ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆದ ವಿಯೆಟ್ನಾಂ
ಬೆಂಗಳೂರು, ಆಗಸ್ಟ್ 22: ಭಾರತಕ್ಕೆ ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ರಾಯಭಾರಿಯಾದ ಮಿ. ಫಾಮ್ಸನ್ಚಾವ್, ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಪ್ರಪ್ರಥಮ ರಾಯಭಾರಿ ಕಚೇರಿ ತೆರೆದಿರುವ ಬಗ್ಗೆ ಘೋಷಿಸಿದ್ದಾರೆ.
ಕಳೆದ ತಿಂಗಳು ರಾಯಭಾರಿ ಬೆಂಗಳೂರಿಗೆ ವಿಯೆಟ್ನಾಂನ ಗೌರವಾನ್ವಿತ ರಾಯಭಾರಿಯಾಗಿ ಮಿ. ಎನ್ಎ ಶ್ರೀನಿವಾಸಮೂರ್ತಿಯವರನ್ನು ನೇಮಿಸಿರುವ ಬಗ್ಗೆ ಘೋಷಿಸಿದ್ದರು. ಮಿ. ಮೂರ್ತಿ ಭಾರತದ ಯಾವುದೇ ರಾಜ್ಯದಲ್ಲಿ ಮೊದಲನೆಯವರಾಗಿ ಹಾಗೂ ವಿಶ್ವದಲ್ಲಿ 19 ನೆಯವರಾಗಿ ಪ್ರಪ್ರಥಮ ಗೌರವಾನ್ವಿತ ರಾಯಭಾರಿಯಾಗಿದ್ದಾರೆ.
ಮಿ. ಫಾಮ್ಸನ್ಚಾವ್ ಹೀಗೆ ಹೇಳಿದ್ದಾರೆ, "ಅಂದಾಜು 2 ಬಿಲಿಯನ್ ಎಸ್ಡಾಲರ್ನೊಂದಿಗೆ, ಪ್ರಸ್ತುತ ಭಾರತ ವಿಯೆಟ್ನಾಂನ 26 ನೇ ಹೂಡಿಕೆ ಪಾಲುದಾರನಾಗಿದ್ದು, ಮತ್ತಷ್ಟು ಸುಧಾರಿಸಲುನಾವು ಎದುರು ನೋಡುತ್ತಿದ್ದೇವೆ. ಫಾರ್ಮಾಸುಟಿಕಲ್ಸ್, ಗೇಮಿಂಗ್, ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಮತ್ತು ತಂತ್ರಜ್ಞಾನ ವಲಯ ಸೇರಿದಂತೆ ವಿಯೆಟ್ನಾಂನಲ್ಲಿಅನೇಕ ಆಕರ್ಷಕ ವಲಯಗಳಿದ್ದು, ಇದು ಮತ್ತಷ್ಟು ಬೆಳೆಯಲು ವಿಯೆಟ್ನಾಂನೊಂದಿಗೆ ಕೈಜೋಡಿಸಲು ಬೆಂಗಳೂರು ಹೂಡಿಕೆ ಮಾಡುವ ಮತ್ತು ಸಹಕಾರ ನೀಡುವ ನಗರವಾಗಿದೆ".

ಸ್ಥಿರಸರ್ಕಾರ, ದೃಢ ಅರ್ಹತೆಯ ಯುವಜನತೆ, ಸ್ಪರ್ಧಾತ್ಮಕ ತೆರಿಗೆ ಪ್ರಯೋಜನಗಳು, ಸದೃಢವಾದ ಮೂಲಭೂತ ಸೌಕರ್ಯದಂತಹ ಅಂಶಗಳು ಭಾರತದಲ್ಲಿ ವಿಯೆಟ್ನಾಂ ಹೂಡಿಕೆದಾರರಿಗೆ ಸೂಕ್ತಸ್ಥಳವಾಗಿದೆ.
ವಿಯೆಟ್ನಾಂನ ಬೆಂಗಳೂರು ರಾಯಭಾರಿಯಾದ, ಮಿ. ಮೂರ್ತಿ ಹೀಗೆ ಹೇಳಿದ್ದಾರೆ, "ವಿಯೆಟ್ನಾಂ ಆಗ್ನೇಯ ಏಷ್ಯಾ ರಾಷ್ಟ್ರಗಳ (ಎ ಎಸ್ ಇ ಎ ಎನ್) ಸಹಕಾರದೊಂದಿಗೆ ಭಾರತದ ನಾಲ್ಕನೆಯ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ. ಇದರ ಬೆಳೆಯುತ್ತಿರುವ ತಯಾರಿಕಾ ತಳಹದಿ ಮತ್ತು ದೃಢವಾದ ಸ್ವದೇಶೀ ಬೇಡಿಕೆ ಕೋವಿಡ್ 19 ನಿಂದ ಜಾಗತಿಕಮಟ್ಟದಲ್ಲಿಆರ್ಥಿಕಹೊಡೆತದ ಹೊರತಾಗಿಯೂ, 2020 ರಲ್ಲಿ ಶೇಕಡಾ2.9 ರ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ.
