Bengaluru: ಬೆಂಗಳೂರಿನ ಈ ರಸ್ತೆಗಿಳಿಯುವ ಮುನ್ನ ಗಮನಿಸಿ... ಸೆಂಟ್ ಜಾನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಪಕ್ಕಾ!
ಬೆಂಗಳೂರು ಅಕ್ಟೋಬರ್ 11: ಅಕ್ಟೋಬರ್ 11 ಶುಕ್ರವಾರ ನವರಾತ್ರಿಯ ಒಂಬತ್ತು ದಿನಗಳ ಪೂಜೆ ಕೊನೆಗೊಳ್ಳುತ್ತದೆ. ಈ ದಿನ ಆಯುಧ ಪೂಜೆ ಮಾಡಲಾಗುತ್ತದೆ. ನಾಳೆ ಅಂದರೆ ಅಕ್ಟೋಬರ್ 12ರಂದು ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇದಾದ ಬಳಿಕ ದುರ್ಗಾ ದೇವಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹಾಗಾದರೆ ನಗರದ ಯಾವೆಲ್ಲಾ ರಸ್ತೆಗಳು ಬಂದ್ ಆಗಲಿವೆ. ಯಾವ ರಸ್ತೆಗಳಿಗೆ ಹೋಗುವುದನ್ನು ತಪ್ಪಿಸಬೇಕು ಅನ್ನೋದನ್ನು ತಿಳಿದಿರುವುದು ಮುಖ್ಯ.
ಇಂದು ನವರಾತ್ರಿಯ ಒಂಬತ್ತು ದಿನದ ಪೂಜೆ ಮುಗಿಸಿ ಭಕ್ತರು ಆಯುಧ ಪೂಜೆಗಳನ್ನು ಮಾಡುತ್ತಾರೆ. ವಿಜಯದಶಮಿ ಅಥವಾ ದಸರಾ ಹಬ್ಬದ ನಂತರ (ಭಾನುವಾರ) ದುರ್ಗಾ ದೇವಿ ಮೂರ್ತಿ ಮೆರವಣಿಗೆ ಮಾಡುವ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಮೆರವಣಿಗೆ ವೇಳೆ ನೂರಾರು ಜನ ಜಮಾಯಿಸುತ್ತಾರೆ. ಹಾಡು ನೃತ್ಯದ ಮೂಲಕ ದೇವಿಯ ಮೂರ್ತಿ ಮೆರವಣಿಗೆ ಮಾಡಲಾಗುತ್ತದೆ. ಹೀಗಾಗಿ ಜನ ದಟ್ಟಣೆಯಿಂದಾಗಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಲಿದೆ.

ಹೀಗಾಗಿ ಭಾನುವಾರ (ಅಕ್ಟೋಬರ್ 13) ಮಧ್ಯಾಹ್ನ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಗಾ ದೇವಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹಾಗಾದರೆ ಈ ಮಾರ್ಗದಲ್ಲಿ ಯಾವೆಲ್ಲಾ ರಸ್ತೆಗಳು ಬಂದ್ ಆಗಲಿವೆ. ಯಾವ ಪರ್ಯಾಯ ಮಾರ್ಗಗಳು ಇವೆ ಹಾಗೂ ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ತಿಳಿಯೋಣ.
ಕೆಲ ಸ್ಥಳಗಳಲ್ಲಿ ಪಾರ್ಕಿಂಗ್ ಗೆ ನಿರ್ಬಂಧಿಸಲಾಗಿದೆ. ಶನಿವಾರದಿಂದ ಭಾನುವಾರ ರಾತ್ರಿಯವರಿಗೆ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ಕೆನ್ಸಿಂಗ್‌ಟನ್ ರಸ್ತೆ-ಅಣ್ಣಸ್ವಾಮಿ ಮೊದಲಿಯರ್ ರಸ್ತೆ-ಟ್ಯಾಂಕ್ ರಸ್ತೆಗಳಲ್ಲಿ ಪಾರ್ಕಿಂಗ್ ಅನ್ನು ನಿಷೇಧಿಸಲಾಗಿದೆ.

ತಿಳುವಳ್ಳವರ್ ಪ್ರತಿ ಜಂಕ್ಷನ್-ಅಣ್ಣಸ್ವಾಮಿ ಮೊದಲಿಯರ್ ರಸ್ತೆ ಕಡೆಯಿಂದ ಆರ್.ಬಿ.ಐ ಜಂಕ್ಷನ್ ಮುಖಾಂತರ ಹಲಸೂರು ಲೇಕ್ ಕಡೆಗೆ ಅಣ್ಣಸ್ವಾಮಿ ಮೊದಲಿಯರ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಕೇವಲ ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಇನ್ನೂ ಕೆನ್ಸಿಂಗ್‌ಟನ್ ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್‌ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಕೇವಲ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ.
ಹಾಗಾದರೆ ಪರ್ಯಾಯ ಮಾರ್ಗ ಯಾವುದು? ಮೇಲಿನ ಮಾರ್ಗಗಳ ಬದಲಿಗೆ ಯಾವ ಮಾರ್ಗವಾಗಿ ಸಂಚಾರ ಮಾಡಬಹುದು ಅನ್ನೋದಾದರೆ.. ತಿರುವಳ್ಳವರ್ ಪ್ರೇಮ್ ಜಂಕ್ಷನ್- ಅಣ್ಣಸ್ವಾಮಿ ಮೊದಲಿಯರ್ ರಸ್ತೆ ಕಡೆಯಿಂದ ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಗಂಗಾಧರ್ ಶೆಟ್ಟಿ ರಸ್ತೆಯ ಮುಖಾಂತರ ಆರ್‌ಬಿಎನ್‌ಎಮ್‌ಎಸ್ ಹತ್ತಿರ ಎಡತಿರುವು ಪಡೆದು ಡಿಕನ್ಸನ್ ರಸ್ತೆಯ ಮುಖಾಂತರ ಸೆಂಟ್ ಜಾನ್ಸ್ ರಸ್ತೆ ತಲುಪಿ ಸೆಂಟ್ ಜಾನ್ಸ್ ರಸ್ತೆ- ಶ್ರೀ ಸರ್ಕಲ್-ಲಾವಣ್ಯ ಥಿಯೇಟರ್ ಜಂಕ್ಷನ್-ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಮಿಲ್ಲರ್ಸ್ ರಸ್ತೆ ಕಡೆಗೆ ಅಥವಾ ಹಲಸೂರು ಕೆರೆ ಕಡೆಗೆ ಹೋಗಬಹುದು.
ಇನ್ನೂ ಕ್ಲಿಂಗ್‌ಟನ್ ರಸ್ತೆ ಕಡೆಯಿಂದ ಎಂಇಜಿ ಮೂಲಕ- ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಕೆನ್ಸಿಂಗ್‌ಟನ್ನಿಂದ್ ಗುರುದ್ವಾರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗಂಗಾಧರ ಚೆಟ್ಟಿ ರಸ್ತೆ-ಡಿಕನ್ಸನ್ ರಸ್ತೆಯಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ರಸ್ತೆ-ಶ್ರೀ ಸರ್ಕಲ್ ಲಾವಣ್ಯ ಥಿಯೇಟರ್ ಜಂಕ್ಷನ್- ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ-ಪ್ರಾಮಿನೇಡ್ ರಸ್ತೆ-ಮೀಲರ್ ರಸ್ತೆ ಕಡೆಗೆ ಹೋಗಬಹುದಾಗಿದೆ.












Click it and Unblock the Notifications