ಬೆಂಗಳೂರಿನಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಗಮನ ಸೆಳೆದ ವೀರಪ್ಪನ್ ಮಗಳು
ಬೆಂಗಳೂರು, ಏಪ್ರಿಲ್, 23: ಭಾನುವಾರ (ಏಪ್ರಿಲ್ 23) ಕಾಕ್ಸ್‌ಟೌನ್‌ನಲ್ಲಿ ಭಾರತೀನಗರ ಒಕ್ಕಲಿಗರ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ದರೋಡೆಕೋರ ವೀರಪ್ಪನ್ ಪುತ್ರಿ ಹಾಗೂ ಚಿತ್ರನಟಿ ವಿಜಯಲಕ್ಷ್ಮಿ 300 ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿ ಗಮನ ಸೆಳೆದರು.
ಪತಿ ಶಬರೀಶ್ ಅವರೊಂದಿಗೆ, ವಕೀಲಿ ವೃತ್ತಿಯಲ್ಲಿರುವ ವಿಜಯಲಕ್ಷ್ಮಿ ಅವರು, ಜುಲೈ 2000ನೇ ಇಸವಿಯಲ್ಲಿ ವೀರಪ್ಪನ್ ಅಪಹರಿಸಿ 100 ದಿನಗಳ ನಂತರ, ಕನ್ನಡ ಚಿತ್ರರಂಗದ ಐಕಾನ್ ಡಾ.ರಾಜ್‌ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಮನ ಸೆಳೆದಿದ್ದರು.

ಇದೇ ವೇಳೆ ಒಕ್ಕಲಿಗ ಸಂಘದ ಅಧ್ಯಕ್ಷ ಎನ್.ರವಿ ಮಾತನಾಡಿ, ವಿಜಯಲಕ್ಷ್ಮಿ ಅವರ ಭೇಟಿ ಸಂಪೂರ್ಣವಾಗಿ ವಿದ್ಯಾರ್ಥಿಗಳ ಸಹಾಯಕ್ಕಾಗಿಯೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.
ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ವಿಜಯಲಕ್ಷ್ಮಿ
ದಂತಚೋರ ವೀರಪ್ಪನ್ ಮಗಳು ವಿಜಯಲಕ್ಷ್ಮೀ ರಾಜಕೀಯದಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗಷ್ಟೇ ಈಕೆ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. "ಮಾವೀರನ್ ಪಿಳ್ಳೈ" ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಮುಂದಾಗಿದ್ದಾರೆ.
ಕಾಡುಗಳ್ಳ ವೀರಪ್ಪನ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಒಂದಾನೊಂದು ಕಾಲದಲ್ಲಿ ಇಡೀ ದೇಶವನ್ನೇ ನಡುಗಿಸಿದ ಹೆಸರು ಇದು. ಇದೇ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ಇದೀಗ ಸಿನಿಮಾ ರಂಗಕ್ಕೆ ದಾಪುಗಾಲಿಡಲು ಸಜ್ಜಾಗಿದ್ದಾರೆ. "ಮಾವೀರನ್ ಪಿಳ್ಳೈ" ಎಂಬ ಚಿತ್ರದಲ್ಲಿ ಈಕೆ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇತ್ತೀಚೆಗೆ ಸಿನಿಮಾದ ಹಾಡುಗಳು ಕೂಡ ಬಿಡುಗಡೆ ಆಗಿದ್ದವು.
ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆ ಆಗಿರುವ ವಿಜಯಲಕ್ಷ್ಮೀ ರಾಜಕೀಯ ರಂಗದಿಂದ ಸಿನಿಮಾರಂಗದಲ್ಲಿ ಮಿಂಚಲು ನಿರ್ಧಾರ ಮಾಡಿದ್ದಾರೆ. ಚೆನ್ನೈನ ಪ್ರಸಾದ್ ಲ್ಯಾಬ್ನಲ್ಲಿ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ನಡೆದಿತ್ತು.
ಈ ಕಾರ್ಯಕ್ರಮದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್ ಸುರೇಶ್, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.ಆರ್. ರಾಜ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಸಿನಿಮಾ ನಟನೆಯ ಬಗ್ಗೆ ಮಾತನಾಡಿದ್ದ ವಿಜಯಲಕ್ಷ್ಮೀ "ನನಗೆ ಮೊದಲಿನಿಂದಲೂ ಸಿನಿಮಾಗಳಲ್ಲಿ ನಟಿಸಬೇಕೆನ್ನುವ ಆಸೆ ಇತ್ತು. ಆದರೆ ಅದಕ್ಕೆ ಈಗ ಅವಕಾಶ ಸಿಕ್ಕಿದೆ. ಕುಡಿತದ ಪರಿಣಾಮದ ಮೇಲೆ ಬೆಳಕು ಚೆಲ್ಲುವ ಕಥೆ ಇದಾಗಿದೆ. ಪ್ರತಿ ಮನೆಯಲ್ಲೂ ಗಂಡುಮಕ್ಕಳ ಕುಡಿತದ ಕಾರಣದಿಂದ ಹೆಣ್ಣುಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಂತಹ ಮಹಿಳೆಯರ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಪಾತ್ರ ಇದಾಗಿದೆ. ಆದ್ದರಿಂದ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ" ಎಂದು ಹೇಳಿದ್ದರು.
ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ್ದೇನೆ ಎಂದು ನಿರ್ಮಾಪಕ ರಾಜ ಅವರು ಹೇಳಿದ್ದರು. ಇನ್ನು ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಪೇರರಸು ಸಿನಿಮಾ ಎಂದರೆ ಅದರಲ್ಲಿ ಯಾರು ನಟಿಸುತ್ತಾರೆ, ಯಾರು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬುದು ಮುಖ್ಯ ಆಗುವುದಿಲ್ಲ. ಸಿನಿಮಾದ ಎಂದರೆ ಕಥೆಯೇ ಜೀವಾಳ ಎಂದು ತಿಳಿಸಿದ್ದರು.
ಇದೀಗ ವೀರಪ್ಪನ್ ಮಗಳು ಚಿತ್ರರಂಗಕ್ಕೆ ದಾಪುಗಾಲು ಇಟ್ಟಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ವಿಜಯಲಕ್ಷ್ಮೀ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ಆಗುತ್ತಿದೆ ಎಂದು ನಿರ್ದೇಶಕರು ಹೇಳಿದ್ದರು.
ಇದೀಗ ಅದೇ ವಿಜಯಲಕ್ಷ್ಮಿ ಅವರು ಬೆಂಗಳೂರಿನಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ಹಂಚುವ ಮೂಲಕ ಗಮನ ಸೆಳೆದಿದ್ದಾರೆ. ಮನೆಯಲ್ಲಿ ಒಬ್ಬರು ಕೆಟ್ಟವರು ಇರುತ್ತಾರೆ ಅಂದರೆ ಎನ್ನರನ್ನು ಅದೇ ರೀತಿ ನೋಡುವುದು ತಪ್ಪು. ಆದ್ದರಿಂದ ವಿಜಯಲಕ್ಷ್ಮಿಗೂ ಕೂಡ ಜನರು ಸಾಥ್ ನೀಡಬೇಕೆಂಬುದು ಹಲವರ ಅಭಿಪ್ರಾಯಗಳಾಗಿವೆ.












Click it and Unblock the Notifications