ರಾಜ್ಯದ ಹಿತಾಸಕ್ತಿಗಳು ಮತ್ತು ಬೆಂಗಳೂರಿನಲ್ಲಿರುವ ವಿಯೆಟ್ನಾಂ ನಾಗರಿಕರ ಕಾನೂನು ಬದ್ಧಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಾಯಭಾರ ಕಚೇರಿಯ ಮೂಲಕ ರಕ್ಷಿಸುವುದು ಮಿ. ಮೂರ್ತಿಯವರ ಪಾತ್ರವಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ವಿಯೆಟ್ನಾಂ ಹೂಡಿಕೆಗಳು, ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದೂ ಸೇರಿದೆ.
ಕಳೆದ ಎರಡು ದಿನಗಳಲ್ಲಿ ರಾಯಭಾರಿ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತುಹೆಚ್ಚುವರಿ ಮುಖ್ಯಕಾರ್ಯದರ್ಶಿಯಾದ, ಡಾ. ರಜನೀಶ್ ಗೋಯಲ್, ಐಎಎಸ್ ನವರನ್ನುಭೇಟಿಯಾಗಿದ್ದು, ಬೆಂಗಳೂರಿನ ತಂತ್ರಜ್ಞಾನ ಸಮ್ಮೇಳನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಅವರು ಭಾರತದ ಅತಿದೊಡ್ಡ ಜೈವಿಕ ಫಾರ್ಮಾಸ್ಯುಟಿಕಲ್ ಕಂಪನಿಯಾದ ಬಯೋಕಾನ್‌ನ ಶ್ರೀಮತಿ ಕಿರಣ ಮಜುಂದಾರ್ ಶಾ ಹಾಗೂ ಟಿಎಸ್ವಿ ವೆಂಚರ್ಸ್‌ನ್ನುಸಹ ಭೇಟಿಯಾಗಿದ್ದಾರೆ.
ರಾಯಭಾರಿ ವಿಯೆಟ್ನಾಂ ಹೂಡಿಕೆದಾರರಿಗೆ ದೊಡ್ಡ ಮಾರುಕಟ್ಟೆಗಳನ್ನುನೀಡಲು, ವಿಶೇಷವಾಗಿ ರಫ್ತುಗಳಿಗೆ ತಯಾರಿಕಾ ಘಟಕ ಆರಂಭಿಸಲು ಬಯಸುವವರಿಗೆ ನೆರವಾಗಲು 14 ಪ್ಲಸ್ಎಫ್ಟಿ ಎ (ಮುಕ್ತವ್ಯಾಪಾರಒಪ್ಪಂದ) ಯೊಂದಿಗೆ ವಿಯೆಟ್ನಾಂ ಮುಕ್ತಮಾರುಕಟ್ಟೆ ನಿಯಮದ ಬಗ್ಗೆಮಾತನಾಡಿದ್ದಾರೆ.
"ತಯಾರಿಕೆಯಲ್ಲಿ ತಮ್ಮ ಹೆಜ್ಜೆಗುರುತನ್ನು ಮೂಡಿಸಲು ಅನೇಕ ಕಾರ್ಪೊರೇಷನ್‌ಗಳು ವೈವಿಧ್ಯತೆ ಎದುರು ನೋಡುತ್ತಿದ್ದು, ವಿಯೆಟ್ನಾಂ ಆಗ್ನೇಯ ಏಷ್ಯಾದಲ್ಲಿಆಕರ್ಷಕ ಹೂಡಿಕೆ ಬದ್ಧತೆಗಳಿಗಾಗಿ ಹೆಚ್ಚುನಿರೀಕ್ಷಿಸುತ್ತಿದೆ" ಎಂದು ಮಿ. ಮೂರ್ತಿ ಹೇಳಿದ್ದಾರೆ.
