ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅವರ ತೂಕದಲ್ಲಿ ಇಳಿಕೆಯಾಗಿದೆ. ಜೈಲಿನಲ್ಲಿ ನೀಡಲಾದ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ. ಮನೆ ಆಹಾರಕ್ಕಾಗಿ ಈಗಾಗಲೇ ಜೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅದನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
"ದರ್ಶನ್ ಅವರ ತೂಕದಲ್ಲಿ ಭಾರೀ ಇಳಿಕೆಯಾಗಿದೆ. ಇದು ಹೀಗೆ ಮುಂದುವರೆದರೆ, ಅವರು ಆರೋಗ್ಯದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾರಾಗೃಹಗಳ ಕಾಯಿದೆ 1963 ಸೆಕ್ಷನ್ 30ರ ಪ್ರಕಾರ, ಖೈದಿಗಳು ಆಹಾರ, ಬಟ್ಟೆ ಮತ್ತು ಹಾಸಿಗೆಗಳನ್ನು ಹೊರಗಿನಿಂದ ಪಡೆಯಲು ಅನುಮತಿಸಲಾಗಿದೆ" ಎಂದು ವಕೀಲರು ವಾದ ವಾದ ಮಂಡಿಸಿದ್ದಾರೆ.
"ಮನೆಯಿಂದಲೇ ಊಟ, ಹಾಸಿಗೆ, ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಅನುಮತಿಸಿದರೆ, ಸರ್ಕಾರದ ವೆಚ್ಚವೂ ಕಡಿಮೆಯಾಗುತ್ತದೆ. ಆದರೆ ದರ್ಶನ್‌ಗೆ ಮನೆ ಊಟಕ್ಕೆ ಅವಕಾಶ ನೀಡದಿರುವುದು ಅಮಾನವೀಯ ಮತ್ತು ಭಾರತೀಯ ಸಂವಿಧಾನದ 21ನೇ ವಿಧಿಯ ಉಲ್ಲಂಘನೆ" ಎಂದು ದರ್ಶನ್ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ.












Click it and Unblock the Notifications