ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಹಬ್ಬಗಳು ಸಮೀಪಿಸುತ್ತಿದಂತೆ ತರಕಾರಿಗಳ ಬೆಲೆಗಳಲ್ಲಿ ಹಚ್ಚಳ!

|
Google Oneindia Kannada News

ಬೆಂಗಳೂರು, ಜುಲೈ. 25: ಸಾಮಾನ್ಯವಾಗಿ ಈ ವರ್ಷದ ಜುಲೈ ಮತ್ತು ಆಗಸ್ಟ್ (ಆಷಾಢ ಮಾಸ) ನಡುವಿನ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಗಳು ಕುಸಿತವನ್ನು ಕಂಡರೂ, ಕಳೆದ 10 ದಿನಗಳಿಂದ ಬೆಲೆಗಳು ಏರಿಕೆ ಕಂಡು ಬರುತ್ತಿವೆ.

ಈ ವರ್ಷದ ಆರಂಭದಲ್ಲಿ ಸುರಿದ ಮಳೆಯಿಂದಾಗಿ ಮಾರುಕಟ್ಟೆಗೆ ತರಕಾರಿಗಳು ಹೇರಳವಾಗಿ ಬಂದವು. ಆದರೆ, ಈಗ ಬಂದಿರುವ ಮುಂಗಾರು ಕೆಲವು ಪ್ರದೇಶಗಳಲ್ಲಿ ಬೆಳೆಗಳಿಗೆ ಅಡ್ಡಿಯಾಗಿದೆ. ಇತ್ತೀಚಿಗೆ ಬಿದ್ದ ಮಳೆಯು ಬೆಳೆ ನಷ್ಟಕ್ಕೆ ಕಾರಣವಾಯಿತು. ತರಕಾರಿಗಳ ಪೂರೈಕೆಯಲ್ಲೂ ಕುಸಿತವಾಗಿದೆ. ಹೀಗಾಗಿ ಬೆಲೆಗಳು ಅಧಿಕಗೊಳ್ಳುತ್ತಿವೆ. ಮುಂಬರುವ ಹಬ್ಬ ಮತ್ತು ಮದುವೆ ಸೀಸನ್ (ಜುಲೈ 29 ರಿಂದ ಪ್ರಾರಂಭವಾಗುವ ಶ್ರಾವಣ ಮಾಸ) ವೇಳೆಗೆ ಮಾತ್ರ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಮಾರುಕಟ್ಟೆ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೀನ್ಸ್ ಯಾವಾಗಲೂ ಸಗಟು ಬೆಲೆಯಲ್ಲಿ 70 ರುಪಾಯಿ ಇತ್ತು. ಈಗ ಮಾರುಕಟ್ಟೆಗಳಲ್ಲಿ ಪ್ರತಿ ಕಿಲೋಗ್ರಾಂಗೆ ಸುಮಾರು 85 ರುಪಾಯಿಯೊಂದಿಗೆ ಅಧಿಕ ಬೆಲೆಯ ತರಕಾರಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ಕೆಲವು ದಿನಗಳಲ್ಲಿ ಕ್ಯಾಪ್ಸಿಕಂ ಬೆಲೆಗಳು ಸಾಕಷ್ಟು ಏರಿಳಿತಗಳನ್ನು ಕಂಡಿವೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಸರಾಸರಿ 80ರಿಂದ ಮತ್ತು 90 ರುಪಾಯಿಗಳ ನಡುವೆ ಇದೆ.

ಕೆಲವು ದಿನಗಳ ಹಿಂದೆ ಕ್ಯಾಪ್ಸಿಕಂ ಬೆಲೆ ಪ್ರತಿ ಕಿಲೋಗೆ ಸುಮಾರು 100 ರುಪಾಯಿ ತಲುಪಿತ್ತು. ನಂತರ ಅದು ಮತ್ತೆ ಬೀಳಲು ಪ್ರಾರಂಭಿಸಿತು. ಪ್ರಸ್ತುತ 80ರಿಂದ 85 ರುಪಾಯಿಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ. ಕಳೆದ ಕೆಲವು ವಾರಗಳಲ್ಲಿ ತರಕಾರಿ ಬೆಲೆಗಳಲ್ಲಿ ಬೆಲೆ ತೀವ್ರವಾಗಿ ಹೆಚ್ಚಾಗುತ್ತಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕರೊಬ್ಬರು ತಿಳಿಸಿದರು.

