84ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷ ಸ್ಥಾನಕ್ಕೆ ವೀಣಾ ಶಾಂತೇಶ್ವರ ಹೆಸರು
ಬೆಂಗಳೂರು, ಆಗಸ್ಟ್ 21: ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ ವಿಚಾರ ಇದೀಗ ಎರಡು ಹೆಸರುಗಳು ಕೇಳಿಬಂದಿವೆ.
ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಧಾರವಾಡದ ವೀಣಾ ಶಾಂತೇಶ್ವರ, ಕಾಸರಗೋಡಿನ ಸಾ.ರಾ. ಅಬೂಬಕರ್ ಅವರ ಹೆಸರುಗಳು ಕೇಳಿಬಂದಿದೆ.ಹಿರಿಯರಾದ ಚಿದಾನಂದಮೂರ್ತಿ, ಎಚ್‌ಎಸ್ ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ವೆಂಕಟಾಚಲಶಾಸ್ತ್ರಿ, ಎಸ್, ಶೆಟ್ಟರ್, ಗುರುಲಿಂಗ ಕಾಪ್ಸೆ ಅವರ ಹೆಸರುಗಳು ಆಯ್ಕೆ ಪಟ್ಟಿಯಲ್ಲಿದೆ.

ಈ ಬಗ್ಗೆ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ವೀಣಾ ಶಾಂತೇಶ್ವರ ಅವರ ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತ ಎಂದು ಕಸಾಪ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದೀಗ ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರು ಯಾರಾಗುತ್ತಾರೆ ಎನ್ನುವ ಕುತೂಹಲ ಮುಂದುವರೆದಿದೆ ಶೀಘ್ರವೇ ಈ ಕುತೂಹಲಕ್ಕೆ ತೆರೆಬೀಳಲಿದೆ.












Click it and Unblock the Notifications