5 ದಶಕಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ, ಬೆಂಗಳೂರಿನ ನಿವಾಸಿಯಾದ, ಉದ್ಯಮಿ ಎನ್ಎ ಶ್ರೀನಿವಾಸಮೂರ್ತಿ, ಪ್ರತಿಷ್ಠಿತ ಅಗರಬತ್ತಿ ತಯಾರಕರಾದ ಎನ್ಕೆ ಸುಬ್ಬಯ್ಯ ಶೆಟ್ಟಿ ಅಂಡ್ ಸನ್ಸ್‌ನ ಸಿಇಓ ಆಗಿದ್ದಾರೆ. ಇದರೊಂದಿಗೆ ಇವರು ಮೇನಕಾ ಥಿಯೇಟರ್ ಚಲನಚಿತ್ರ ಪ್ರದರ್ಶಕರ ಪಾಲುದಾರರು, ಮೈಸೂರು ವೆಜಿಟೆಬಲ್ಆಯಿಲ್ ಪ್ರಾಡೆಕ್ಟ್‌ನ ನಿರ್ದೇಶಕರು ಹಾಗೂಚಂದ್ರಕಿರಣ್ ಸೆಕ್ಯೂರಿಟೀಸ್ ಪ್ರೈ ಲಿ ನ ನಿರ್ದೇಶಕರು, ಸ್ಟಾಕ್ಪ್ ಮತ್ಪು ಶೇರುಗಳ ಡೀಲರ್ಸ್ ಆಗಿದ್ದಾರೆ.
"ವಿಯೆಟ್ನಾಂ ಸ್ಟಾರ್ಟಪ್‌ಗಳಿಗೆ ಜೈವಿಕವ್ಯವಸ್ಥೆ ಹೊಂದಿದ್ದು, ಹೂಡಿಕೆದಾರರು ದೃಢವಾದ ದೃಷ್ಟಿಕೋನದೊಂದಿಗೆ ಈ ಚಿಕ್ಕಕಂಪನಿಗಳಲ್ಲಿ ಹೂಡಿಕೆ ಮಾಡಬಹುದಾಗಿದೆ."ರಾಯಭಾರಕಚೇರಿ ಆರ್ಥಿಕ ರಾಜತಾಂತ್ರಿಕತೆಯೆಡೆಗೆ ಉದ್ದಿಮೆ-ಕೇಂದ್ರಿತ ವಿಧಾನ ಹೊಂದಿದ್ದು, ಹೂಡಿಕೆದಾರ ಸಮುದಾಯಕ್ಕೆಎಲ್ಲಾ ವಿಧದ ಬೆಂಬಲ ನೀಡಲು ಕಾತರರಾಗಿದ್ದೇವೆ" ಎಂದು ರಾಯಭಾರಿಗಳು ಹೇಳಿದ್ದಾರೆ.
ವಿಯೆಟ್ನಾಂ ಭಾರತದೊಂದಿಗೆ ತನ್ನ ಸಂಬಂಧವನ್ನುಇನ್ನೂಎತ್ತರದ ಮಟ್ಟಕ್ಕೆ ಕೊಂಡೊಯ್ಯಲು ಆಸಕ್ತವಾಗಿದೆ. ಮಾನ್ಯ ರಾಯಭಾರಿಗಳ ನೇಮಕ ಅತ್ಯಂತ ಕಠಿಣಪ್ರಕ್ರಿಯೆಯಾಗಿದ್ದು, ಅದು ಸುಲಭವಾಗಿರಲಿಲ್ಲ. ಇದಕ್ಕಾಗಿ ವಿಯೆಟ್ನಾಂನಲ್ಲಿಅನೇಕ ವಿಭಾಗಗಳ ಮೂಲಕಪರಿಶೀಲಿಸಲಾಗುತ್ತದೆ. ಮಾನ್ಯ ರಾಯಭಾರಿಗಳನ್ನು ನಮ್ಮ ವಿದೇಶ ವ್ಯವಹಾರಗಳ ಖಾತೆ ಸಚಿವರು 3 ವರ್ಷಗಳ (ಮೂರು) ಅವಧಿಗೆ ನೇಮಿಸಿದ್ದಾರೆ.
Recommended Video
ವಿಯೆಟ್ನಾಂ ವಿಶ್ವದಲ್ಲಿಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿಒಂದಾಗಿದ್ದು, ಇದು ಬಹುನಿರೀಕ್ಷಿತ ದೇಶವಾಗಿದೆ" ಎಂದು ಮಿ. ಮೂರ್ತಿಹೇಳಿದ್ದಾರೆ.
-
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ












Click it and Unblock the Notifications