ಎಲೆಕೋಸು ಮತ್ತು ಕುಂಬಳಕಾಯಿಯಂತಹ ಸಾಮಾನ್ಯವಾಗಿ ಅಗ್ಗವಾಗಿರುವ ತರಕಾರಿಗಳು ಸಹ ತೀವ್ರ ಏರಿಕೆ ಕಂಡಿವೆ. ಮೊದಲು ಕಿಲೋಗೆ 15 ಕಿಲೋಗೆ ಇದ್ದದುದ್ದು, ಈಗ 40 ರು. ನಷ್ಟು ಏರಿಕೆ ಕಂಡು ಬಂದಿದೆ. ಹಂಗಾಮಿನಲ್ಲಿ ಸಾಮಾನ್ಯವಾಗಿ ಕುಂಬಳಕಾಯಿ ಬೆಲೆ ಕೆಜಿಗೆ ₹10 ದಾಟುವುದಿಲ್ಲ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

 ಹಬ್ಬದಲ್ಲಿ ತರಕಾರಿಗಳಿಗೆ ಬೇಡಿಕೆ ಹೆಚ್ಚು

ಹಬ್ಬದಲ್ಲಿ ತರಕಾರಿಗಳಿಗೆ ಬೇಡಿಕೆ ಹೆಚ್ಚು

ಮುಂಬರುವ ವಾರಗಳಲ್ಲಿ ಮಾನ್ಸೂನ್ ವೇಗವನ್ನು ಪಡೆಯುವುದರಿಂದ ನಾವು ಬೆಲೆಗಳಲ್ಲಿ ಹೆಚ್ಚಳವಾಗುವುದನ್ನು ಕಾಣಬಹುದು. ಶ್ರಾವಣ ಮಾಸವೂ ಶೀಘ್ರದಲ್ಲೇ ಆರಂಭವಾಗಲಿದ್ದು, ಹಬ್ಬ ಹರಿದಿನಗಳು ಬರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ತರಕಾರಿ ವ್ಯಾಪಾರಿಗಳ ಸಂಘದ ಶ್ರೀಧರ್. ಮತ್ತೊಬ್ಬ ವ್ಯಾಪಾರಿ ಮಂಜುನಾಥ್ ಕೂಡ ಈಗ ಬರುವ ವರಮಹಾಲಕ್ಷ್ಮೀ ಹಬ್ಬದ ನಂತರ ಮದುವೆಯ ಸೀಸನ್ ಕೂಡ ಪ್ರಾರಂಭವಾಗುತ್ತದೆ. ಹೀಗಾಗಿ ತರಕಾರಿಗಳು ಖಂಡಿತವಾಗಿಯೂ ದುಬಾರಿಯಾಗುತ್ತವೆ ಎಂದು ಹೇಳಿದರು. ಹಾಸನ ಜಿಲ್ಲೆಯ (ರಾಜ್ಯದಲ್ಲಿ ಬೆಳೆಯುವ ಪ್ರಮುಖ ಉತ್ಪಾದಕ ಜಿಲ್ಲೆ) ಆಲೂಗೆಡ್ಡೆ ಬೆಳೆಯುವ ಪ್ರದೇಶಗಳ ಮೇಲೂ ಮಳೆ ಪರಿಣಾಮ ಬೀರುತ್ತದೆ.

 ಆಲೂಗಡ್ಡೆ ಚೀಲಕ್ಕೆ 800ರಿಂದ 1,000 ರುಪಾಯಿ

ಆಲೂಗಡ್ಡೆ ಚೀಲಕ್ಕೆ 800ರಿಂದ 1,000 ರುಪಾಯಿ

ತರಕಾರಿಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಇನ್ನೂ ಇದೆ. ಇತರ ತರಕಾರಿ ಬೆಲೆಗಳು ಸ್ವಲ್ಪ ಏರಿಳಿತ ಕಂಡಿವೆ. ಆದರೆ ಆಲೂಗಡ್ಡೆ ಮತ್ತು ಈರುಳ್ಳಿ ಬೆಲೆ ಮಳೆ ಹಾನಿಯ ಹೊರತಾಗಿಯೂ ಸ್ಥಿರವಾಗಿದೆ ಎಂದು ಯಶವಂತಪುರ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಬಿ.ಎಲ್. ಶಂಕರಪ್ಪ ಹೇಳಿದ್ದಾರೆ. 50 ಕಿಲೋ ತೂಕದ ಆಲೂಗಡ್ಡೆ ಚೀಲಕ್ಕೆ 800ರಿಂದ 1,000 ರುಪಾಯಿ ಬೆಲೆ ಇದ್ದರೆ, ಈರುಳ್ಳಿ ಚೀಲಕ್ಕೆ 700ರಿಂದ 800 ರುಪಾಯಿ ಇದೆ. ಹೀಗಾಗಿ ಈ ಬಾರಿ ಹಬ್ಬದ ಸೀಸನಲ್ಲಿ ತರಕಾರಿಗಳು ದುಬಾರಿಯಾಗಲಿದೆ ಎಂದು ಹಲವು ದಿನಗಳಿಂದ ನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರು ಬೇಸರಗೊಂಡಿದ್ದಾರೆ.

