ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ

|
Google Oneindia Kannada News

ಬೆಂಗಳೂರು, ಜನವರಿ 23 : ಉದ್ಯಾನ ನಗರಿ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ತೋಟಗಾರಿಕಾ ಇಲಾಖೆ ಎರಡು ವರ್ಷಗಳ ಹಿಂದೆಯೇ ವಾಹನ ಸಂಚಾರ ಬಂದ್ ಮಾಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ತೋಟಗಾರಿಕಾ ಇಲಾಖೆ ಸಚಿವ ವಿ. ಸೋಮಣ್ಣ ಇಲಾಖೆಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಸದಸ್ಯರ ಜೊತೆ ಬುಧವಾರ ಮುಂಜಾನೆ ಕಬ್ಬನ್ ಪಾರ್ಕ್‌ನಲ್ಲಿ ವಾಯು ವಿಹಾರ ನಡೆಸಿದರು. ಉದ್ಯಾನದಲ್ಲಿ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ?ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ?

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, " ಕಬ್ಬನ್ ಪಾರ್ಕ್ ರಕ್ಷಣೆ ಹಾಗೂ ಶುದ್ಧಗಾಳಿ ಉಳಿಸಿಕೊಳ್ಳಲು ಪಾರ್ಕ್‌ನೊಳಗೆ ಹಂತ-ಹಂತವಾಗಿ ವಾಹನಗಳ ಸಂಚಾರವನ್ನು ಕಡಿತ ಮಾಡಬೇಕು ಎಂಬ ಚಿಂತನೆ ನಡೆಸಿದೆ" ಎಂದು ಹೇಳಿದರು.

ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರುಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರು

ಕಬ್ಬನ್ ಪಾರ್ಕ್ ಸುತ್ತ-ಮುತ್ತ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದ್ದರಿಂದ ಹಲವು ಮಾರ್ಗಗಳನ್ನು ಬದಲಾವಣೆ ಮಾಡಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗುತ್ತದೆಯೇ? ಕಾದು ನೋಡಬೇಕು.

ಕಬ್ಬನ್ ಪಾರ್ಕಿನಲ್ಲಿ ಅಪಘಾತ, ಪಾರಿವಾಳ ಸಾವುಕಬ್ಬನ್ ಪಾರ್ಕಿನಲ್ಲಿ ಅಪಘಾತ, ಪಾರಿವಾಳ ಸಾವು

ವಾಹನ ಸಂಚಾರಕ್ಕೆ ಅವಕಾಶವಿದೆ

ವಾಹನ ಸಂಚಾರಕ್ಕೆ ಅವಕಾಶವಿದೆ

ಪ್ರಸ್ತುತ ಕಬ್ಬನ್ ಪಾರ್ಕ್‌ನಲ್ಲಿ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯ ತನಕ ವಾಹನ ಸಂಚಾರಕ್ಕೆ ಅವಕಾಶವಿದೆ. "ಬೆಳೆಯುತ್ತಿರುವ ನಗರ, ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಅಧಿಕಾರಿಗಳು ವಾಹನ ಸಂಚಾರವನ್ನು ಬಂದ್ ಮಾಡುವ ಕುರಿತು ಯೋಚಿಸಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಈ ಕುರಿತು ಚರ್ಚೆ ನಡೆಸಲಾಗುತ್ತದೆ" ಎಂದು ವಿ. ಸೋಮಣ್ಣ ಹೇಳಿದರು.

ವಾಹನ ಬಂದ್ ಸಾಧ್ಯವೇ?

ವಾಹನ ಬಂದ್ ಸಾಧ್ಯವೇ?

"ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಲೋಕಾಯುಕ್ತ, ಸಚಿವಾಲಯಗಳು ಇರುವುದರಿಂದ ನಗರದ ಹೃದಯ ಭಾಗದಲ್ಲಿರುವ ಪಾರ್ಕ್‌ನೊಳಗೆ ವಾಹನ ಸಂಚಾರ ಬಂದ್ ಮಾಡಲು ಸಾಧ್ಯವೇ? ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕು" ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಏಳು ಪ್ರವೇಶ ದ್ವಾರಗಳು

ಏಳು ಪ್ರವೇಶ ದ್ವಾರಗಳು

ಕಬ್ಬನ್ ಪಾರ್ಕ್ ವಾಹನ ಸವಾರರ ಪಾಲಿನ ಶಾರ್ಟ್ ಕಟ್ ಆಗಿದೆ. ಹಡ್ಸನ್ ಸರ್ಕಲ್ ಗೇಟ್, ಸಿದ್ದಲಿಂಗಯ್ಯ ಗೇಟ್, ಬಾಲಭವನ ಗೇಟ್, ಪ್ರೆಸ್ ಕ್ಲಬ್ ಗೇಟ್, ಎಂ. ಎಸ್. ಬಿಲ್ಡಿಂಗ್ ಗೇಟ್, ಕೆ. ಆರ್. ಸರ್ಕಲ್ ಗೇಟ್, ಹೈಕೋರ್ಟ್ ಗೇಟ್ ಮೂಲಕ ನಿತ್ಯಾ ಲಕ್ಷಾಂತರ ವಾಹನಗಳು ಕಬ್ಬನ್ ಉದ್ಯಾನಕ್ಕೆ ಬರುತ್ತವೆ.

ವಾಯುವಿಹಾರಿಗಳು

ವಾಯುವಿಹಾರಿಗಳು

ಹೈಕೋರ್ಟ್, ಮ್ಯೂಸಿಯಂ, ಬಾಲಭವನ, ಗ್ರಂಥಾಲಯ, ಮತ್ಸ್ಯಾಲಯ ಹೀಗೆ ವಿವಿಧ ಕಾರಣಗಳಿಗಾಗಿ ನೂರಾರು ಜನರು ಪ್ರತಿನಿತ್ಯ ಆಗಮಿಸುತ್ತಾರೆ. ಉದ್ಯಾನದೊಳಗೆ ಬೆಳಗ್ಗೆ ನೂರಾರು ಜನರು ವಾಯುವಿಹಾರ ನಡೆಸುತ್ತಾರೆ. ವಾಹನ ಸಂಚಾರದ ಹೊಗೆ, ಸಂಚಾರ ದಟ್ಟಣೆಯಿಂದ ಪಾರ್ಕ್ ಪರಿಸರ ಹಾಳಾಗಬಾರದು ಎಂಬ ಕಾಳಜಿಯೂ ಇದೆ.

English summary
Horticulture department minister V.Somanna said we will consider to ban of vehicle movement inside the Cubbon Park, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X