ರಿಚ್ಮಂಡ್ ರಸ್ತೆ ಆರ್ ಟಿಒ ಜತೆ 'ರಿಚ್' ಯುವತಿ ರಚ್ಚೆ
ಬೆಂಗಳೂರು, ಜು.12: ಹೊರ ರಾಜ್ಯದ ವಾಹನಗಳು ತೆರಿಗೆ ಕಟ್ಟದೆ ನಗರದಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶುಕ್ರವಾರ ರಿಚ್ಮಂಡ್ ರಸ್ತೆಯಲ್ಲಿ ಕಾರ್ಯಾಚರಣೆ ವೇಳೆ ಉತ್ತರ ಭಾರತ ಮೂಲದ ಯುವತಿಯೊಬ್ಬರು ಆರ್‌ಟಿಓ ಇನ್ಸ್‌ಪೆಕ್ಟರ್ ಜತೆ ವಾಗ್ವಾದ ಮಾಡಿ ಅಧಿಕಾರಿ ನಿಂತಿದ್ದರೂ ಲೆಕ್ಕಿಸದೆ ಕಾರು ಚಲಾಯಿಸಲು ಯತ್ನಿಸಿದ ಘಟನೆ ಜರುಗಿದೆ.
ಮಧ್ಯಪ್ರದೇಶದ ಸರ್ಕಾರಿ ಇಲಾಖೆಯೊಂದರ ಉನ್ನತ ಅಧಿಕಾರಿ ಸೊಸೆ ಎನ್ನಲಾದ ಯುವತಿ, ಮಧ್ಯಪ್ರದೇಶ ನೋಂದಣಿ(MP-09-CL-886)ಯ ಕಾರನ್ನುರಿಚ್ಮಂಡ್ ರಸ್ತೆಯಲ್ಲಿ ನಿಲ್ಲಿಸಿದ್ದರು.
ತಪಾಸಣೆ ನಡೆಸುತ್ತಿದ್ದ ಆರ್‌ಟಿಓ ಸಿಬ್ಬಂದಿ, ಕಾರು ತಡೆದು ದಾಖಲೆಗಳ ಪರಿಶೀಲನೆ ನಡೆಸಬೇಕು ಎಂದಿದ್ದಾರೆ. ಅದರೆ, ನನ್ನ ಕಾರಿನ ದಾಖಲೆ ಕೇಳಲು ನೀವ್ಯಾರು? ನಾನು ಕೊಡುವುದಿಲ್ಲ ಎಂದು ಹೇಳಿ ಕಾರಿನಲ್ಲಿ ಕುಳಿತ ಯುವತಿ ಕಾರಿನ ಎದುರಿಗಿದ್ದ ಅಧಿಕಾರಿಯನ್ನು ಲೆಕ್ಕಿಸದೆ ಕಾರು ಚಲಾಯಿಸಲು ಯತ್ನಿಸಿದ್ದಾರೆ.
ಕರ್ನಾಟಕ ರಾಜ್ಯ ಮೋಟಾರು ವಾಹನ ಹಾಗೂ ತೆರಿಗೆ ಕಾಯ್ದೆ(ತಿದ್ದುಪಡಿ) 2010ರ ಅನ್ವಯ ಹೊರ ರಾಜ್ಯದ ನೋಂದಣಿಯುಳ್ಳ ವಾಹನಗಳು ಕರ್ನಾಟಕದಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದರೆ ವಾಹನದ ಮಾಲೀಕರು ಜೀವಿತಾವಧಿ ತೆರಿಗೆ ಕಟ್ಟಬೇಕಾಗುತ್ತದೆ. 30 ದಿನದೊಳಗೆ ಸಂಚಾರ ಕಂಡು ಬಂದರೆ ಜೀವಿತಾವಧಿ ತೆರಿಗೆ ಕಟ್ಟಬೇಕಿಲ್ಲ, ಮೂಲ ರಾಜ್ಯದ NOC ಹಾಗೂ ನೋಂದಣಿ ಶುಲ್ಕ ಪಾವತಿಸಿದರೆ ಸಾಕು.

ಕೀ ಎಸೆದು, ಕೋಪಗೊಂಡು ತೆರಳಿದ ಯುವತಿ
ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಹಿರಿಯ ಅಧಿಕಾರಿ ಕರಿಯಪ್ಪ ಎಂಬುವರು ಕಾರಿನ ಕೀ ಕೇಳಿ ಕೇಳಿದ್ದಾರೆ. ಕೀ ಎಸೆದು, ಕೋಪಗೊಂಡು ಕಾರಿನಿಂದ ಇಳಿದು ಹೊರ ನಡೆದ ಯುವತಿ ಮತ್ತೆ ವಾಪಸ್ ಬಂದು ಕರಿಯಪ್ಪ ಅವರ ಹೆಸರು ಏನು ಎಂದು ಕೇಳಿ ಅವರ ಫೋಟೊ ತೆಗೆದುಕೊಂಡು, ಕಾರನ್ನು ತೆಗೆದುಕೊಳ್ಳುವುದು ಹೇಗೆ ಎನ್ನುವುದು ಗೊತ್ತು, ನಿಮ್ಮ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿ ತೆರಳುತ್ತಾರೆ.

