ಪಾರ್ವತಮ್ಮ-ಚಿತ್ರರಂಗದ ತಾಯಿ, ಇನ್ನೂ ಬದುಕಬೇಕಿತ್ತು: ಲೀಲಾವತಿ
ಪಾರ್ವತಮ್ಮ ರಾಜ್ ಕುಮಾರ್ ಅವರು ನಮ್ಮ ಚಿತ್ರರಂಗದ ತಾಯಿಯಾಗಿದ್ದರು. ನಮ್ಮೆಲ್ಲರ ಶಕ್ತಿಯಾಗಿದ್ದರು. ಅವರು ಇನ್ನಷ್ಟು ಕಾಲ ಬದುಕಬೇಕಿತ್ತು.ಅವರಿಗೆ ಸಿಂಗಪುರದಲ್ಲಿ ಚಿಕಿತ್ಸೆ ಕೊಡಿಸಬೇಕಿತ್ತು: ಲೀಲಾವತಿ
ಬೆಂಗಳೂರು, ಮೇ 31: ಪಾರ್ವತಮ್ಮ ರಾಜ್ ಕುಮಾರ್ ಅವರು ನಮ್ಮ ಚಿತ್ರರಂಗದ ತಾಯಿಯಾಗಿದ್ದರು. ನಮ್ಮೆಲ್ಲರ ಶಕ್ತಿಯಾಗಿದ್ದರು. ಅವರು ಇನ್ನಷ್ಟು ಕಾಲ ಬದುಕಬೇಕಿತ್ತು. ಅವರಿಗೆ ಸಿಂಗಪುರದಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕಿತ್ತು ಎಂದು ಹಿರಿಯ ನಟಿ ಲೀಲಾವತಿ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.
ಪಾರ್ವತಮ್ಮ ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯವಿತ್ತು. ಸರ್ಕಾರದ ಭಂಡಾರದಲ್ಲಿ ಹಣದ ಕೊರತೆ ಇತ್ತಾ? ಪಾರ್ವತಮ್ಮ ಅವರನ್ನು ಸಿಂಗಾಪುರಕ್ಕೆ ಕಳುಹಿಸಬಹುದಿತ್ತಲ್ಲಾ? ಮಕ್ಕಳು ಯಾಕೆ ಅವರನ್ನು ವಿದೇಶಕ್ಕೆ ಕೊಂಡೊಯ್ಯಲಿಲ್ಲ? ಅವರು ಚಿತ್ರರಂಗದಲ್ಲಿ ಇನ್ನೂ ಉಳಿಯಬೇಕಿತ್ತು ಎಂದು ಲೀಲಾವತಿ ಅವರು ಪ್ರಶ್ನಿಸಿದ್ದಾರೆ.

ಸದಾಶಿವನಗರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಮನೆಯಲ್ಲಿ ಪಾರ್ವತಮ್ಮ ಅವರ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದ ನಂತರ ಲೀಲಾವತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾರ್ವತಮ್ಮ ಅವರು ಒಂದು ದೊಡ್ಡ ಹಿಮಾಲಯ ಪರ್ವತ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಎದುರಿಗೆ ಯಾರೇ ಸಿಕ್ಕರೂ ಅವರ ಕುಟುಂಬದವರ ಆರೋಗ್ಯ ವಿಚಾರಿಸುತ್ತಿದ್ದರು. ಅವರ ಅಗತ್ಯ ಚಿತ್ರರಂಗಕ್ಕೆ ತುಂಬಾ ಇತ್ತು ಎಂದರು
ಅವರು ಚಿತ್ರರಂಗದ ಶ್ರೇಷ್ಠ ಹೆಣ್ಣುಮಗಳಾಗಿದ್ದರು. ನಾನು ಏನೇ ಮಾತನಾಡಿದರೂ ಹೊರ ಜಗತ್ತಿಗೆ ಸುಳ್ಳು ಅನಿಸುತ್ತದೆ. ಆದರೆ, ಸತ್ಯ ಏನು ಎಂಬುದು ನನ್ನ ಅಂತರಾತ್ಮಕ್ಕೆ ಗೊತ್ತು ಎಂದು ಲೀಲಾವತಿ ಅವರು ಕಣ್ಣೀರಿಟ್ಟರು.












Click it and Unblock the Notifications