ಜೂ.17ರಂದು ವೀರ ಸಾವರ್ಕರ್‌ರ 'ಹಿಂದುತ್ವ' ಕನ್ನಡ ಕೃತಿ ಬಿಡುಗಡೆ

ಬೆಂಗಳೂರು, ಜೂನ್ 16: ಸಮೃದ್ಧ ಸಾಹಿತ್ಯ ಪ್ರಕಾಶನದ ವತಿಯಿಂದ ವೀರ ಸಾವರ್ಕರ್ ಅವರ 'ಹಿಂದುತ್ವ' ಕೃತಿಯನ್ನು ಡಾ.ಜಿ.ಬಿ.ಹರೀಶ್ ಕನ್ನಡಕ್ಕೆ ಅನುವಾದಿಸಿದ್ದು, ಅದರ ಬಿಡುಗಡೆ ಸಮಾರಂಭ ಜೂನ್17 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ನಡೆಯಲಿದೆ.

ಕವಿ ಎಂ.ಎನ್. ವ್ಯಾಸರಾವ್ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಹಾಗೂ ಅಂಕಣಕಾರ ರೋಹಿತ್ ಚಕ್ರತೀರ್ಥ ಅತಿಥಿಯಾಗಿದ್ದಾರೆ. ಲೇಖಕ ಜಿ.ಬಿ. ಹರೀಶ ಉಪಸ್ಥಿತರಿರಲಿದ್ದಾರೆ. ಕೃತಿಕಾರ ಡಾ.ಜಿ.ಬಿ. ಉಪಸ್ಥಿತರಿರುವರು.

ಇನ್ನೊಂದು ವಿಶೇಷವೆಂದರೆ ಹಿಂದುತ್ವ ಪುಸ್ತಕದ ಪ್ರಥಮ ಮುದ್ರಣ ಬಿಡುಗಡೆಗೆ ಮುಂಚೆಯೇ ಖಾಲಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಬುಕ್‌ ಮಾಡಿ 800ಕ್ಕೂ ಹೆಚ್ಚು ಪುಸ್ತಕಗಳು ಖಾಲಿಯಾಗಿದೆ. ಅಂದು ಬಿಡುಗಡೆಯ ದಿನಕ್ಕಾಗಿ 200 ಪ್ರತಿಗಳನ್ನು ಶೇಖರಿಸಲಿಡಲಾಗಿದೆ. ಇದು ಅಪರೂಪದ ಸಂಗತಿ ಎಂದು ಸಮೃದ್ಧ ಸಾಹಿತ್ಯ ಪ್ರಕಾಶನ ಸಂತಸ ವ್ಯಕ್ತಪಡಿಸಿದೆ.

Veer Savarkar Hindutva now in Kannada

ಏನು? ಹಿಂದುತ್ವ ಕೃತಿ ಬಿಡುಗಡೆ
ಎಲ್ಲಿ? ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2 ನೇ ಹಂತ, ಬಿವಿ ಕಾರಂತ್ ರಸ್ತೆ
ಯಾವಾಗ?ಜೂನ್ 17, ಭಾನುವಾರ ಬೆಳಗ್ಗೆ 10.30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+