ಇದು ತೆರಿಗೆ ವಂಚನೆ ತಡೆ ಕಾರ್ಯಾಚರಣೆ
ಹೊರ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡು ಬಂದು ಬೆಂಗಳೂರಿನಲ್ಲಿ ಕಾರು ಬಳಸುವವರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ, ಇವರು ಕರ್ನಾಟಕದ ಆರ್ ಟಿಒ ಕಾಯ್ದೆಗಳನ್ನು ಉಲ್ಲಂಘಿಸಿದ್ದಲ್ಲದೆ ತೆರಿಗೆ ಕಟ್ಟುತ್ತಿಲ್ಲ. ಕರ್ನಾಟಕ ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ತೆರಿಗೆ ವಂಚನೆ ತಡೆಗಟ್ಟಲು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.ಕಳೆದ ಮೂರು ತಿಂಗಳಲ್ಲಿ ಸುಮಾರು 10 ಕೋಟಿ ರು ದಂಡ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿ ಕರಿಯಪ್ಪ ಹೇಳಿದ್ದಾರೆ.

ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಟಿವಿ 9 ಕೆಮೆರಾಕ್ಕೆ ಸಿಕ್ಕ ಚಿತ್ರದಲ್ಲಿ ಅಧಿಕಾರಿ ನಿಂತಿದ್ದರೂ ಲೆಕ್ಕಿಸದೆ ಕಾರು ಚಲಾಯಿಸಲು ಯತ್ನಿಸುತ್ತಿರುವುದನ್ನು ಕಾಣಬಹುದು.
ಈ ಸಂಬಂಧ ಆರ್‌ಟಿಓ ಅಧಿಕಾರಿಗಳು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವತಿ ಪತಿ ಶಾಂತಿನಗರ ನಿವಾಸಿ ಉದ್ಯಮಿ ದೇವೇಶ್ ಎಂಬುವರು ಅಶೋಕನಗರ ಠಾಣೆಗೆ ಆಗಮಿಸಿ ತೆರಿಗೆ ಪಾವತಿಸಿ ಕಾರು ಬಿಡಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ ಎಂದು ಸಾರಿಗೆ ಇನ್ಸ್‌ಪೆಕ್ಚರ್ ಕರಿಯಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಅರ್ಧಗಂಟೆಗೂ ಅಧಿಕ ಕಾಲ ನಡೆದ ರಂಪಾಟ
ರಾಜ್ಯದ ವಿಳಾಸಕ್ಕೆ ಬದಲಿಸಿಕೊಳ್ಳದ ಹೊರ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಾರಿಗೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಪಡಿಸಿದ್ದಲ್ಲದೆ, ಅವಾಜ್ ಹಾಕಿದ ಯುವತಿ ರಂಪಾಟದ ವಿಡಿಯೋ ಇಲ್ಲಿದೆ.

ಆರ್ ಟಿಒ ನಿಯಮ, ಪರದೇಶಿಗಳ ಅಳಲು
ಕಳೆದ ಅಕ್ಟೋಬರ್ ನಲ್ಲಿ ನಡೆದ ಸಾರಿಗೆ ಇಲಾಖೆ ಸಮಿತಿ(ಟಿಡಿಸಿ) ಸಭೆಯಲ್ಲಿ ಈ ನಿರ್ಣಯಕ್ಕೆ ವ್ಯತಿರಿಕ್ತ ಅಭಿಪ್ರಾಯ ಬಂದಿತ್ತು. ಹೊರ ರಾಜ್ಯದ ನೋಂದಣಿಯುಳ್ಳ ವಾಹನ 90 ಗಳಿಗೂ ಕಡಿಮೆ ಅವಧಿ ಸಂಚರಿಸಿದ್ದರೆ ವಾಹನ ಜಪ್ತಿ ಮಾಡುವ ಅಧಿಕಾರ ಆರ್ ಟಿಒ ಗಳಿಗೆ ಇಲ್ಲ.
ವಾಹನ ನೋಂದಣಿಯಾಗಿ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಾಗಿದ್ದರೆ ಹೊಸ ರಾಜ್ಯದಲ್ಲಿ ಪೂರ್ತಿ ತೆರಿಗೆ ಕಟ್ಟಿ(ಒಮ್ಮೆ ಮಾತ್ರ) ನಿರಾಳವಾಗಿ ಸಂಚರಿಸಬಹುದು. ಮೂಲ ರಾಜ್ಯದಿಂದ ರೀಫಂಡ್ ಕೂಡಾ ಪಡೆಯಬಹುದಾಗಿದೆ.












Click it and Unblock the Notifications