 ಕ್ಯಾಪ್ಸಿಕಂ ಕೆಜಿಗೆ 90 ರುಪಾಯಿ ಎಂದಾಗ ಹಿಂದೇಟು

ಕ್ಯಾಪ್ಸಿಕಂ ಕೆಜಿಗೆ 90 ರುಪಾಯಿ ಎಂದಾಗ ಹಿಂದೇಟು

ನಾನು ಒಂದು ಕೆಜಿ ಬದನೆಕಾಯಿಗೆ 50 ರುಪಾಯಿ ಪಾವತಿಸಿ ಖರೀದಿಸಿದ್ದೇನೆ, ಕ್ಯಾಪ್ಸಿಕಂ ಕೆಜಿಗೆ 90 ರುಪಾಯಿ ಎಂದು ಕೇಳಿದ ನಂತರ ನಾನು ಅದನ್ನು ಖರೀದಿಸಲಿಲ್ಲ. ನಾಮ್ಮ ಮನೆಗೆ ಸಾಮಾನ್ಯವಾಗಿ ಹಬ್ಬಗಳಿಗೆ ಅತಿಥಿಗಳು ಬರುತ್ತಾರೆ. ಈಗ ತರಕಾರಿ ಬೆಲೆಗಳು ಮತ್ತಷ್ಟು ಏರಿಕೆಯಾದರೆ ನಾವು ನಮ್ಮ ಬಜೆಟ್ ರೀತಿಯಲ್ಲಿ ಹಬ್ಬ ಆಚರಿಸಲು ಪ್ರಾರಂಭಿಸುತ್ತೇವೆ ಎಂದು ಉತ್ತರ ಬೆಂಗಳೂರಿನ ನಿವಾಸಿ ರಾಜೇಂದ್ರ ಆರ್. ಹೇಳಿದರು.

 ಪ್ರತಿ ಕೆ.ಜಿ.ಗೆ 4 ರಿಂದ 6 ರುಪಾಯಿ ವ್ಯತ್ಯಾಸ

ಪ್ರತಿ ಕೆ.ಜಿ.ಗೆ 4 ರಿಂದ 6 ರುಪಾಯಿ ವ್ಯತ್ಯಾಸ

ಪ್ರತಿ ಕೆಜಿಗೆ 120 ರುಪಾಯಿ ಇದ್ದ ಟೊಮೊಟೊ ಬೆಲೆ ಮಾರುಕಟ್ಟೆಗೆ ಅತಿಯಾದ ಪೂರೈಕೆಯಿಂದಾಗಿ ಮತ್ತೆ ಕುಸಿದಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 4 ರಿಂದ 6 ರೂಪಾಯಿ ವ್ಯತ್ಯಾಸದ ನಡುವೆ ಮಾರಾಟ ದರವಿದ್ದರೆ, ಹಾಪ್‌ಕಾಮ್ಸ್‌ನಲ್ಲಿ ಅತ್ಯಧಿಕ ಗುಣಮಟ್ಟದ ಟೊಮೆಟೊ ಕೆ.ಜಿಗೆ 25 ರುಪಾಯಿಗೆ ಮಾರಾಟವಾಗುತ್ತಿದೆ. ತರಕಾರಿ ಬೆಲೆಗಳು ಎಷ್ಟು ಬೇಗನೆ ಏರುತ್ತದೆ ಎಂಬುದನ್ನು ತೋರಿಸಲು ಇದು ಸಾಕ್ಷಿಯಾಗಿದೆ. ಎಲ್ಲರೂ ಅವರವರ ಹೊಲದಲ್ಲಿ ಟೊಮೆಟೊ ಬಿತ್ತನೆ ಮಾಡುತ್ತಿರುವುದರಿಂದ ನಗರದಲ್ಲಿ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಕೆ.ಆರ್‌. ಮಾರುಕಟ್ಟೆಯ ಶ್ರೀಧರ್‌ ಹೇಳಿದರು. ಕೋಲಾರದಲ್ಲಿ ಕಡಿಮೆ ಬೆಲೆಯಿಂದಾಗಿ ರೈತರು ಟೊಮೆಟೊವನ್ನು ರಸ್ತೆಗೆ ಸುರಿದಿದ್ದಾರೆ ಎಂದು ಈ ವಾರದ ಆರಂಭದಲ್ಲಿ ವರದಿಯಾಗಿದೆ.

English summary
Although prices of vegetables in the market usually fall between July and August (Ashadha maasa) this year, prices have been on the rise for the past 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X